ಪಾಕ್‌ನಿಂದ ಶೆಲ್ ದಾಳಿ – ಸ್ಥಳಾಂತರಗೊಂಡ ಜನರೊಂದಿಗೆ ಕ್ರಿಕೆಟ್ ಆಡಿದ ಜಮ್ಮು ಸಿಎಂ

Public TV
1 Min Read
Omar Abdulla

ಶ್ರೀನಗರ: ಎಲ್‌ಒಸಿಯಲ್ಲಿ ಪಾಕಿಸ್ತಾನ ನಡೆಸುತ್ತಿರುವ ಅಪ್ರಚೋದಿತ ಗುಂಡಿನ ದಾಳಿಯಿಂದ ಹಾನಿಗೊಳಗಾದ ನಿವಾಸಿಗಳಿಗೆ ಆಶ್ರಯ ನೀಡಲು ಸ್ಥಾಪಿಸಲಾದ ನಿರಾಶ್ರಿತರ ಕೇಂದ್ರದಲ್ಲಿ ಜಮ್ಮು ಮತ್ತು ಕಾಶ್ಮೀರದ(Jammu and Kashmir) ಸಿಎಂ ಒಮರ್ ಅಬ್ದುಲ್ಲಾ(Omar Abdullah) ಕ್ರಿಕೆಟ್ ಆಡಿದರು.

ಸಾಂಬಾದಲ್ಲಿನ(Samba)  ನಿರಾಶ್ರಿತರ ಕೇಂದ್ರದಲ್ಲಿ ಆಶ್ರಯ ಪಡೆಯುತ್ತಿರುವ ಸ್ಥಳೀಯರನ್ನು ಭೇಟಿಯಾದ ಸಂದರ್ಭದಲ್ಲಿ ಒಮರ್ ಅಬ್ದುಲ್ಲಾ ಅವರು ಪುಟ್ಟ ಬಾಲಕನೊಂದಿಗೆ ಕ್ರಿಕೆಟ್ ಆಡಿದ್ದು, ಅವರು ಬ್ಯಾಟ್ ಬೀಸಿರುವ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ಇದೀಗ ಹರಿದಾಡುತ್ತಿವೆ. ಇದನ್ನೂ ಓದಿ: ಭಾರತ-ಪಾಕ್ ಯುದ್ಧ ಭೀತಿ – ಕುತುಬ್ ಮಿನಾರ್ ಸೇರಿ ದೆಹಲಿಯ ಹಲವು ಐತಿಹಾಸಿಕ ತಾಣಗಳಿಗೆ ಬಿಗಿಭದ್ರತೆ

ಗುರುವಾರ, ಜಮ್ಮು ಮತ್ತು ಪೂಂಚ್ ಜಿಲ್ಲೆಗಳಲ್ಲಿ ಪಾಕ್ ನಡೆಸಿದ ಡ್ರೋನ್, ಕ್ಷಿಪಣಿ ಹಾಗೂ ಶೆಲ್ ದಾಳಿಯನ್ನು ಒಮರ್ ಅಬ್ದುಲ್ಲಾ ಅವರು ತೀವ್ರವಾಗಿ ಖಂಡಿಸಿದರು. ಈ ಕುರಿತು ಮಾಧ್ಯಮಳೊಂದಿಗೆ ಮಾತನಾಡಿದ ಅವರು, ನಾವು ಈ ಪರಿಸ್ಥಿತಿಯನ್ನು ಸೃಷ್ಟಿಸಲಿಲ್ಲ. ಪಹಲ್ಗಾಮ್‌ನಲ್ಲಿ(Pahalgam Attack) ಪಾಕ್ ಉಗ್ರರು ನಮ್ಮ ಜನರ ಮೇಲೆ ದಾಳಿ ನಡೆಸಿ ಅಮಾಯಕರನ್ನ ಕೊಂದರು. ಅವರ ಈ ದಾಳಿಗೆ ನಾವು ಪ್ರತಿಕ್ರಿಯಿಸಬೇಕಾಯಿತು ಎಂದರು. ಇದನ್ನೂ ಓದಿ: ಭಾರತ-ಪಾಕ್ ನಡುವೆ ಉದ್ವಿಗ್ನ ಹೊತ್ತಲ್ಲೇ ದಿಟ್ಟ ನಿರ್ಧಾರ ಕೈಗೊಂಡ ಕಮಲ್ ಹಾಸನ್

ಗುರುವಾರ ರಾತ್ರಿ ಪಾಕಿಸ್ತಾನದ ಸಶಸ್ತ್ರ ಪಡೆಗಳು ಡ್ರೋನ್ ಹಾಗೂ ಕ್ಷಿಪಣಿ ದಾಳಿಗೆ ಮುಂದಾಗಿತ್ತು. ಈ ವೇಳೆ ನಮ್ಮ ಸೇನೆಯು ಜಮ್ಮು ಮತ್ತು ಕಾಶ್ಮೀರ, ರಾಜಸ್ಥಾನ, ಪಂಜಾಬ್ ಮತ್ತು ಗುಜರಾತ್‌ನ ಪಟ್ಟಣಗಳಲ್ಲಿ ಸೈರನ್ ಮೊಳಗಿಸಿ ಜನರಿಗೆ ಮುನ್ನೆಚ್ಚರಿಕೆ ನೀಡಿತು. ಅಲ್ಲದೇ ಪಾಕ್‌ನ ಡ್ರೋನ್‌ಗಳನ್ನು ಹೊಡೆದುರುಳಿಸುವಲ್ಲಿ ಸೇನೆ ಯಶಸ್ವಿಯಾಯಿತು ಎಂದು ಹೇಳಿದರು.

 

Share This Article