ಬೆಂಗಳೂರು ರಣಮಳೆಗೆ ಮುಳುಗಿದ `ಬೆಳ್ಳುಳ್ಳಿ ಕಬಾಬ್’ ಹೋಟೆಲ್

Public TV
2 Min Read
bellulli kabab 4

ಬೆಂಗಳೂರು: ರಾಜಧಾನಿಗೆ ಅದೇನಾಗಿದ್ಯೋ ಕಾಣೆ… ಸಣ್ಣ ಸಣ್ಣ ಮಳೆಗೂ ಬೆಂಗಳೂರು (Bengaluru) ಪರಿತಪಿಸುವಂತಹ ಪರಿಸ್ಥಿತಿ ಬರುತ್ತಿದೆ. ಮೊನ್ನೆ ರಾತ್ರಿಯಿಂದ ಸುರಿಯುತ್ತಿರೋ ಮಳೆಯಿಂದಾಗಿ ಬೆಂಗಳೂರಿನ ಹಲವೆಡೆ ರಸ್ತೆಗಳು ಜಲಮಯವಾಗಿದೆ. ಅದೇ ರೀತಿ ನಗರದ ಶಿವಾನಂದ ಸರ್ಕಲ್‌ ಬಳಿಯಿರುವ ʻಬೆಳ್ಳುಳ್ಳಿ ಕಬಾಬ್ʼ ಖ್ಯಾತಿಯ ಚಂದ್ರು ಹೋಟೆಲ್‌ (Chandru Bellulli Kabab Hotel) ಮಳೆ ನೀರಿನಿಂದ ಜಲಾವೃತವಾಗಿದ್ದು, ಭಾರೀ ನಷ್ಟ ತಂದೊಡ್ಡಿದೆ.

ಬೆಳ್ಳುಳ್ಳಿ ಕಬಾಬ್..! ಒನ್ ಮೋರ್ ಒನ್ ಮೋರ್ ಅಂತಿರಬೇಕು.. ಚಟಪಟ… ಚಟಪಟ.. ಅನ್ನೋ ಡೈಲಾಗ್ ಹೊಡೆದು ಸಿಕ್ಕಾಪಟ್ಟೆ ಫೇಮಸ್ ಆಗಿರುವ ಮಳೆಯಿಂದ ನಷ್ಟ ಅನುಭವಿಸಿದ್ದಾರೆ. ಬೆಂಗಳೂರು ಕೆಫೆ ಕಟ್ಟದಲ್ಲಿರುವ ಚಂದ್ರು ಮಾಲೀಕತ್ವದ ಹೋಟೆಲ್ ಬೇಸ್ಮೆಂಟ್‌ ಸಂಪೂರ್ಣ ಜಲಾವೃತವಾಗಿದೆ. ಹೀಗಾಗಿ ಕಳೆದ 2 ದಿನಗಳಿಂದ ಹೋಟೆಲ್‌ ಬಂದ್‌ ಆಗಿದೆ. ಅಲ್ಲದೇ ಸುಮಾರು 15 ಲಕ್ಷ ರೂ. ವ್ಯಾಪಾರ ಲಾಸ್ ಆಗಿದೆ ಅಂತ ಚಂದ್ರು ಅವಲತ್ತುಕೊಂಡಿದ್ದಾರೆ. ಇದನ್ನೂ ಓದಿ: ಉತ್ತರ ಕನ್ನಡ ಜಿಲ್ಲೆಯಲ್ಲಿ ಅಬ್ಬರಿಸಿದ ಮಳೆ; ಕುಮಟಾ-ಸಿದ್ದಾಪುರ ರಸ್ತೆ ಜಲಾವೃತ

bellulli kabab 3

ಈ ಕುರಿತು ʻಪಬ್ಲಿಕ್‌ ಟಿವಿʼ (Public TV) ಜೊತೆಗೆ ಮಾತನಾಡಿರುವ ಹೋಟೆಲ್‌ ಮಾಲೀಕ ಚಂದ್ರು, ಹೋಟೆಲ್‌ ಓಪನ್‌ ಮಾಡಿ ನಾಲ್ಕು ವರ್ಷ ಆಯ್ತು. ಇದುವರೆಗೆ ಇಂತಹ ಸಮಸ್ಯೆ ಇರಲಿಲ್ಲ. ಆದ್ರೆ ಮೊನ್ನೆ, ನಿನ್ನೆ ರಾತ್ರಿ ಸುರಿದ ಮಳೆಗೆ ರಸ್ತೆಯಲ್ಲಿದ್ದ ನೀರೆಲ್ಲ ಬೇಸ್ಮೆಂಟ್‌ಗೆ ತುಂಬಿಕೊಂಡಿದೆ. ಬೆಳಗ್ಗೆ 7 ಗಂಟೆಯಿಂದ ಹೊರತೆಗೆಯುತ್ತಿದ್ದರೂ ನೀರು ಖಾಲಿ ಆಗ್ತಿಲ್ಲ ಅಂತ ಹೇಳಿದ್ದಾರೆ. ಇದನ್ನೂ ಓದಿ: ಬೆಂಗ್ಳೂರಲ್ಲಿ ಮಳೆಯಿಂದ ಜನರ ಪರದಾಟ… ರಾಜ್ಯ ಸರ್ಕಾರದ ಮೋಜು – ಬಿವೈವಿ ಸಿಡಿಮಿಡಿ

bellulli kabab

ರಸ್ತೆಯಲ್ಲಿದ್ದ ಮಳೆ ನೀರಿನೊಂದಿಗೆ ಮರಳೂ ಸೇರಿಕೊಂಡಿದೆ, ಜನರೇಟರ್‌ ಆಯಿಲ್‌, ಡೀಸೆಲ್‌ ಎಲ್ಲ ಹೊರಗೆ ಬಂದುಬಿಟ್ಟಿದೆ. 10 ಎಲೆಕ್ಟ್ರಿಕ್‌ ಬೈಕ್‌ಗಳು ಕೆಟ್ಟುಹೋಗಿದೆ. ಜನರೇಟರ್‌ ಕೂಡ ಕೆಟ್ಟಿದೆ. ವಿಧಿಯಿಲ್ಲದೇ 2 ದಿನಗಳಿಂದ ಹೋಟೆಲ್‌ ಬಂದ್‌ ಮಾಡಬೇಕಾಗಿದೆ. ಎಲ್ಲಾ ಕ್ಲೀನ್‌ ಮಾಡಿದ ಬಳಿಕವೇ ಹೋಟೆಲ್‌ ಓಪನ್‌ ಮಾಡ್ತೀವಿ ಅಂತ ತಿಳಿಸಿದ್ದಾರೆ. ಇದನ್ನೂ ಓದಿ: ಕಲಬುರಗಿಯಲ್ಲಿ ಬಿರುಗಾಳಿ ಸಹಿತ ಧಾರಾಕಾರ ಮಳೆ – ಮನೆ ಕುಸಿತ

bellulli kabab 2

ಅಲ್ಲದೇ ಈ ಬಗ್ಗೆ ಈಗಾಗಲೇ ಅಧಿಕಾರಿಗಳಿಗೆ ದೂರು ಕೊಟ್ಟಿದ್ದೇವೆ. ಇಲ್ಲಿನ ರಸ್ತೆಗಳಲ್ಲಿ ನೀರಿನ ವಾಟಗಳಿಲ್ಲ. ಅದಕ್ಕೆ ರಸ್ತೆಯಲ್ಲಿನ ನೀರೆಲ್ಲ ಹೋಟೆಲ್‌ಗೆ ತುಂಬಿಕೊಂಡಿದೆ. ಅಧಿಕಾರಿಗಳು ಸೂಕ್ರ ಕ್ರಮ ಕೈಗೊಂಡು ಸರಿಪಡಿಸಬೇಕು ಅಂತ ಮನವಿ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: 1,600 ಕೋಟಿ ಕಾಮಗಾರಿ ನಡೆದಿದ್ದರೆ ಬೆಂಗ್ಳೂರಿಗೆ ಇಂತಹ ಸ್ಥಿತಿ ಬರುತ್ತಿರಲಿಲ್ಲ: ಆರ್. ಅಶೋಕ್ 

Share This Article