ರಾಯಚೂರು: ಭಾರತ-ಪಾಕಿಸ್ತಾನ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ಹಿನ್ನೆಲೆ ದೇಶದ ಸೈನಿಕರ (Indian Army) ಹಾಗೂ ನಾಗರಿಕರ ರಕ್ಷಣೆ, ಸುರಕ್ಷತೆಗಾಗಿ ಮಂತ್ರಾಲಯ (Mantralaya) ಗುರುರಾಘವೇಂದ್ರ ಸ್ವಾಮಿ ಮಠದಲ್ಲಿ ವಿವಿಧ ವಿಶೇಷ ಪೂಜೆ, ಹೋಮ-ಹವನ ನೆರವೇರಿಸಲಾಯಿತು.
ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಸ್ವಾಮಿ ನೇತೃತ್ವದಲ್ಲಿ ಹೋಮ, ಪೂಜೆಗಳು ನಡೆದವು. ಮೃತ್ಯುಂಜಯ ಹೋಮ, ಆಯುಷ್ಯ ಹೋಮ, ಮಾರ್ಕಂಡೇಯ ಹೋಮ ಹಾಗೂ ಇತರೆ ಹೋಮ ಹವನಗಳನ್ನು ಮಾಡಲಾಯಿತು. ಈ ವೇಳೆ ರಾಷ್ಟ್ರೀಯ ಬಿಕ್ಕಟ್ಟು ಹಿನ್ನೆಲೆ ಮಠದಲ್ಲಿ ಯಾವುದೇ ಸಂಭ್ರಮಾಚರಣೆಗಳು ನಡೆಸುವುದಿಲ್ಲ. ಸಾಂಪ್ರದಾಯಿಕ ಮತ್ತು ಅಗತ್ಯ ಧಾರ್ಮಿಕ ಆಚರಣೆಗಳನ್ನು ಮಾತ್ರ ಆಚರಿಸುವುದಾಗಿ ಶ್ರೀಗಳು ಘೋಷಣೆ ಮಾಡಿದರು. ಇದನ್ನೂ ಓದಿ: ಪಾಕ್ ಮೇಲೆ ಪ್ರಕೃತಿಗೂ ಮುನಿಸು – ಮತ್ತೆ ಭೂಕಂಪ
ಈ ವಿಶೇಷ ಪೂಜಾ ಹವನ ಕಾರ್ಯಕ್ರಮದ ವೇಳೆ ನಟ, ನಿರ್ದೇಶಕ ಉಪೇಂದ್ರ ಹಾಗೂ ಹಿರಿಯ ನಟಿ ತಾರಾ ಕುಟುಂಬಗಳು ಭಾಗಿಯಾಗಿದ್ದವು. ರಾಯರ ದರ್ಶನಕ್ಕೆ ಮಂತ್ರಾಲಯಕ್ಕೆ ಆಗಮಿಸಿದ್ದ ಉಪೇಂದ್ರ ಹಾಗೂ ನಟಿ ತಾರಾ ಕುಟುಂಬ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಭಾಗಿಯಾದರು. ಇದನ್ನೂ ಓದಿ: ನೆಹರು, ಇಂದಿರಾ ಗಾಂಧಿ ಮಾಡಿದ ತಪ್ಪನ್ನ ಮೋದಿ ಮಾಡಬಾರದು: ಯತ್ನಾಳ್