ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಕಳೆದ 2 ದಿನಗಳಲ್ಲಿ ಭಾರೀ ಮಳೆಯಾಗಿದ್ದು, ನಗರದ ರಸ್ತೆಗಳಲ್ಲಿ ನದಿಯಂತೆ ನೀರು ಹರಿಯುತ್ತಿದೆ. ಬೆಂಗಳೂರಿನ ಈ ಪರಿಸ್ಥಿತಿಯನ್ನು ಊಬರ್ ಕಂಪನಿ(Ubar) ವ್ಯಂಗ್ಯ ಮಾಡಿದೆ.
View this post on Instagram
ಹೌದು, ಬೆಂಗಳೂರಿಗೆ(Bengaluru) ಟೈಟಾನಿಕ್(Titanic Boat) ಬೋಟ್‌ನ ವ್ಯವಸ್ಥೆಯಿದೆ ಎನ್ನುವ ಫೋಟೋವನ್ನು ತನ್ನ ಇನ್‌ಸ್ಟಾಗ್ರಾಂ ಹಂಚಿಕೊಂಡಿದೆ. ಈ ರೀತಿಯಾಗಿ ಬೆಂಗಳೂರಿನ ತುಂಬೆಲ್ಲಾ ರಸ್ತೆಗಳಲ್ಲಿ ನೀರು ತುಂಬಿಕೊಂಡಿರುವುದನ್ನು ಊಬರ್ ಕಂಪನಿಯು ಲೇವಡಿ ಮಾಡಿದೆ. ಇದನ್ನೂ ಓದಿ: ಮೆಟ್ರೋದಲ್ಲಿ ಪ್ರಯಾಣಿಸುವ ಯುವತಿಯರ ಆಕ್ಷೇಪಾರ್ಹ ವಿಡಿಯೋ ಅಪ್ಲೋಡ್ – ಪೇಜ್ ವಿರುದ್ಧ ಎಫ್‌ಐಆರ್
ಊಬರ್ ಸರ್ವಿಸ್ ಲಿಸ್ಟ್ನಲ್ಲಿ ಈ ಫೋಟೋ ಹಾಕಿದ್ದು, ಒಂದು ನಿಮಿಷದಲ್ಲಿ ವೇಗವಾಗಿ ಟೈಟಾನಿಕ್ ಬೋಟ್ ಸೇವೆ ಸಿಗಲಿದೆ. ಕೇವಲ 149 ರೂ. ಹಣಕ್ಕೆ ಈ ಸೇವೆ ಒದಗಿಸಲಾಗುವುದು ಎಂದು ಬೆಂಗಳೂರಿನ ಸ್ಥಿತಿಯನ್ನ ಆಡಿಕೊಂಡಿದ್ದಾರೆ. ಈ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ. ಇದನ್ನೂ ಓದಿ: ಹೈವೇಯಲ್ಲಿ ನಿಂತ ಬಸ್ಸನ್ನು ತಳ್ಳಿದ ಮಹಿಳೆಯರು
ಕಳೆದ ಎರಡು ದಿನಗಳಲ್ಲಿ ಸುರಿದ ಮಳೆಯಿಂದ ಬೆಂಗಳೂರಿನ ಹಲವು ಪ್ರದೇಶಗಳು ಜಲಾವೃತವಾಗಿದ್ದವು. ಇನ್ನು ಕೆಲವು ರಸ್ತೆಗಳಲ್ಲಿ ನೀರು ತುಂಬಿಕೊಂಡು ವಾಹನ ಸವಾರರು ಪರದಾಡಿದರು. ಇದೀಗ ಬೆಂಗಳೂರಿನ ಈ ಸ್ಥಿತಿಯನ್ನು ಊಬರ್ ಕಂಪನಿ ಟ್ರೋಲ್ ಮಾಡಿದೆ.