– 1,000 ಕೋಟಿ ಹಿಂದೆ ಬಿದ್ದು ಸಿನಿಮಾ ಫ್ಲಾಪ್ ಆಗ್ತಿವೆ ಎಂದ ನಟ
ಒಂದಿಲ್ಲೊಂದು ವಿವಾದಿತ ಹೇಳಿಕೆಗಳಿಂದಲೇ ಸದ್ದು ಮಾಡುತ್ತಿರುವ ಬಾಲಿವುಡ್ (Bollywood) ನಟ, ನಿರ್ದೇಶಕ ಅನುರಾಗ್ ಕಶ್ಯಪ್ (Anurag Kashya) ಮತ್ತೆ ಸುದ್ದಿಯಲ್ಲಿದ್ದಾರೆ. ಪ್ಯಾನ್ ಇಂಡಿಯಾ ಸಿನಿಮಾ ಕುರಿತು ನೀಡಿದ ಹೇಳಿಕೆ ನಟ-ನಟಿಯರು ಹಾಗೂ ಚಿತ್ರ ನಿರ್ಮಾಪಕರಲ್ಲಿ ಆಕ್ರೋಶ ಹುಟ್ಟುಹಾಕಿದೆ.
ಸಂದರ್ಶನವೊಂದರಲ್ಲಿ ಮಾತನಾಡಿದ ಕಶ್ಯಪ್, ಪ್ಯಾನ್ ಇಂಡಿಯಾ ಸಿನಿಮಾ (Pan India Cinema) ದುಡ್ಡು ಮಾಡುವ ದೊಡ್ಡ ಹಗರಣ ಆಗಿದೆ. ಆದ್ರೆ ನಿರ್ಮಾಪಕರು ಸಾವಿರ ಕೋಟಿ ಹಿಂದೆ ಬಿದ್ದಿರೋದ್ರಿಂದ ಸಿನಿಮಾಗಳು ಫ್ಲಾಪ್ ಆಗುತ್ತಿವೆ ಅಂತ ಕಿಡಿ ಕಾರಿದ್ದಾರೆ. ಅಲ್ಲದೇ ಇದಕ್ಕೆ ಕೆಜಿಎಫ್ (KGF), ಬಾಹುಬಲಿಯಂತಹ ಸಿನಿಮಾಗಳನ್ನ ಉದಾಹರಣೆ ಕೊಟ್ಟಿದ್ದಾರೆ. ಇದನ್ನೂ ಓದಿ: ʻರಾಕಿ ಭಾಯ್ʼ ಫ್ಯಾನ್ಸ್‌ಗೆ ಗುಡ್‌ನ್ಯೂಸ್; KGF-3 ಬಗ್ಗೆ ಬಿಗ್ ಹಿಂಟ್ ಕೊಟ್ಟ ಹೊಂಬಾಳೆ ಫಿಲ್ಮ್ಸ್
ʻಪ್ಯಾನ್ ಇಂಡಿಯಾʼ ಅಂದಾಗ ಒಂದು ಪದವಷ್ಟೇ ಕೇಳಿಸುತ್ತೆ. ಆದ್ರೆ ಇದೊಂದು ದುಡ್ಡು ಮಾಡುವ ದೊಡ್ಡ ಹಗರಣ ಅಂತ ನನಗನ್ನಿಸುತ್ತೆ. ಒಂದು ಸಿನಿಮಾ ದೇಶಾದ್ಯಂತ ಚೆನ್ನಾಗಿ ಗಳಿಕೆ ಕಂಡಾಗ ಮಾತ್ರ ಅದು ಪ್ಯಾನ್ ಇಂಡಿಯಾ ಆಗುತ್ತದೆ. ಆದ್ರೆ ಸಿನಿಮಾ ನಿರ್ಮಾಣವಾಗುವ ಮೊದಲೇ ಅದು ಭಾರತದಾದ್ಯಂತ ಹರಡಬೇಕು ಅಂದುಕೊಂಡ್ರೆ ಹೇಗೆ? 1 ಸಿನಿಮಾ ನಿರ್ಮಾಣಕ್ಕೆ 3-4 ವರ್ಷಗಳು ಬೇಕಾಗುತ್ತದೆ. ಇದರಲ್ಲಿ ಅನೇಕ ಜನರು ಭಾಗಿಯಾಗಿರುತ್ತಾರೆ. ಅದಕ್ಕಾಗಿಯೇ ಎಲ್ಲಾ ಹಣ ಚಿತ್ರಕ್ಕೆ ಹೋಗುವುದಿಲ್ಲ. ಕಥೆಗಾರ ಮತ್ತು ನಟ ಒಬ್ಬರೇ ಆಗಿದ್ದರೆ ಆಗ ಹಣ ದೊಡ್ಡ ಸೆಟ್‌ಗಳಿಗೆ ಹೋಗುತ್ತದೆ ಎಂದು ಹೇಳಿದ್ದಾರೆ.
ಚಲನಚಿತ್ರ ನಿರ್ಮಾಪಕರು ಪ್ರತಿಯೊಂದು ಸಿನಿಮಾಗೂ ದೊಡ್ಡ ಮೊತ್ತದ ಗಣ ಹೂಡಿಕೆ ಮಾಡುತ್ತಾರೆ. ಅವುಗಳಲ್ಲಿ ಹೆಚ್ಚಿನವು ಗಲ್ಲಾಪೆಟ್ಟಿಗೆ ತುಂಬಿಸುವಲ್ಲಿ ವಿಫಲವಾಗುತ್ತಿವೆ. ಆದರೂ ಹಿಟ್ ಆಗಿದೆ ಅಂತ ಹೇಳಿಕೊಂಡು ಓಡಾಡುತ್ತಿರ್ತಾರೆ ಅಂತ ತಿವಿದಿದ್ದಾರೆ. ಇದನ್ನೂ ಓದಿ: ಮೂವತ್ತೇ ಸೆಕೆಂಡುಗಳಲ್ಲಿ ಕಲಾ ಲೋಕ ಸೃಷ್ಟಿಸಿದ ನಟಿ ರಿಮಾ ಕಲ್ಲಿಂಗಲ್, ಪದ್ಮಪ್ರಿಯಾ!
ಮುಂದುವರಿದು… ಇತ್ತೀಚಿನ ದಿನಗಳಲ್ಲಿ ಕೇವಲ 1% ಸಿನಿಮಾಗಳು ಮಾತ್ರ ದೇಶಾದ್ಯಂತ ಸದ್ದು ಮಾಡುತ್ತಿವೆ. ʻಸ್ತ್ರೀ 2ʼ ನಂತಹ ಕೆಲವು ಚಿತ್ರಗಳು ನಿರೀಕ್ಷೆಗೂ ಮೀರಿ ಯಶಸ್ವಿಯಾದವು. ʻಉರಿʼ ಯಶಸ್ವಿಯಾದಾಗ, ಎಲ್ಲರೂ ಅದೇ ಮಾದರಿಯ ಸಿನಿಮಾಗಳನ್ನ ಮಾಡಲು ಪ್ರಾರಂಭಿಸಿದರು. ʻಬಾಹುಬಲಿʼ ಬಳಿಕ ಪ್ರಭಾಸ್ ಅಥವಾ ಇತರ ನಟರನ್ನಿಟ್ಟುಕೊಂಡು ಅದೇ ರೀತಿಯ ಬಿಗ್ ಬಜೆಟ್ ಸಿನಿಮಾ ಮಾಡೋಕೆ ಶುರು ಮಾಡಿದ್ರು. ʻಕೆಜಿಎಫ್ʼ ಯಶಸ್ಸಿನ ನಂತರ ಎಲ್ಲರೂ ಒಂದೇ ರೀತಿಯ ಚಿತ್ರಗಳನ್ನು ಮಾಡಲು ಪ್ರಾರಂಭಿಸಿದರು. ಇದರಿಂದ ಕಥೆಗಳು ಹದಗೆಟ್ಟು ಸಿನಿಮಾ ಜನಪ್ರಿಯತೆಯನ್ನ ಕುಗ್ಗಿಸುತ್ತಿವೆ ಅಂತ ಅಸಮಾಧಾನ ಹೊರಹಾಕಿದ್ರು.
ಸಾವಿರ ಕೋಟಿ ಹಿಂದೆ ಓಡ್ತಿದ್ದಾರೆ
ಇನ್ನೂ ಬಿಗ್ ಬಜೆಟ್‌ನ ಸಿನಿಮಾಗಳು ಸೂಪರ್ ಹಿಟ್ ಆಗಲಿ ಅನ್ನೋ ಕಾರಣಕ್ಕೆ ಕಥೆಯ ದಿಕ್ಕು ತಪ್ಪಿಸಿ ಆಗಾಗ್ಗೆ ಐಟಂ ದೃಶ್ಯಗಳನ್ನ ತೋರಿಸುವ ಕೆಲಸ ಮಾಡ್ತಿದ್ದಾರೆ. ಸಿನಿಮಾ ಮಾಡಿದವರೆಲ್ಲ ಸಾವಿರ ಕೋಟಿ ಹಿಂದೆ ಓಡ್ತಿರೋದ್ರಿಂದ ಇದೆಲ್ಲ ಸಾಮಾನ್ಯವಾಗಿಬಿಟ್ಟಿದೆ. ಪ್ರತಿ ವರ್ಷ ನಾವು ಸಾವಿರಾರು ಸಿನಿಮಾಗಳನ್ನ ಮಾಡ್ತಾ ಬಂದಿದ್ದೇವೆ. ಆದ್ರೆ ಕಳೆದ 5 ವರ್ಷಗಳಲ್ಲಿ 5-6 ಸಿನಿಮಾಗಳು ಬಿಟ್ರೆ ಉಳಿದ ಸಿನಿಮಾಗಳು ಫ್ಲಾಪ್ ಆಗಿವೆ ಎಂದು ಬೇಸರ ಹೊರಹಾಕಿದ್ದಾರೆ. ಇದನ್ನೂ ಓದಿ: ‘ಕಾಂತಾರ ಚಾಪ್ಟರ್ 1’ ಸಿನಿಮಾ ಶೂಟಿಂಗ್ ಮುಗಿಸಿಕೊಟ್ಟಿದ್ದ ರಾಕೇಶ್ ಪೂಜಾರಿ