ಪಾಕಿಸ್ತಾನ ಬೇಕಾ, ನರಕ ಬೇಕಾ ಅಂತ ಕೇಳಿದ್ರೆ ನಾನು ನರಕವನ್ನೇ ಆಯ್ಕೆ ಮಾಡ್ತೀನಿ: ಜಾವೇದ್‌ ಅಖ್ತರ್‌

Public TV
2 Min Read
JAVED AKHTAR

ನವದೆಹಲಿ: ಪಾಕಿಸ್ತಾನ (Pakistan) ಅಥವಾ ನರಕ ಇವೆರಡರಲ್ಲಿ ಯಾವುದು ಬೇಕು ಎಂದು ಕೇಳಿದರೆ, ನಾನು ನರಕವನ್ನೇ ಆಯ್ಕೆ ಮಾಡಿಕೊಳ್ಳುತ್ತೇನೆ ಎಂದು ಗೀತರಚನೆಕಾರ ಮತ್ತು ಚಿತ್ರಕಥೆಗಾರ ಜಾವೇದ್‌ ಅಖ್ತರ್‌ (Javed Akhtar) ಹೇಳಿದ್ದಾರೆ.

ಪಹಲ್ಗಾಮ್ ಭಯೋತ್ಪಾದಕ (Pahalgam Attack) ದಾಳಿ ಮತ್ತು ಆಪರೇಷನ್ ಸಿಂಧೂರ (Operation Sindoor), ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆ ಕುರಿತು ಮಾತನಾಡುವ ಸಂದರ್ಭದಲ್ಲಿ ಅಖ್ತರ್‌ ಈ ಹೇಳಿಕೆ ನೀಡಿದ್ದಾರೆ. ನರಕಕ್ಕೆ ಹೋಗುವುದು ಅಥವಾ ನೆರೆಯ ದೇಶಕ್ಕೆ (ಪಾಕಿಸ್ತಾನ) ಹೋಗುವ ಎರಡು ಆಯ್ಕೆ ನೀಡಿದರೆ, ನಾನು ನರಕವನ್ನೇ ಆಯ್ದುಕೊಳ್ಳುತ್ತೇನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಪಾಕ್ ಡ್ರೋನ್‌ಗಳು ‘ಆಕಾಶ’ದಲ್ಲೇ ಛಿದ್ರ – ಆಕಾಶ್ ಕ್ಷಿಪಣಿ ಪರಾಕ್ರಮ; ವಿಶೇಷತೆ ಏನು?

javed akhtar

ನೀವು ಒಂದು ಕಡೆಯ ಪರವಾಗಿ ಮಾತ್ರ ಮಾತನಾಡಿದರೆ, ಮತ್ತೊಂದು ಕಡೆಯವರನ್ನು ಅಸಂತೋಷಗೊಳ್ಳುತ್ತೀರಿ. ಆದರೆ ಎಲ್ಲರ ಪರವಾಗಿ ಮಾತನಾಡಿದರೆ, ನೀವು ಇನ್ನೂ ಹೆಚ್ಚಿನ ಜನರನ್ನು ಅಸಂತೋಷಗೊಳಿಸುತ್ತೀರಿ. ನನ್ನ ಎಕ್ಸ್‌ ಖಾತೆ ಮತ್ತು ವಾಟ್ಸಾಪ್‌ನಲ್ಲಿ ನನಗೆ ಎರಡೂ ಕಡೆಯಿಂದಲೂ ನಿಂದನೆಗಳು ಬರುತ್ತವೆ. ಬಹಳಷ್ಟು ಜನರು ನನ್ನನ್ನು ಮೆಚ್ಚುತ್ತಾರೆ, ಹೊಗಳುತ್ತಾರೆ ಮತ್ತು ನನ್ನ ಉತ್ಸಾಹವನ್ನು ಹೆಚ್ಚಿಸಲು ಸಹಾಯ ಮಾಡುತ್ತಾರೆ. ಆದರೆ ಎರಡೂ ಕಡೆಯ ಉಗ್ರಗಾಮಿಗಳು ನನ್ನ ಮೇಲೆ ಅಣಕಿಸುತ್ತಾರೆ ಎಂಬುದು ನಿಜ. ಏಕೆಂದರೆ ಒಂದು ಕಡೆ ನಿಂತರೆ, ನಾನು ಏನು ತಪ್ಪು ಮಾಡುತ್ತಿದ್ದೇನೆ ಎಂದು ಯೋಚಿಸಲು ಪ್ರಾರಂಭಿಸುತ್ತೇನೆ ಎಂದು ಅಖ್ತರ್‌ ಅಭಿಪ್ರಾಯಪಟ್ಟಿದ್ದಾರೆ.

ನೀನು ಪಾಕಿಸ್ತಾನ ಅಥವಾ ನರಕಕ್ಕೆ ಹೋಗುತ್ತೀಯ ಎಂದು ಕೇಳಿದರೆ ನಾನು ನರಕವನ್ನೇ ಆಯ್ಕೆ ಮಾಡಿಕೊಳ್ಳುತ್ತೇನೆ. ನಾನು ಮುಂಬೈಗೆ ಬಂದಾಗ ನನಗೆ 19 ವರ್ಷ ವಯಸ್ಸಾಗಿತ್ತು. ಈ ನೆಲದಲ್ಲಿ ನಾನು ಏನಾಗಬೇಕು ಅಂದುಕೊಂಡಿದ್ದೆನೋ ಅದು ಆಗಿದ್ದೇನೆ ಎಂದು ಮಾತನಾಡಿದ್ದಾರೆ. ಇದನ್ನೂ ಓದಿ: ಪಾಕ್‌ ಹೈಕಮಿಷನ್‌ ಅಧಿಕಾರಿ ಜೊತೆ ಜ್ಯೋತಿ ಫೋಟೊ ರಿವೀಲ್ – ಪಾಕಿಸ್ತಾನಕ್ಕೆ ಬರ್ತೀನಿ ಎನ್ನುತ್ತಿದ್ದ ಯೂಟ್ಯೂಬರ್‌

ಕಾಶ್ಮೀರಿಗಳ ಹೃದಯದಲ್ಲಿ ಪಾಕಿಸ್ತಾನದವರಿದ್ದಾರೆ ಎಂದು ಪಾಕಿಸ್ತಾನ ಅಪ್ರಪ್ರಚಾರ ಮಾಡುತ್ತಿದೆ ಎಂದು ಅಖ್ತರ್‌ ಅಸಮಾಧಾನ ಹೊರಹಾಕಿದ್ದಾರೆ. ಸ್ವಾತಂತ್ರ್ಯದ ನಂತರ ಪಾಕಿಸ್ತಾನ ಕಾಶ್ಮೀರದ ಮೇಲೆ ದಾಳಿ ಮಾಡಿದಾಗ, ಕಾಶ್ಮೀರಿಗಳು ಅವರನ್ನು ಮೂರು ದಿನಗಳ ಕಾಲ ತಡೆದಿದ್ದರು, ನಮ್ಮ ಸೈನ್ಯವು ಆ ನಂತರವೇ ಅಲ್ಲಿಗೆ ತಲುಪಿದ್ದು. ಸತ್ಯವೆಂದರೆ, ಕಾಶ್ಮೀರಿಗಳು ಭಾರತವಿಲ್ಲದೆ ಬದುಕಲು ಸಾಧ್ಯವಿಲ್ಲ. (ಪಹಲ್ಗಾಮ್‌ನಲ್ಲಿ) ನಡೆದದ್ದು ಅವರಿಗೆ ಹೆಚ್ಚು ನೋವುಂಟು ಮಾಡಿದೆ. ಪ್ರವಾಸೋದ್ಯಮಕ್ಕೆ ಹೊಡೆತ ಬಿದ್ದಿದೆ. ಕಾಶ್ಮೀರಿಗಳು ಭಾರತೀಯರು ಮತ್ತು ಅವರಲ್ಲಿ 99% ಭಾರತಕ್ಕೆ ನಿಷ್ಠರಾಗಿದ್ದಾರೆ ಎಂದು ತಿಳಿಸಿದ್ದಾರೆ.

Share This Article