ಭಾರತ-ಪಾಕ್ ನಡುವೆ ಯುದ್ಧ ಬೇಡ ಎಂದು ಸೋಷಿಯಲ್ ಮೀಡಿಯಾದಲ್ಲಿ ಸೌತ್ ನಟಿ ಐಶ್ವರ್ಯಾ ರಾಜೇಶ್ (Aishwarya Rajesh) ಮನವಿ ಮಾಡಿದ್ದಾರೆ. ಯುದ್ಧಕ್ಕೆ ನನ್ನ ಬೆಂಬಲವಿಲ್ಲ ಎಂದು ಪೋಸ್ಟ್ ಮಾಡಿರುವ ನಟಿಗೆ ನೆಟ್ಟಿಗರು ತರಾಟೆ ತೆಗೆದುಕೊಂಡಿದ್ದಾರೆ. ಇದನ್ನೂ ಓದಿ:ಉರಿ, ದಂಗಲ್ ಸಿನಿಮಾಗಳ ಖ್ಯಾತ ಮೇಕಪ್ ಕಲಾವಿದ ವಿಕ್ರಮ್ ಗಾಯಕ್ವಾಡ್ ನಿಧನ
ಯುದ್ಧ ಬೇಡ. ಈ ದೇಶದ ಪ್ರಜೆಯಾಗಿ ನಾನು ಭಾರತ ಮತ್ತು ಪಾಕಿಸ್ತಾನ ಸರ್ಕಾರಗಳನ್ನು ವಿನಂತಿಸುತ್ತೇನೆ. ಯುದ್ಧದ ಬದಲು ಶಾಂತಿಗೆ ಆದ್ಯತೆ ನೀಡಿ. ಜೀವಗಳನ್ನು ಕಳೆದುಕೊಳ್ಳಲು ಬಿಡಬೇಡಿ. ಸೈನಿಕರು, ಮುಗ್ಧ ನಾಗರಿಕರು ಸಾಯಬಾರದು. ನಾವು ಇದರ ಬಗ್ಗೆ ಜಾಗೃತಿ ಮೂಡಿಸಬೇಕು ಮತ್ತು ಮತ್ತೊಂದು ಯುದ್ಧ ತಡೆಯಲು ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಐಶ್ವರ್ಯಾ ರಾಜೇಶ್ ಇನ್ಸಾ÷್ಟಗ್ರಾಂನಲ್ಲಿ ಬರೆದುಕೊಂಡಿದ್ದಾರೆ. ಅವರು ಹಂಚಿಕೊಂಡಿರುವ ಪೋಸ್ಟ್ ವಿವಾದವನ್ನು ಹುಟ್ಟು ಹಾಕಿದೆ. ಇದನ್ನೂ ಓದಿ:ಭಾರತೀಯ ಸೇನೆಗೆ ದೇಣಿಗೆ ಘೋಷಿಸಿದ ವಿಜಯ್ ದೇವರಕೊಂಡ – ಫ್ಯಾನ್ಸ್ ಮೆಚ್ಚುಗೆ
ಕನ್ನಡದ ‘ಉತ್ತರಾಖಂಡ’ ಸಿನಿಮಾದಲ್ಲಿ ಶಿವಣ್ಣ, ಡಾಲಿ ಜೊತೆ ನಟಿಸುವ ಮೂಲಕ ತಮಿಳು ನಟಿ ಐಶ್ವರ್ಯಾ ರಾಜೇಶ್ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟಿದ್ದಾರೆ.