ದೇಹದಲ್ಲಿ ಒಂದು ತೊಟ್ಟು ರಕ್ತ ಇರೋವರೆಗೂ ಯುದ್ಧ ಮಾಡ್ತೀನಿ – ಮೈ ಪರಚಿಕೊಂಡ ಪಾಕ್‌ ಪ್ರಧಾನಿ

Public TV
2 Min Read
Shehbaz Sharif

– ಚೀನಾ ನಮ್ಮೊಂದಿಗಿದೆ, ಟ್ರಂಪ್‌ಗೂ ಧನ್ಯವಾದ ಹೇಳಿದ ಷರೀಫ್​
– ಭಾರತದ ದಾಳಿಗಳು ವಿಫಲವಾಗಿದೆ ಎಂದು ಬುರುಡೆ ಬಿಟ್ಟ ಪಿಎಂ

ನವದೆಹಲಿ: ಕದನ ವಿರಾಮ (Ceasefire) ಮುರಿಯುವುದು ಪಾಕ್‌ ಹಳೆಯ ಚಾಳಿಯಾಗಿಬಿಟ್ಟಿದೆ. ಭಾರತೀಯ ಸೇನಾ ದಾಳಿಗೆ ʻಕಪಟ ವಿರಾಮʼದ ನಾಟಕವಾಡಿದ್ದ ಪಾಕ್‌ ಮತ್ತೆ ಬಾಲ ಬಿಚ್ಚಿದೆ. ಕದನ ವಿರಾಮ ಘೋಷಣೆಯಾದ ಕೆಲವೇ ಗಂಟೆಗಳ‌ ಬಳಿಕ ಭಾರತದ ಗಡಿಯಲ್ಲಿ ದಾಳಿ ನಡೆಸಿದೆ ಎನ್ನಲಾಗಿದ್ದು, ಜಮ್ಮುವಿನ ಅಖ್ನೂರ್‌, ಕನಾಚಕ್‌, ಪರ್ಗ್ವಾಲ್‌, ರಾಮನಗರ ವಲಯಗಳಲ್ಲಿ ಜೋರಾಗಿ ಸ್ಫೋಟದ ಸದ್ದು ಕೇಳಿಬಂದಿವೆ.

Ceasefire violation

ಶನಿವಾರ ರಾತ್ರಿ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಪಾಕ್‌ ಪ್ರಧಾನಿ ಶೆಹಬಾಜ್‌ ಷರೀಫ್‌ (Shehbaz Sharif), ಭಾರತ ಇತ್ತೀಚೆಗೆ ಮಾಡಿದ್ದು ತಪ್ಪು, ಅದಕ್ಕೆ ನಮ್ಮ ಸೇನೆ ಸೂಕ್ತ ಉತ್ತರ ಕೊಟ್ಟಿದೆ. ಪಹಲ್ಗಾಮ್ ದಾಳಿಯನ್ನ ನೆಪವಾಗಿಟ್ಟುಕೊಂಡು ಭಾರತ ನಮ್ಮ ಮೇಲೆ ಯುದ್ಧ ಹೇರಿತು. ಭಾರತದ ಆಧಾರರಹಿತ ಆರೋಪಗಳ ಬಗ್ಗೆ ಪಾಕಿಸ್ತಾನ ಮತ್ತೊಮ್ಮೆ ನಿಷ್ಪಕ್ಷಪಾತ ತನಿಖೆಯನ್ನು ನಡೆಸುತ್ತದೆ ಎಂದಿದ್ದಾರೆ. ಇದನ್ನೂ ಓದಿ: ಮತ್ತೆ ಕದನ ವಿರಾಮ ಉಲ್ಲಂಘಿಸಿ ಬಾಲ ಬಿಚ್ಚಿದ ಪಾಕ್‌ – ಜಮ್ಮು, ರಾಜಸ್ಥಾನದ ಹಲವೆಡೆ ಸ್ಫೋಟದ ಸದ್ದು

ಭಾರತವು ಡ್ರೋನ್ ಮತ್ತು ಕ್ಷಿಪಣಿ ದಾಳಿಗಳ ಮೂಲಕ ಪಾಕಿಸ್ತಾನಿ ನಾಗರಿಕರನ್ನು ಗುರಿಯಾಗಿಸಿಕೊಂಡಿದೆ. ಭಾರತ ವಸತಿ ಪ್ರದೇಶಗಳ ಮೇಲೆ ದಾಳಿ ಮಾಡುವ ಮೂಲಕ ನಮ್ಮ ತಾಳ್ಮೆಯನ್ನ ಪರೀಕ್ಷಿಸಿತು. ಪಾಕಿಸ್ತಾನದ ಸೇನಾ ಶಿಬಿರಗಳು ಮತ್ತು ಶಸ್ತ್ರಾಸ್ತ್ರ ಡಿಪೋಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲು ಭಾರತೀಯ ಸೇನೆ ವಿಫಲ ಪ್ರಯತ್ನಗಳನ್ನು ಮಾಡಿತು ಎಂದು ಬೊಗಳೆ ಬಿಟ್ಟಿದ್ದಾರೆ. ಇದನ್ನೂ ಓದಿ: ಭೂ, ಜಲ, ವಾಯು ಮಿಲಿಟರಿ ಕಾರ್ಯಾಚರಣೆ ನಿಲ್ಲಿಸಿ ಕದನ ವಿರಾಮಕ್ಕೆ ಭಾರತ-ಪಾಕ್‌ ಒಪ್ಪಿಗೆ

vikram misri 1

ಟ್ರಂಪ್‌ಗೆ ಕೃತಜ್ಞತೆ
ಇದೇ ವೇಳೆ ಕದನ ವಿರಾಮಕ್ಕಾಗಿ ಶೆಹಬಾಜ್ ಷರೀಫ್ ಚೀನಾ, ಡೊನಾಲ್ಡ್ ಟ್ರಂಪ್ ಮತ್ತು ಗಲ್ಫ್ ರಾಷ್ಟ್ರಗಳಿಗೆ ಧನ್ಯವಾದ ಅರ್ಪಿಸಿದರು. ನಾನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ಜೊತೆಗೆ ಕದನ ವಿರಾಮದಲ್ಲಿ ಪ್ರಮುಖ ಪಾತ್ರ ವಹಿಸಿದ ಸೌದಿ ಅರೇಬಿಯಾ, ಯುಎಇ, ಟರ್ಕಿ ಮತ್ತು ಕತಾರ್‌ಗಳಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದರು. ಇದನ್ನೂ ಓದಿ: ಗುಂಡಿನ ದಾಳಿ, ಮಿಲಿಟರಿ ಕಾರ್ಯಾಚರಣೆ ನಿಲ್ಲಿಸಲು ಭಾರತ-ಪಾಕ್‌ ಒಪ್ಪಂದ: ಜೈಶಂಕರ್‌

Pak PM

ಚೀನಾಕ್ಕೆ ವಿಶೇಷ ಧನ್ಯವಾದ
ಇನ್ನೂ ಪಾಕ್‌ ಪ್ರಧಾನಿ ಚೀನಾವನ್ನ ತನ್ನ ವಿಶ್ವಾಸಾರ್ಹ ಸ್ನೇಹಿತ ಎಂದು ಬಣ್ಣಿಸಿದ್ರು. ಚೀನಾವನ್ನ ಉಲ್ಲೇಖಿಸದೆ ನನ್ನ ಭಾಷಣ ಅಪೂರ್ಣ. ನಾನು ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರಿಗೆ ನನ್ನ ಹೃತ್ಪೂರ್ವಕ ಕೃತಜ್ಞತೆ ಅರ್ಪಿಸುತ್ತೇನೆ. 5 ದಶಕಗಳಿಗೂ ಹೆಚ್ಚು ಕಾಲ, ಪ್ರತಿಯೊಂದು ಬಿಕ್ಕಟ್ಟಿನಲ್ಲಿಯೂ ಚೀನಾ ನಮ್ಮೊಂದಿಗೆ ನಿಂತಿದೆ ಎಂದು ಬೀಗಿದರು. ಇದನ್ನೂ ಓದಿ: ಪಹಲ್ಗಾಮ್‌ ಭಯೋತ್ಪಾದಕ ದಾಳಿಯನ್ನು ಚೀನಾ ಖಂಡಿಸುತ್ತದೆ: ಅಜಿತ್‌ ದೋವಲ್‌ಗೆ ಫೋನ್‌ ಕರೆಯಲ್ಲಿ ಚೀನಾ ಸ್ಪಷ್ಟನೆ

Share This Article