ಸಿನಿಮಾ ಫ್ಲಾಪ್ ಆದರೂ ಕ್ಯಾರೆ ಎನ್ನದೆ ಬಾಲಿವುಡ್ ನಟಿ ಖುಷಿ ಕಪೂರ್ (Kushi Kapoor) ವೆಕೇಷನ್‌ನಲ್ಲಿ ಬ್ಯುಸಿಯಾಗಿದ್ದಾರೆ. ಬಿಕಿನಿ (Bikini) ಧರಿಸಿ ಬೀಚ್ ಬಳಿ ನಟಿ ಖುಷಿ ಬೋಲ್ಡ್ ಆಗಿ ಪೋಸ್ ಕೊಟ್ಟಿದ್ದಾರೆ. ಬಿಕಿನಿಯಲ್ಲಿರುವ ನಟಿಯನ್ನು ನೋಡಿ ಫ್ಯಾನ್ಸ್ ಫಿದಾ ಆಗಿದ್ದಾರೆ. ಇದನ್ನೂ ಓದಿ:‘ಲಕ್ಷ್ಮಿ ಬಾರಮ್ಮ’ ನಟನ ಅದ್ಧೂರಿ ಆರತಕ್ಷತೆ- ಸಿನಿ ತಾರೆಯರು ಭಾಗಿ
ಫ್ರೆಂಡ್ಸ್ ಜೊತೆ ನಟಿ ವೆಕೇಷನ್‌ಗೆ ತೆರಳಿದ್ದಾರೆ. ಬಿಕಿನಿ ಧರಿಸಿ ಸಖತ್ ಹಾಟ್ ಆಗಿ ಖುಷಿ ಕಾಣಿಸಿಕೊಂಡಿದ್ದಾರೆ. ನಟಿ ವಿವಿಧ ಭಂಗಿಗಳ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅವರ ಫೋಟೋಗೆ ಬಗೆ ಬಗೆಯ ಕಾಮೆಂಟ್‌ಗಳು ಹರಿದು ಬರುತ್ತಿವೆ. ಇದನ್ನೂ ಓದಿ:‘ಸಿಕಂದರ್’ ಸೋಲಿನ ಬಳಿಕ ಆರ್ಮಿ ಆಫೀಸರ್ ಪಾತ್ರದಲ್ಲಿ ಸಲ್ಮಾನ್ ಖಾನ್?
ಹಿರಿಯ ನಟಿ ಶ್ರೀದೇವಿ (Sridevi) ಪುತ್ರಿ ಖುಷಿಗೂ ನೆಪೋಟಿಸಂ ಕಿಡ್ ಎಂದು ಟೀಕಿಸುತ್ತಿದ್ದಾರೆ. ಇತ್ತೀಚೆಗೆ ತೆರೆಕಂಡ 2 ಸಿನಿಮಾಗಳು ಗಲ್ಲಾಪೆಟ್ಟಿಗೆಯಲ್ಲಿ ಮಕಾಡೆ ಮಲಗಿವೆ. ಲವ್‌ಯಾಪಾ, ನಾದಾನಿಯಾ ಸಿನಿಮಾಗಳು ಸೋತಿವೆ. ಸೆಲೆಬ್ರಿಟಿ ಕಿಡ್‌ನ ಸಿನಿಮಾಗೆ ಹಾಕಿಕೊಂಡರೆ ಹೀಗೆ ಎಂದು ಟೀಕಿಸುತ್ತಿದ್ದಾರೆ. ಪ್ರತಿಭೆ ಇಲ್ಲದ ಹುಡುಗಿಗೆ ಯಾಕೆ ಚಾನ್ಸ್ ಕೊಡ್ತೀರಾ ಎಂದು ಫ್ಯಾನ್ಸ್ ಕಾಮೆಂಟ್ ಮಾಡ್ತಿದ್ದಾರೆ. ಹೀಗಿರುವಾಗ ಸಿನಿಮಾ ಸೋಲಿನ ಬಗ್ಗೆ ತಲೆ ಕೆಡಿಸಿಕೊಳ್ಳದೆ ವೆಕೇಷನ್ ಹೋಗಿರುವ ನಟಿಯನ್ನು ಫ್ಯಾನ್ಸ್ ತರಾಟೆಗೆ ತೆಗೆದುಕೊಂಡಿದ್ದಾರೆ.
ಸಿನಿಮಾಗಳು ಸೋತಿದ್ರೂ ಖುಷಿಗೆ ಅವಕಾಶಗಳೇನು ಕಡಿಮೆಯಾಗಿಲ್ಲ. ಶ್ರೀದೇವಿ ಮತ್ತು ಬೋನಿ ಕಪೂರ್ ಮಗಳು ಅನ್ನೋ ಕಾರಣಕ್ಕೆ ನಟಿಗೆ ಚಾನ್ಸ್ ಸಿಕ್ತಿದೆ. ಜಾನ್ವಿ ಕಪೂರ್ ಸ್ಟಾರ್ ಕಿಡ್ ಆಗಿದ್ರೂ ಬ್ಯೂಟಿ ಜೊತೆ ಪ್ರತಿಭೆ ಇದೆ ಅನ್ನೋ ಕಾರಣಕ್ಕೆ ಫ್ಯಾನ್ಸ್ ಸುಮ್ಮನಿದ್ದಾರೆ.