‘‌ಡ್ರ್ಯಾಗನ್’ ನಟನಿಗೆ ಹೆಚ್ಚಿದೆ ಬೇಡಿಕೆ- ಸಾಲು ಸಾಲು ಚಿತ್ರಗಳಲ್ಲಿ ನಟ

Public TV
1 Min Read
Pradeep Ranganathan

‘‌ಡ್ರ್ಯಾಗನ್’ ಸಿನಿಮಾ (Dragon) ಬಳಿಕ ಪ್ರದೀಪ್ ರಂಗನಾಥನ್‌ಗೆ (Pradeep Ranganathan) ಅದೃಷ್ಟ ಖುಲಾಯಿಸಿದೆ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಅವರು ಬ್ಯುಸಿಯಾಗಿದ್ದಾರೆ. ‘‌ಡ್ರ್ಯಾಗನ್’ ಆಯ್ತು ಈಗ ‘ಡ್ಯೂಡ್’ ಸಿನಿಮಾ ಕಥೆ ಹೇಳಲು ಶುರು ಮಾಡಿದ್ದಾರೆ. ಇದನ್ನೂ ಓದಿ:ಬ್ರೇಕಪ್ ಬಳಿಕ ಮಹತ್ವದ ನಿರ್ಧಾರ ಕೈಗೊಂಡ ತಮನ್ನಾ ಭಾಟಿಯಾ

Pradeep Ranganathan mamitha baiju‘ಡ್ಯೂಡ್’ (Dude) ಎಂಬ ತಮಿಳಿನ ಸಿನಿಮಾದಲ್ಲಿ ಪ್ರದೀಪ್ ರಂಗನಾಥನ್ (Pradeep Ranganathan) ಪವರ್‌ಫುಲ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ಪೋಸ್ಟರ್ ರಿಲೀಸ್ ಕೂಡ ಆಗಿದೆ. ತಾಳಿ ಹಿಡಿದು ರಗಡ್ ಲುಕ್‌ನಲ್ಲಿ ಪ್ರದೀಪ್ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾಗೆ ಮಲಯಾಳಂ ನಟಿ ಮಮಿತಾ ಬೈಜು ನಾಯಕಿಯಾಗಿದ್ದಾರೆ. ಇದನ್ನೂ ಓದಿ:‘ಆಂಧ್ರ ಕಿಂಗ್’ ಆದ ಉಪೇಂದ್ರ ಕಟೌಟ್ ಮುಂದೆ ರಾಮ್ ಪೋತಿನೇನಿ ಸಂಭ್ರಮ- ಟೀಸರ್ ಔಟ್

ಇದೊಂದು ಲವ್ ಸ್ಟೋರಿ ಸಿನಿಮಾ ಆಗಿದ್ದು, ಪ್ರದೀಪ್, ಮಮಿತಾ ಜೊತೆ ಶರತ್ ಕುಮಾರ್, ರೋಹಿಣಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಪುಷ್ಪ 2 ನಿರ್ಮಿಸಿದ್ದ ಮೈತ್ರಿ ಮೂವಿ ಮೇಕರ್ಸ್ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದೆ. ಯುವ ನಿರ್ದೇಶಕ ಕೀರ್ತೀಶ್ವರನ್ ನಿರ್ದೇಶನ ಮಾಡುತ್ತಿದ್ದಾರೆ.

ಈ ಸಿನಿಮಾ ಜೊತೆ ನಯನತಾರಾ ನಿರ್ಮಾಣದ ‘ಲವ್ ಇನ್ಶೂರೆನ್ಸ್ ಕಂಪನಿ’ ಚಿತ್ರದಲ್ಲಿ ಕೃತಿ ಶೆಟ್ಟಿಗೆ ನಾಯಕನಾಗಿ ಪ್ರದೀಪ್ ನಟಿಸಿದ್ದಾರೆ. ಇನ್ನೂ ಕೆಲವು ಸಿನಿಮಾಗಳ ಅಧಿಕೃತ ಘೋಷಣೆ ಆಗಬೇಕಿದೆ.

Share This Article