– ಮಡೆನೂರು ಮನು ವಿರುದ್ಧ ಗಂಭೀರ ಆರೋಪ
– ಚಿತ್ರ ರಿಲೀಸ್ ಆಗೋ ಮುನ್ನಾ ದಿನ ರೇಪ್ ಕೇಸ್
ಬೆಂಗಳೂರು: ಸಂಭಾವನೆ ನೀಡುವ ನೆಪದಲ್ಲಿ ಬಂದು ನನ್ನ ಮೇಲೆ ಕಾಮಿಡಿ ಕಿಲಾಡಿ ಖ್ಯಾತಿಯ ಮಡೆನೂರು ಮನು (Madenur Manu) ಅತ್ಯಾಚಾರ (Rape) ಎಸಗಿದ್ದಾನೆ ಎಂದು ಆರೋಪಿಸಿ ಸಹ ಕಲಾವಿದೆ ದೂರು ನೀಡಿದ್ದಾರೆ.
ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ನಟನ ವಿರುದ್ಧ ಸಹ ಕಲಾವಿದೆ ಅತ್ಯಾಚಾರ ಪ್ರಕರಣ ದಾಖಲಿಸಿದ್ದಾರೆ. ರೇಪ್ ಕೇಸ್ ದಾಖಲಾಗುತ್ತಿದ್ದಂತೆ ಮಡೆನೂರು ಮನು ನಾಪತ್ತೆಯಾಗಿದ್ದು ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ಮಡೆನೂರು ಮನು ಕುಲದಲ್ಲಿ ಕೀಳ್ಯಾವುದೊ ಚಿತ್ರದಲ್ಲಿ ನಾಯಕ ನಟನಾಗಿ ಅಭಿನಯಿಸಿದ್ದರು. ನಾಳೆ ಚಿತ್ರ ರಾಜ್ಯಾದ್ಯಂತ ತೆರೆ ಕಾಣುತ್ತಿದೆ. ಈ ಹೊತ್ತಲ್ಲೇ ನಟನ ಮೇಲೆ ಎಫ್‌ಐಆರ್ ದಾಖಲಾಗಿದೆ. ಇದನ್ನೂ ಓದಿ: ಮೈಸೂರು ಸ್ಯಾಂಡಲ್ ಸೋಪ್‌ಗೆ ಮಿಲ್ಕಿ ಬ್ಯೂಟಿ ರಾಯಭಾರಿ – ಬರೋಬ್ಬರಿ 6.20 ಕೋಟಿ ಸಂಭಾವನೆ
ದೂರಿನಲ್ಲಿ ಏನಿದೆ?
ಬೆಂಗಳೂರಿನ ಕಾಮಾಕ್ಯದಲ್ಲಿ ಸುಮಾರು 5 ವರ್ಷಗಳ ಕಾಲ ವಾಸವಾಗಿದ್ದೆ. 2018 ರಲ್ಲಿ ಖಾಸಗಿ ವಾಹಿನಿಯ ಕಾಮಿಡಿ ಕಿಲಾಡಿ ಕಾರ್ಯಕ್ರಮದಲ್ಲಿ ಮಡೆನೂರು ಮನು ನನಗೆ ಪರಿಚಯ ಆಗಿ ಇಬ್ಬರು ಸ್ನೇಹಿತರಾಗಿದ್ದೆವು. ನಾಗರಭಾವಿಯಲ್ಲಿ ಬಾಡಿಗೆ ಮನೆಗೆ ಶಿಫ್ಟ್ ಆಗಿದ್ದೆ. ಈ ಮನೆಯನ್ನು ಮಡೆನೂರು ಮನು ಹುಡುಕಿಕೊಟ್ಟಿದ್ದ. ಇದನ್ನೂ ಓದಿ: ರಾಜ್ಯ ಸರ್ಕಾರಕ್ಕೆ ಹಿನ್ನಡೆ – ರಾಜಮನೆತನಕ್ಕೆ 3,400 ಕೋಟಿಯ ಟಿಡಿಆರ್ ನೀಡಲು ಸುಪ್ರೀಂ ಆದೇಶ
ಮಡೆನೂರು ಮನುಗೆ ಈಗಾಗಲೇ ಮದುವೆಯಾಗಿದ್ದು ಹೆಣ್ಣು ಮಗು ಇದೆ. 2022ರ ನವೆಂಬರ್ 29 ರಂದು ಶಿವಮೊಗ್ಗದ ಶಿಕಾರಿಪುರದಲ್ಲಿ ಕಾರ್ಯಕ್ರಮ ಇತ್ತು. ಈ ಕಾರ್ಯಕ್ರಮಕ್ಕೆ ನನ್ನನ್ನು ಹಾಗೂ ಇತರೇ ಕಾಮಿಡಿ ನಟರನ್ನು ಕರೆದುಕೊಂಡು ಹೋಗಿ ಅಲ್ಲಿ ಒಂದು ಹಾಸ್ಯ ಕಾರ್ಯಕ್ರಮ ಮಾಡಿದ್ದ.
ಈ ಕಾರ್ಯಕ್ರಮ ಮುಗಿದ ಮೇಲೆ ನಾನು ಶಿಕಾರಿಪುರದ ಹೋಟೆಲ್ ರೂಮಿನಲ್ಲಿದ್ದಾಗ ನನಗೆ ಸಂಭಾವನೆ ನೀಡುವ ನೆಪದಲ್ಲಿ ರೂಮಿಗೆ ಬಂದು ನನ್ನ ಮೇಲೆ ಆತ್ಯಾಚಾರ ಮಾಡಿದ್ದ. ಇದಾದ ಮೇಲೆ 2022ರ ಡಿಸೆಂಬರ್‌ನಲ್ಲಿ ನನ್ನ ಮನೆಗೆ ಬಂದು ನನ್ನ ವಿರೋಧದ ನಡುವೆ ನನಗೆ ತಾಳಿ ಕಟ್ಟಿದ್ದ. ನಂತರ ಅದೇ ಮನೆಯಲ್ಲಿ ಮನು ನನ್ನ ಮೇಲೆ ಹಲವಾರು ಬಾರಿ ಆತ್ಯಾಚಾರ ಎಸಗಿದ್ದ.
ನಾನು ಪ್ರಗ್ನೆಂಟ್ ಆದ ವಿಚಾರ ತಿಳಿದ ಮನು ಮನೆಗೆ ಬಂದು ಗರ್ಭಪಾತ ಆಗುವ ಮಾತ್ರೆ ನೀಡಿದ್ದ. ನಂತರ ನಾನು ಮತ್ತೆ ನಾನು ಪ್ರಗ್ನೆಂಟ್ ಆಗಿದ್ದು, ಮತ್ತೆ ಅದೇ ರೀತಿ ನನಗೆ ಗರ್ಭಪಾತ ಮಾಡಿಸಿದ್ದ. ಮನು ಈ ಮನೆಯಲ್ಲಿ ಬಾಡಿಗೆಗೆ ಮಾಡಿ ಈ ಮನೆಯಲ್ಲಿಯೂ ಸಹ ನನ್ನ ಮೇಲೆ ಅತ್ಯಾಚಾರ ಮಾಡಿ ನನ್ನ ಖಾಸಗಿ ವಿಡಿಯೋವನ್ನು ಫೋನಿನಲ್ಲಿ ರೆಕಾರ್ಡ್ ಮಾಡಿದ್ದ. ಅಷ್ಟೇ ಅಲ್ಲದೇ ಹೊಡೆದು ಹಲ್ಲೆ ಮಾಡಿ ಈ ವಿಚಾರವನ್ನು ಯಾರಿಗೂ ಹೇಳಬೇಡ ಎಂದು ಬೆದರಿಕೆ ಹಾಕಿದ್ದ.
ಮನು ನಾಯಕ ನಟನಾಗಿ ಸಿನಿಮಾ ಮಾಡಲು ಒಪ್ಪಿಕೊಂಡಿದ್ದು, ಇದಕ್ಕೆ ನಾನು ಸುಮಾರು ಲಕ್ಷಾಂತರ ರೂಪಾಯಿಗಳನ್ನು ನೀಡಿದ್ದೇನೆ. ನನ್ನ ಮೇಲೆ ಆತ್ಯಾಚಾರ ಮಾಡಿ, ಮದುವೆ ಮಾಡಿಕೊಂಡಂತೆ ನಾಟಕವಾಡಿ ಗರ್ಭಪಾತ ಮಾಡಿಸಿ ಮದುವೆ ಮಾಡಿಕೊಳ್ಳದೇ ಮೋಸ ಮಾಡಿದ್ದಾನೆ. ಪ್ರಶ್ನಿಸಿದ್ದಕ್ಕೆ ನನ್ನ ಮೇಲೆ ಹಲ್ಲೆ ಮಾಡಿ ಪ್ರಾಣ ಬೆದರಿಕೆಯನ್ನು ಹಾಕಿರುವ ಮಡೆನೂರು ಮನು ಮೇಲೆ ಕ್ರಮಕೈಗೊಳ್ಳೇಬೇಕೆಂದು ಮನವಿ ಮಾಡುತ್ತಿದ್ದೇನೆ.