– ಸಮಯ ಬಂದಾಗ ಸಿದ್ದರಾಮಯ್ಯರನ್ನ ಇಳಿಸಿ, ಡಿಕೆಶಿ ಸಿಎಂ ಆಗ್ತಾರೆ
– ಸಿಎಂ ಸ್ಥಾನಕ್ಕೆ ಕಾಂಗ್ರೆಸ್‌ನಲ್ಲಿ ಬಹಳಷ್ಟು ಆಕಾಂಕ್ಷಿಗಳಿದ್ದಾರೆ
ಹುಬ್ಬಳ್ಳಿ: ಮೋದಿ ಅವಧಿಯಲ್ಲಿ ಬ್ರಹ್ಮೋಸ್ ದಾಳಿಯಾಗಿದೆ, ಕಾಂಗ್ರೆಸ್ ಕಾಲದಲ್ಲಿ ಯಾಕೆ ಆಗಿಲ್ಲ ಎಂದು ಎಂದು ಮಾಜಿ ಸಿಎಂ, ಸಂಸದ ಜಗದೀಶ್ ಶೆಟ್ಟರ್(Jagadish Shettar) ಪ್ರಶ್ನಿಸಿದರು.
ಹುಬ್ಬಳ್ಳಿಯಲ್ಲಿ(Hubballi) ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನರೇಂದ್ರ ಮೋದಿ(Narendra Modi) ನಾಯಕತ್ವ ಗುರಿ ಇಟ್ಟರೆ ಗುರಿ ಮುಟ್ಟುವವರೆಗೆ ಬಿಡೋದಿಲ್ಲ. ಅವರು ಗುಜರಾತ್ ಸಿಎಂ ಇದ್ದಾಗಿನಿಂದಲೂ ಹಾಗೆಯೇ ಇದ್ದಾರೆ. ಪಹಲ್ಗಾಮ್‌ನಲ್ಲಿ(Pahalgam) ಉಗ್ರರು 26 ಅಮಾಯಕರನ್ನ ಕೊಂದು ಹಾಕಿದ್ರು. ಅದಾದ ಮೇಲೆ ಮೋದಿ ಅವರನ್ನ ಕೊಲ್ಲೋದಾಗಿ ಹೇಳಿದ್ರು, ಅದೇ ರೀತಿಯ ಮಾಡಿದ್ದಾರೆ. ಸೈನಿಕರಿಂದ ಉಗ್ರರ ಸಂಹಾರ ಮಾಡಿಸಿದ್ದಾರೆ. ಇದು ನರೇಂದ್ರ ಮೋದಿ ಅವರ ಪರಿಶ್ರಮ. ಸ್ವದೇಶಿ ಡ್ರೋನ್, ಬ್ರಹ್ಮೋಸ್ ಮೂಲಕ ಅಟ್ಯಾಕ್ ಮಾಡಿದರು. ಇವತ್ತು ಅದರ ಶಕ್ತಿ ಏನು ಅನ್ನೋದು ಗೊತ್ತಾಗಿದೆ ಎಂದರು. ಇದನ್ನೂ ಓದಿ: ಬೆಂಗಳೂರಿನಲ್ಲಿ ಭಾರೀ ಮಳೆ -ಆರ್‌ಸಿಬಿ-ಕೆಕೆಆರ್ ಪಂದ್ಯಕ್ಕೆ ಅಡ್ಡಿ
ಈಗ ಅದರ ಬೇಡಿಕೆ ವಿದೇಶದಲ್ಲೂ ಹೆಚ್ಚಾಗಿದೆ. ಇದು ಮೋದಿ ಕಾಲದಲ್ಲಿ ಆಗಿದೆ. ಕಾಂಗ್ರೆಸ್(Congress) ಕಾಲದಲ್ಲಿ ಯಾಕೆ ಆಗಿಲ್ಲ. ಮೊದಲು ಹೊರ ದೇಶದಿಂದ ಶಸ್ತ್ರಾಸ್ತ್ರಗಳನ್ನು ತರುತ್ತಿದ್ದರು. ಪಾಕಿಸ್ತಾನ ಉಗ್ರರಿಗೆ ಉತ್ತೇಜನ ಕೊಡ್ತಾ ಇದೆ. ಹೀಗಾಗಿ ಸರ್ವ ಪಕ್ಷಗಳ ರಾಜಕಾರಣಿಗಳ ತಂಡವನ್ನ ಹಲವು ದೇಶಗಳಿಗೆ ಕಳುಹಿಸಲು ನಿರ್ಧಾರ ಮಾಡಿದ್ದಾರೆ. ಮೋದಿ ಅವರ ರಾಜತಾಂತ್ರಿಕ ನಡೆಗೆ ಮುಂದಿನ ದಿನಗಳಲ್ಲಿ ಒಳ್ಳೆಯದಾಗುತ್ತೆ ಎಂದು ಹೇಳಿದರು. ಇದನ್ನೂ ಓದಿ: ನಿಮ್ಮ ಕುಟುಂಬಕ್ಕೆ ಒಳ್ಳೆಯದಾಗುತ್ತಾ? – ಎಂ.ಸಿ ಸುಧಾಕರ್ ವಿರುದ್ಧ ರೇವಣ್ಣ ಗರಂ
ಕಾಂಗ್ರೆಸ್ ನಾಯಕರ ಟೀಕೆ ವಿಚಾರವಾಗಿ ಮಾತನಾಡಿ, ಮೋದಿ ಅವರ ಪ್ರತಿ ಹೆಜ್ಜೆಗೂ ಅವರು ಟೀಕೆ ಮಾಡ್ತಾರೆ. ಮೋದಿ ಗಡಿವರೆಗೆ ಹೋಗಿ ಜನರಿಗೆ ಸಮಾಧಾನ ಮಾಡುವ ಕೆಲಸ ಮಾಡ್ತಾರೆ. ರಾಹುಲ್ ಗಾಂಧಿ(Rahul Gandhi) ಅವರು ಗಡಿ ಭಾಗಕ್ಕೆ ಹೋಗಲಿ ನೋಡೋಣ. ಸಂತೋಷ ಲಾಡ್, ಕೊತ್ತೂರ ಮಂಜುನಾಥ್ ಹೇಳಿಕೆ ಸರಿಯಲ್ಲ. ಟೀಕೆ ಮಾಡುವವರಿಗೆ ನಾಚಿಕೆ, ಮಾನ, ಮರ್ಯಾದೆ ಇದ್ರೆ ಈ ರೀತಿ ಹೇಳಿಕೆ ನೀಡಲ್ಲ. ಕೆಲವು ಚಿಲ್ಲರೆ ನಾಯಕರ ಹೇಳಿಕೆಯಿಂದ ಯಾವುದೇ ವ್ಯತ್ಯಾಸ ಆಗೋದಿಲ್ಲ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: Operation Sindoor – 1 ಬ್ರಹ್ಮೋಸ್ ಕ್ಷಿಪಣಿಯ ದರ ಎಷ್ಟು? ಸ್ಪೀಡ್ ಎಷ್ಟಿರುತ್ತೆ?
ರಾಜ್ಯ ಸರ್ಕಾರ ಪತನ ಕುರಿತು ಪ್ರತಿಕ್ರಿಯಿಸಿ, ಸಿಎಂ, ಡಿಸಿಎಂ ನಡುವೆ ಮಾತುಕತೆ ಆಗಿದೆ. ಸಮಯ ಬಂದಾಗ ಸಿದ್ದರಾಮಯ್ಯರನ್ನ ಇಳಿಸಿ, ಡಿ.ಕೆ ಶಿವಕುಮಾರ್(D K Shivakumar) ಆಗ್ತಾರೆ. ಸಿದ್ದರಾಮಯ್ಯ ಇಳಿಸಿದ್ರೆ, ಡಿ.ಕೆ ಶಿವಕುಮಾರ್ ಸಿಎಂ ಆಗಲ್ಲ. ಬದಲಾಗಿ ಕಾಂಗ್ರೆಸ್ ಛಿದ್ರ ಛಿದ್ರ ಆಗುತ್ತೆ. ಸಿಎಂ ಸ್ಥಾನಕ್ಕೆ ಸರ್ಕಾರದಲ್ಲಿ ಬಹಳಷ್ಟು ಆಕಾಂಕ್ಷಿಗಳಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ಡಿಕೆಶಿಗೆ ಮಾನ, ಮರ್ಯಾದೆ ಇದ್ರೆ ಕೂಡ್ಲೇ ಮಂಜುನಾಥ್ ಉಚ್ಚಾಟಿಸಿ: ಶರಣು ಸಲಗರ್
ಯಾವ ಪುರುಷಾರ್ಥಕ್ಕೆ ಕಾಂಗ್ರೆಸ್ ಎರಡು ವರ್ಷದ ಸಂಭ್ರಮಾಚರಣೆ ಮಾಡುತ್ತಿದೆ. ಈಗಾಗಲೇ ಜನರ ವಿಶ್ವಾಸ ಕಳೆದುಕೊಂಡಿದ್ದೀರಿ. ಸಾಕಷ್ಟು ಭ್ರಷ್ಟಾಚಾರ ನಡೀತಾ ಇದೆ. ಗುತ್ತಿಗೆದಾರರು ಎಷ್ಟೋ ಜನ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಾಂಗ್ರೆಸ್ ನಾಯಕರೇ ಹೇಳ್ತಾರೆ ನಮ್ಮ ಪರಿಸ್ಥಿತಿ ಗಂಭೀರ ಇದೆ. ನಾವು ದುಂಬಾಲು ಬಿದ್ರು ಯಾವುದೇ ಅಭಿವೃದ್ಧಿಗೆ ಹಣ ಸಿಗ್ತಿಲ್ಲ ಎಂದು ಹೇಳ್ತಿದ್ದಾರೆ ಎಂದರು.