ಕಾಲುಂಗುರದ ಕಾಲ ಆಯ್ತು ಈಗ ‘ತಾಳಿ’ ಟ್ರೆಂಡ್
ಹಿಂದೂಗಳ ಪದ್ಧತಿಯ ಮದುವೆಯಲ್ಲಿ ಮಾಂಗಲ್ಯ ಬಹಳ ಮುಖ್ಯ ಪಾತ್ರ ವಹಿಸುತ್ತದೆ. ಈಗಂತೂ ವಿವಿಧ ರೀತಿಯ ಡಿಸೈನ್‌ಗಳ ಮಾಂಗಲ್ಯ ಸರಗಳನ್ನು ಧರಿಸುವುದು ಟ್ರೆಂಡ್ ಆಗಿದೆ. ಮೊದಲೆಲ್ಲ ಸಾಂಪ್ರದಾಯಿಕ ಸರವಾಗಿದ್ದ ತಾಳಿ ಈಗ ಫ್ಯಾಷನ್ ಆಗಿ ಬದಲಾಗಿದೆ. ಮಾಂಗಲ್ಯಕ್ಕೂ ಫ್ಯಾಷನ್ ಟಚ್ ಕೊಡಲಾಗಿದೆ. ಇದನ್ನೂ ಓದಿ:ಕಾನ್ ಫೆಸ್ಟಿವಲ್‌ನಲ್ಲಿ ಕನ್ನಡತಿ- ಅಮ್ಮನ ಸೀರೆ ಗೌನ್ ಮಾಡಿದ ದಿಶಾ ಮದನ್
ನಾನಾ ಡಿಸೈನರ್‌ಗಳು ವಿವಿಧ ವಿನ್ಯಾಸದ ಮಂಗಳಸೂತ್ರವನ್ನು ಮಾರುಕಟ್ಟೆಗೆ ಪರಿಚಯಿಸಲಾಗುತ್ತಿದೆ. ಅದರಲ್ಲಿ ಕೈಗೆ ತಾಳಿ ಸರ, ಚಿನ್ನದ ಮಾಂಗಲ್ಯ, ಕಪ್ಪು ಮಣಿ ಚಿನ್ನದ ಮಾಂಗಲ್ಯ, ಲಾಕೆಟ್ ಹೊಂದಿರುವ ಕಪ್ಪು ಮಣಿಯ ಮಾಂಗಲ್ಯ, ಚಿನ್ನದ ಸರಪಳಿ ಮಾಂಗಲ್ಯ, ಹಗುರವಾದ ಮಾಂಗಲ್ಯದ ವಿನ್ಯಾಸ, ಹೀಗೆ ಬಗೆ ಬಗೆಯ ಡಿಸೈನ್‌ಗಳು ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿವೆ. ಇದನ್ನೂ ಓದಿ:ಪವನ್ ಕಲ್ಯಾಣ್ ನಟನೆಯ ‘ಹರಿ ಹರ ವೀರ ಮಲ್ಲು’ ಚಿತ್ರದ ರಿಲೀಸ್ ಡೇಟ್ ಅನೌನ್ಸ್
ಕೈಗೆ ಮಾಂಗಲ್ಯ ಸರ:
ಕತ್ತಿನಲ್ಲಿದ್ದ ಕರಿಮಣಿ ಈಗ ಕೈಗೆ ಬಳೆಯ ರೂಪದಲ್ಲಿ ಮಾರುಕಟ್ಟೆಗೆ ಬಂದಿದೆ. ಇತ್ತೀಚೆಗೆ ಅಂಬಾನಿ ಮನೆ ಸೊಸೆ ರಾಧಿಕಾ ಮಾಂಗಲ್ಯ (ತಾಳಿ) ಸರವನ್ನು ಕೈಗೆ ಕಂಕಣದ ರೂಪದಲ್ಲಿ ಧರಿಸಿದ್ದು ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಈ ಮಂಗಳ ಸೂತ್ರದಲ್ಲಿ ಕರಿಮಣಿ, ಮುತ್ತುಗಳು ಹಾಗೂ ಲಾಕೆಟ್ ಹೊರತುಪಡಿಸಿ ಅನಂತ್ ಅಂಬಾನಿ ಹೆಸರಿನ ಮೊದಲ ಅಕ್ಷರ ಎ ಕೂಡ ಒಳಗೊಂಡಿತ್ತು. ಇದು ಫ್ಯಾಷನ್ ಪ್ರಿಯರ ಗಮನ ಸೆಳೆದಿತ್ತು.
View this post on Instagram
ಚಿನ್ನದ ತಾಳಿ ಸರ:
ಮದುವೆ ವೇಳೆ ವಧುಗೆ ಹಾಕುವ ಚಿನ್ನದ ಮಾಂಗಲ್ಯವನ್ನು ಈಗಿನ ಫ್ಯಾಷನ್‌ಗೆ ತಕ್ಕಂತೆ ಮಾಡಬಹುದು. ಚಿನ್ನದ ಮಾಂಗಲ್ಯವನ್ನು ಶಾರ್ಟ್ ಆಗಿ ಮಾಡಿಸಿದರೆ ಸೀರೆಯಿಂದ ಹಿಡಿದು ಎಲ್ಲಾ ಬಟ್ಟೆಗಳಿಗೂ ಒಪ್ಪುತ್ತದೆ.
ಕಪ್ಪು ಮಣಿ ಚಿನ್ನದ ಮಾಂಗಲ್ಯ:
ತೆಳುವಾದ ಚಿನ್ನದ ಸರಪಳಿ ಮತ್ತು ಕಪ್ಪು ಮಣಿಗಳಿಂದ ತಯಾರಿಸಿರೋದನ್ನು ಮಾಂಗಲ್ಯವು ಆಫೀಸ್‌ಗೆ ಮತ್ತು ಸಮಾರಂಭಗಳಲ್ಲಿ ಧರಿಸಿಬಹುದು.
ಲಾಕೆಟ್ ಹೊಂದಿರುವ ಕಪ್ಪು ಮಣಿಯ ಮಾಂಗಲ್ಯ:
ಕಡಿಮೆ ಬಜೆಟ್‌ನಲ್ಲಿ ಕಪ್ಪು ಮಣಿಗಳ ಮಾಂಗಲ್ಯವನ್ನು ಧರಿಸಬಹುದು. ಜೊತೆಗೆ ಉಡುಗೊರೆಯಾಗಿಯೂ ನೀಡಬಹುದು. ಫ್ಯಾಷನ್ ತಕ್ಕಂತೆ ಲಾಕೆಟ್ ಅನ್ನು ಬದಲಾಯಿಸಬಹುದು.
ಚಿನ್ನದ ಸರಪಳಿ ಮಾಂಗಲ್ಯ:
ತೆಳುವಾದ ಚಿನ್ನದ ಸರಪಳಿ ತಾಳಿ ಕೂಡ ಶಾರ್ಟ್ ಆಗಿ ಮಾಡಿಸಿ ಧರಿಸಬಹುದು. ಇದು ಕೂಡ ಈಗ ಟ್ರೆಂಡ್‌ನಲ್ಲಿದೆ. ಇದಕ್ಕೆ ಕಪ್ಪು ಮಣಿ ಹಾಕಬಹುದು.
ಹಗುರವಾದ ಮಾಂಗಲ್ಯದ ವಿನ್ಯಾಸ:
ಮುತ್ತು, ಚಿನ್ನ ಸಮಾನ ಪ್ರಮಾಣದಲ್ಲಿರುವ ಹಗುರವಾದ ಮಾಂಗಲ್ಯದ ವಿನ್ಯಾಸ ನಾರಿಮಣಿಯರು ಹೆಚ್ಚು ಇಷ್ಟಪಡುತ್ತಾರೆ. ಪದ್ಧತಿಯ ಜೊತೆ ಫ್ಯಾಷನ್ ಕೂಡ ಮಾಡಬಹುದಾಗಿದೆ. ಒಟ್ನಲ್ಲಿ ಮದುವೆಯಾಗಿರುವ ಯುವತಿಯರಿಗೆ ಕಾಲುಂಗುರದ ಫ್ಯಾಷನ್ ಜೊತೆ ಮಾಂಗಲ್ಯದ ಸರದಲ್ಲೂ ಟ್ರೆಂಡ್‌ಗೆ ತಕ್ಕಂತೆ ಧರಿಸುವ ಕಾಲ ಬಂದಿದೆ. ಕಾಲಕ್ಕೆ ತಕ್ಕಂತೆ ಇದು ಕೂಡ ಬದಲಾಗಿದೆ.