ಮತ್ತೆ ಶುರುವಾದ ಕೋವಿಡ್ ಭೀತಿ – ಹೊಸ ಅಲೆಗೆ ಸಿಂಗಾಪುರ, ಹಾಂಕಾಂಗ್ ತತ್ತರ

Public TV
1 Min Read
CORONA 1
ವಿಕ್ಟೋರಿಯಾ: ಏಷ್ಯಾದ (Asia) ರಾಷ್ಟ್ರಗಳಲ್ಲಿ ಕೋವಿಡ್-19ರ (Covid-19) ಹೊಸ ಅಲೆ ಶುರುವಾಗಿದ್ದು, ಸಿಂಗಾಪುರ, ಹಾಂಕಾಂಗ್ ತತ್ತರಿಸಿಹೋಗಿವೆ.ಇದನ್ನೂ ಓದಿ: ಭಾರತದ ದಾಳಿಗೆ ಬೆದರಿ ರಾವಲ್ಪಿಂಡಿಯಿಂದ ಪಾಕ್‌ ಸೇನಾ ಪ್ರಧಾನ ಕಚೇರಿ ಇಸ್ಲಾಮಾಬಾದ್‌ಗೆ ಶಿಫ್ಟ್‌!

ಕೋವಿಡ್ ಆತಂಕ ಹೆಚ್ಚಾಗುತ್ತಿದ್ದು, ಈಗಾಗಲೇ ಸಿಂಗಾಪುರ (Singapore) ಮತ್ತು ಹಾಂಕಾಂಗ್‌ನಲ್ಲಿ (Hong Kong) ಅಲರ್ಟ್ ಘೋಷಿಸಲಾಗಿದೆ. ಸಿಂಗಾಪುರದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದೆ. ಮೇ 03ರಿಂದ ಇಲ್ಲಿಯವರೆಗೂ 14,200 ಕೇಸ್ ದಾಖಲಾಗಿದ್ದು, ಅದರ ಹಿಂದಿನ ವಾರಕ್ಕಿಂತ ಶೇ.28ರಷ್ಟು ಹೆಚ್ಚಾಗಿದೆ. ಆಸ್ಪತ್ರೆಗೆ ದಾಖಲಾಗುತ್ತಿರುವವರ ಸಂಖ್ಯೆ ಸುಮಾರು ಶೇ.30ರಷ್ಟು ಹೆಚ್ಚಾಗಿದೆ ಎಂದು ಸಿಂಗಾಪುರ ಆರೋಗ್ಯ ಸಚಿವಾಲಯ ತಿಳಿಸಿದೆ.

ಹಾಂಕಾಂಗ್ ಆರೋಗ್ಯ ಸಚಿವಾಲಯದ ಸಾಂಕ್ರಾಮಿಕ ರೋಗ ಶಾಖೆಯ ಮುಖ್ಯಸ್ಥ ಆಲ್ಬರ್ಟ್ ಆಯು ಮಾಧ್ಯಮದವರೊಂದಿಗೆ ಮಾತನಾಡಿ, ಈ ಒಂದು ವರ್ಷದಲ್ಲಿ ಕೋವಿಡ್ ಪಾಸಿಟಿವ್ ಪರೀಕ್ಷೆಗಾಗಿ ಆಸ್ಪತ್ರೆಗೆ ಬರುವ ಉಸಿರಾಟದ ಮಾದರಿಗಳ ಸಂಖ್ಯೆ ಹೆಚ್ಚಾಗಿದೆ. ಕಳೆದ ಎರಡು ವರ್ಷಗಳಿಂದ ವೈರಸ್ ಇರಲಿಲ್ಲ. ಈಗ ಮತ್ತೆ ಪ್ರಕರಣಗಳು ದಾಖಲಾಗುತ್ತಿವೆ. ಈ ವರ್ಷದ ಆರಂಭದಿಂದ ಮೇ 3ರವರೆಗೆ ಗಂಭೀರ ಪ್ರಕರಣಗಳು ಹಾಗೂ ಸಾವನ್ನಪ್ಪಿದವರು ಸೇರಿದಂತೆ 31 ಪ್ರಕರಣಗಳು ದಾಖಲಾಗಿವೆ ಎಂದರು.ಇದನ್ನೂ ಓದಿ: ಪಾಕ್‌ ವಿರುದ್ಧ ಅಗತ್ಯ ಇದ್ರೆ ಯುದ್ಧ ಮಾಡಿ ಅಂದಿದ್ದೆ, ಕಟ್ ಮಾಡಿ ತೋರಿಸಿ ಬಿಟ್ಟಿದ್ದಾರೆ: ಸಿದ್ದರಾಮಯ್ಯ

Share This Article