ವಾಷಿಂಗ್ಟನ್: ಇಸ್ರೇಲ್ ರಾಯಭಾರ (Israel Embassy) ಕಚೇರಿಯ ಇಬ್ಬರು ಅಧಿಕಾರಿಗಳನ್ನು ಗುಂಡಿಟ್ಟು ಹತ್ಯೆ ಮಾಡಿದ ಘಟನೆ ಅಮೆರಿಕದ (USA) ರಾಜಧಾನಿ ವಾಷಿಂಗ್ಟನ್ ಡಿ.ಸಿಯಲ್ಲಿ (Washington DC) ನಡೆದಿದೆ.
ವಾಷಿಂಗ್ಟನ್ ಡಿ.ಸಿಯ ವಾಯವ್ಯ ಭಾಗದಲ್ಲಿರುವ ಜೆವೀಶ್ ಮ್ಯೂಸಿಯಂ ಮುಂದೆ ಬುಧವಾರ ರಾತ್ರಿ ನಡೆದ ದಾಳಿಯಲ್ಲಿ ರಾಯಭಾರ ಕಚೇರಿಯ ಪುರುಷ ಅಧಿಕಾರಿ ಹಾಗೂ ಮಹಿಳಾ ಅಧಿಕಾರಿ ಮೃತಪಟ್ಟಿದ್ದಾರೆ. ಇದನ್ನೂ ಓದಿ: ಮನೆಯ ಒಳಗಡೆ ನುಗ್ಗಿ ಅಪರಿಚಿತ ವ್ಯಕ್ತಿಯಿಂದ ಲಷ್ಕರ್ ಉಗ್ರನಿಗೆ ಗುಂಡೇಟು!
BREAKING: Spokesperson at #Israel embassy in #Washington: “Two staff members of the embassy were shot and murdered this evening while attending a #Jewish event. We have full faith in US law enforcement authorities.”pic.twitter.com/0sRGyRvxxx #FBI #SecretService #Mossad #Terrorism
— Jewish News Agency (™) (@JewishNewsUSA) May 22, 2025
ಜೆವೀಶ್ ಮ್ಯೂಸಿಯಂ ಮುಂದೆ ಬುಧವಾರ ರಾತ್ರಿ ಕಾರ್ಯಕ್ರಮ ಆಯೋಜನೆಗೊಂಡಿತ್ತು. ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ಹೊರಡುತ್ತಿದ್ದಾಗ ಗುಂಡಿನ ದಾಳಿಯಾಗಿದೆ. ಇದನ್ನೂ ಓದಿ: ಜೈಶಂಕರ್ ಕರೆ ಬೆನ್ನಲ್ಲೇ ತಾಲಿಬಾನ್ ವಿದೇಶಾಂಗ ಸಚಿವರನ್ನೇ ಬೀಜಿಂಗ್‌ಗೆ ಕರೆಸಿ ಪಾಕ್ ಜೊತೆ ಕೈ ಕುಲುಕಿಸಿದ ಚೀನಾ!
ಚಿಕಾಗೋದ 30 ವರ್ಷದ ಎಲಿಯಾಸ್ ರೊಡ್ರಿಗಸ್ ಎಂಬಾತನ್ನು ಪೊಲೀಸರು ವಶಕ್ಕೆ ಪಡೆಯಲಾಗಿದೆ. ಗುಂಡು ಹಾರಿಸುವ ಮೊದಲು ಆತ ಮ್ಯೂಸಿಯಂ ಬಳಿ ಓಡಾಡುತ್ತಿದ್ದ. ಲಿಯಾಸ್ ರೊಡ್ರಿಗಸ್ ಫ್ರೀ ಪ್ಯಾಲೆಸ್ತೀನ್ ಎಂದು ಘೋಷಣೆ ಕೂಗುತ್ತಿರುವ ದೃಶ್ಯ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಇಸ್ರೇಲಿ ರಾಯಭಾರಿ ಯೆಚಿಯಲ್ ಲೀಟರ್ ಅವರು ಪ್ರತಿಕ್ರಿಯಿಸಿ ಹತ್ಯೆಯಾದ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಹತ್ಯೆಯಾದ ಪುರುಷ ಅಧಿಕಾರಿ ಮುಂದಿನ ವಾರ ಜೆರುಸಲೆಮ್‌ನಲ್ಲಿ ಪ್ರಪೋಸ್ ಮಾಡುವ ಉದ್ದೇಶದಿಂದ ಉಂಗುರವನ್ನು ಖರೀದಿಸಿದ್ದರು ಎಂದು ಹೇಳಿದರು.
ಈ ಘಟನೆಯನ್ನು ಖಂಡಿಸಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ದ್ವೇಷ ಮತ್ತು ಮೂಲಭೂತವಾದಕ್ಕೆ ಅಮೆರಿಕದಲ್ಲಿ ಸ್ಥಾನವಿಲ್ಲ ಎಂದು ಹೇಳಿದ್ದಾರೆ.