ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ಮಂಗಳವಾರ ಕೋರ್ಟ್‌ಗೆ ಹಾಜರಾಗಿದ್ದ ಆರೋಪಿಗಳಾದ ನಟ ದರ್ಶನ್ (Darshan) ಮತ್ತು ಪವಿತ್ರಾ ಗೌಡ (Pavithra Gowda) ಇಬ್ಬರೂ ಪರಸ್ಪರ ಭೇಟಿಯಾಗಿದ್ದಾರೆ.
ಕೋರ್ಟ್‌ನಲ್ಲಿ ವಿಚಾರಣೆ ಮುಗಿಸಿ ಲಿಫ್ಟ್‌ನಲ್ಲಿ ಬರುವಾಗ ಇಬ್ಬರೂ ಮುಖಾಮುಖಿಯಾದರು. ಈ ವೇಳೆ ಫೋನ್ ನಂಬರ್ ಕೊಡುವಂತೆ ಪವಿತ್ರಾಗೌಡ ಹಠ ಮಾಡಿದರು. ನಂಬರ್ ಬೇಕೇ ಬೇಕು ಎಂದು ದುಂಬಾಲು ಬಿದ್ದರು. ಕೈಹಿಡಿದು ಫೋನ್ ನಂಬರ್ ನೀಡುವಂತೆ ಒತ್ತಾಯಿಸಿದರು. ಕೊನೆಗೆ ತನ್ನ ಫೋನ್ ನಂಬರ್ ಅನ್ನು ದರ್ಶನ್, ಪವಿತ್ರಾ ಮೊಬೈಲ್ ಪಡೆದುಕೊಂಡು ಡಯಲ್ ಮಾಡಿಕೊಟ್ಟಿದ್ದಾರೆ. ಇದನ್ನೂ ಓದಿ: ವಿಚಾರಣೆ ಮುಗಿಸಿ ದರ್ಶನ್ ಕೈ ಹಿಡಿದುಕೊಂಡು ಹೊರ ಬಂದ ಪವಿತ್ರಾ ಗೌಡ
ರೇಣುಕಾಸ್ವಾಮಿ ಕೊಲೆ ಪ್ರಕರಣದ (Renukaswamy Murder Case) ಆರೋಪಿಗಳು ಇಂದು 57ನೇ ಸಿಸಿಹೆಚ್ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಪವಿತ್ರಾ ಗೌಡ ಬಿಳಿ ಬಣ್ಣದ ಸೀರೆ ಧರಿಸಿದ್ದರೆ ದರ್ಶನ್ ಕಪ್ಪು ಬಣ್ಣ ಡ್ರೆಸ್ ಧರಿಸಿದ್ದರು.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ಬಿಡುಗಡೆಯಾದ ಬಳಿಕ ದರ್ಶನ್ ಮತ್ತು ಪವಿತ್ರಾ ಗೌಡ ದೂರ ಆಗಿದ್ದರು. ಪವಿತ್ರಾ ಜೊತೆಗೆ ಸ್ವತಃ ದರ್ಶನ್ ಅಂತರ ಕಾಯ್ದುಕೊಂಡಿದ್ದರು. ಈ ಹಿಂದೆ ಕೋರ್ಟ್ ಆಗಿಮಿಸಿದ್ದಾಗ ಪವಿತ್ರಾ ಜೊತೆ ದರ್ಶನ್ ಮಾತನಾಡುತ್ತಿರಲಿಲ್ಲ. ಇದನ್ನೂ ಓದಿ: ಭಾರತ ವಿರೋಧಿ ಚಟುವಟಿಕೆ – ಬ್ರಿಟಿಷ್ ಕಾಶ್ಮೀರಿ ಪ್ರೊಫೆಸರ್ ಸಾಗರೋತ್ತರ ಪೌರತ್ವ ರದ್ದು
ಸದ್ಯ ದರ್ಶನ್ ‘ಡೆವಿಲ್’ ಸಿನಿಮಾ ಶೂಟಿಂಗ್ ಬ್ಯುಸಿಯಲ್ಲಿದ್ದಾರೆ. ಪವಿತ್ರಾ ಗೌಡ ಸ್ವಂತ ಬಿಸಿನೆಸ್‌ನಲ್ಲಿ ತೊಡಗಿಸಿಕೊಂಡಿದ್ದಾರೆ. ಈಚೆಗಷ್ಟೇ ದರ್ಶನ್ ಮತ್ತು ವಿಜಯಲಕ್ಷ್ಮಿ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡರು. ಇತ್ತ ಪವಿತ್ರಾ ಹಲವು ದೇವಸ್ಥಾನಗಳಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಕೆ ಮಾಡುತ್ತಿದ್ದಾರೆ.