ನಾನ್ ವೆಜ್ ತಿನ್ನದವರು ಹೆಚ್ಚಾಗಿ ವೆಜ್‌ನಲ್ಲಿ ಗೋಬಿ ಹಾಗೂ ಪನ್ನೀರ್‌ನ್ನು ಇಷ್ಟಪಡುತ್ತಾರೆ. ಹೆಚ್ಚಿನವರು ಪನ್ನೀರ್‌ನಲ್ಲಿ ಮಾಡಲಾಗುವ ವಿವಿಧ ಬಗೆಯ ತಿಂಡಿ ಹಾಗೂ ಖಾದ್ಯಗಳನ್ನು ತಿನ್ನ ಬಯಸುತ್ತಾರೆ. ಅದರಲ್ಲೂ ಕೆಲವರು ಹೊಟೇಲ್‌ಗಳಲ್ಲಿ ತಿನ್ನದೇ ಮನೆಯಲ್ಲಿ ಮಾಡಿಕೊಂಡು ತಿನ್ನಬೇಕು ಎಂದುಕೊಳ್ಳುತ್ತಾರೆ.
ಹೌದು ಅದಕ್ಕೆ ಸುಲಭವಾಗಿ ಮನೆಯಲ್ಲಿ ಕಡಾಯಿ ಪನ್ನೀರ್‌ನ್ನು ಈ ರೀತಿಯಾಗಿ ಮಾಡಿ.
ಬೇಕಾಗುವ ಪದಾರ್ಥಗಳು:
ಧನಿಯಾ ಕಾಳು
ಕರಿಮೆಣಸು
ಚಕ್ಕೆ
ಬಿರಿಯಾನಿ ಎಲೆ
ಜೀರಿಗೆ
ಕೆಂಪು ಮೆಣಸಿನಕಾಯಿ
ಪನ್ನೀರ್
ಈರುಳ್ಳಿ
ದೊಡ್ಡ ಮೆಣಸಿಕಾಯಿ
ಟೊಮ್ಯಾಟೊ
ಬೆಳ್ಳುಳ್ಳಿ
ಶುಂಠಿ
ಮಾಡುವ ವಿಧಾನ:
ಮೊದಲಿಗೆ ಮಸಾಲೆ ಪದಾರ್ಥಗಳನ್ನು ಹುರಿದು ಪುಡಿ ತಯಾರಿಸಿಕೊಳ್ಳಬೇಕು. ಕತ್ತರಿಸಿದ ಈರುಳ್ಳಿ, ದೊಡ್ಡ ಮೆಣಸಿನಕಾಯಿ ಹಾಗೂ ಪನ್ನೀರ್‌ನ್ನು ಬೇರೆ ಬೇರೆಯಾಗಿ ಹುರಿದಿಟ್ಟುಕೊಳ್ಳಬೇಕು. ಬಳಿಕ ಶುಂಠಿ, ಬೆಳ್ಳುಳ್ಳಿ, ಈರುಳ್ಳಿ, ಟೊಮ್ಯಾಟೋ ಅನ್ನು ಚೆನ್ನಾಗಿ ರುಬ್ಬಿಟ್ಟುಕೊಳ್ಳಬೇಕು.
ನಂತರ ಇನ್ನೊಂದು ಬಾಣಲಿಗೆ ತುಪ್ಪ ಅಥವಾ ಎಣ್ಣೆಯನ್ನು ಹಾಕಿ ಅದಕ್ಕೆ ರುಬ್ಬಿಟ್ಟುಕೊಂಡ ಶುಂಠಿ, ಬೆಳ್ಳುಳ್ಳಿ ಮಿಶ್ರಣವನ್ನು ಹಾಕಿಕೊಳ್ಳಬೇಕು. ನೀರು ಹಾಕಿ ಹಸಿ ವಾಸನೆ ಹೋಗುವ ತನಕ ಚೆನ್ನಾಗಿ ಹುರಿದುಕೊಳ್ಳಬೇಕು. ಅದಕ್ಕೆ ರುಚಿಗೆ ತಕ್ಕಷ್ಟು ಉಪ್ಪು, ಕೆಂಪು ಖಾರವನ್ನು ಹಾಕಿ ಕಲಸಿಕೊಳ್ಳಬೇಕು. ಅದಕ್ಕೆ ಕತ್ತರಿಸಿದ ಈರುಳ್ಳಿ, ದೊಡ್ಡ ಮೆಣಸಿನಕಾಯಿಯನ್ನು ಹಾಕಬೇಕು. ಕೊನೆಗೆ ಹುರಿದಿಟ್ಟ ಪನ್ನೀರ್ ಹಾಕಿಕೊಂಡು, ಬಳಿಕ ಅದಕ್ಕೆ ವೈಟ್ ಕ್ರೀಮ್ ಹಾಕಿದರೆ ಕಡಾಯಿ ಪನ್ನೀರ್ ಸವಿಯಲು ಸಿದ್ಧವಾಗುತ್ತದೆ.