ಬೆಂಗಳೂರು: ಹಿರಿಯ ಐಪಿಎಸ್ ಅಧಿಕಾರಿ ಕನ್ನಡಿಗ ಎಂ.ಎ.ಸಲೀಂ (M.A.Saleem) ಅವರನ್ನು ರಾಜ್ಯದ ನೂತನ ಪ್ರಭಾರ ಪೊಲೀಸ್ ಮಹಾನಿರ್ದೇಶಕರನ್ನಾಗಿ ನೇಮಿಸಿ ರಾಜ್ಯ ಸರ್ಕಾರ ಆದೇಶಿಸಿದೆ.
ಅಲೋಕ್ ಮೋಹನ್ ಅವರ ಜಾಗಕ್ಕೆ ಸಲೀಂ ಅಹಮದ್ ನೇಮಕಗೊಂಡಿದ್ದಾರೆ. ರಾಜ್ಯ ಪೊಲೀಸ್ ಮಹಾನಿರ್ದೇಶಕರಾಗಿದ್ದ ಅಲೋಕ್ ಮೋಹನ್ ಅವರು ಏ.30ರಂದು ನಿವೃತ್ತರಾಗಿದ್ದರು. ಮೇ 21 ರ ವರೆಗೆ ಅವರ ಅವಧಿಯನ್ನು ಸರ್ಕಾರ ವಿಸ್ತರಿಸಿತ್ತು.
ಕೇಂದ್ರ ಲೋಕಸೇವಾ ಆಯೋಗದಿಂದ ಮೂವರು ಶಾರ್ಟ್ ಲಿಸ್ಟ್ ಬಾರದ ಹಿನ್ನೆಲೆ ಪೂರ್ಣಾವಧಿ ಡಿಜಿ/ಐಜಿಪಿ ಆದೇಶ ಮಾಡದೇ ಸರ್ಕಾರ ಹೆಚ್ಚುವರಿ ಹೊಣೆ ಆದೇಶ ಮಾಡಿದೆ. ತಾಂತ್ರಿಕ ಸಮಸ್ಯೆ, ಕಾನೂನು ಅಡ್ಡಿ ಹಿನ್ನೆಲೆಯಲ್ಲಿ ಸರ್ಕಾರ ಜಾಣ ನಡೆ ಅನುಸರಿಸಿದೆ.