– ಪಾಕ್ ಕ್ಷಿಪಣಿ ದಾಳಿ ಯತ್ನಕ್ಕೆ ಭಾರತದ ಪ್ರತ್ಯುತ್ತರ
ನವದೆಹಲಿ: 25 ನಿಮಿಷದ ಪ್ರತೀಕಾರದ ವೈಮಾನಿಕ ದಾಳಿಯಲ್ಲಿ ಪಾಕಿಸ್ತಾನ(Pakistan) ಉಗ್ರರ ನೆಲೆಗಳು ಉಡೀಸ್ ಆಗಿದ್ದು, ಆಪರೇಷನ್ ಸಿಂಧೂರ(Operation Sindoor) ಪಾಕಿಸ್ತಾನದ ಭಯೋತ್ಪಾದಕ ಸಂಘಟನೆಗಳ ಬುಡಕ್ಕೆ ಬೆಂಕಿ ಹಚ್ಚಿ ಬಿಸಿ ಮುಟ್ಟಿಸಿದೆ. ಇದರ ಬೆನ್ನಲ್ಲೇ ಪಾಕ್ ಉಗ್ರರ ವಿರುದ್ಧ ಭಾರತ ನಡೆಸಿರೋ ಆಪರೇಷನ್ ಸಿಂಧೂರ ಕಾರ್ಯಾಚರಣೆ ಇನ್ನೂ ಮುಗಿದಿಲ್ಲ. ಪಿಕ್ಚರ್ ಅಭಿ ಬಾಕಿ ಹೇ ಎನ್ನುವ ಮೂಲಕ ರಕ್ಷಣಾ ಸಚಿವ ರಾಜನಾಥ್ ಸಿಂಗ್(Rajnath Singh) ಖಡಕ್ ವಾರ್ನ್ ಮಾಡಿದ್ದಾರೆ.
ಭಾರತ ನಡೆಸಿದ ಏರ್‌ಸ್ಟ್ರೈಕ್‌ನಲ್ಲಿ 100 ಮಂದಿ ಉಗ್ರರು ಮಟಾಷ್ ಆಗಿದ್ದಾರೆ ಎಂದು ಸರ್ವಪಕ್ಷ ಸಭೆಯಲ್ಲಿ ಮಾಹಿತಿ ನೀಡಿದ್ದಾರೆ. ರಕ್ಷಣಾ ಸಚಿವರು ವಾರ್ನಿಂಗ್ ಕೊಟ್ಟ ಕೆಲವೇ ಗಂಟೆಗಳಲ್ಲಿ ಭಾರತ ತನ್ನ ತಾಕತ್ತು ತೋರಿಸಿದೆ. ಇದನ್ನೂ ಓದಿ: ಭಾರತ ಡ್ರೋನ್ ದಾಳಿ – ನೂರಾರು ಕೋಟಿ ವೆಚ್ಚದಲ್ಲಿ ನವೀಕರಿಸಿದ್ದ ರಾವಲ್ಪಿಂಡಿ ಸ್ಟೇಡಿಯಂಗೆ ಭಾರಿ ಹಾನಿ
ಪಾಕಿಸ್ತಾನದ ಮೇಲೆ ಭಾರತ(India) ಮತ್ತೊಂದು ಡೆಡ್ಲಿ ಅಟ್ಯಾಕ್ ಮಾಡಿದೆ. ಪಾಕ್‌ನ ಕ್ಷಿಪಣಿ ದಾಳಿ ಯತ್ನಕ್ಕೆ ಭಾರತ ಪ್ರತ್ಯುತ್ತರ ನೀಡಿದೆ. ಭಾರತ ಸುದರ್ಶನ ಚಕ್ರ ಪ್ರಯೋಗಿಸಿ ಪಾಕ್‌ನ ಮಿಸೈಲ್‌ನನ್ನು ಹೊಡೆದುರುಳಿದ್ದು, ಏರ್ ಫೋರ್ಸ್ನ ಎಸ್-400 ಸುದರ್ಶನ ಚಕ್ರ ಬಳಸಿ ಪಾಕ್‌ನ ಕ್ಷಿಪಣಿಗಳನ್ನು ಉಡೀಸ್ ಮಾಡಿದೆ. ಪಾಕ್‌ನ ಹೆಚ್‌ಕ್ಯೂ-9 ವಾಯು ರಕ್ಷಣಾ ಕ್ಷಿಪಣಿ ಉಡಾವಣಾ ಘಟಕಗಳೇ ಹಾನಿಗೊಳಗಾಗಿವೆ. ಇದನ್ನೂ ಓದಿ: ರಾಜ್ಯದ 17 ಅಣೆಕಟ್ಟುಗಳಲ್ಲಿ ಅಲರ್ಟ್ – ನಾರಾಯಣಪುರ ಡ್ಯಾಂಗೆ 42 ಪೊಲೀಸ್ ಸಿಬ್ಬಂದಿ ನಿಯೋಜನೆ
ಭಾರತದ 15 ನಗರಗಳನ್ನು ಪಾಕ್ ಟಾರ್ಗೆಟ್ ಮಾಡಿತ್ತು. ಇದಕ್ಕೆ ಪ್ರತಿಯಾಗಿ ಭಾರತ ದಿಟ್ಟ ಉತ್ತರ ನೀಡಿದ್ದು, ಲಾಹೋರ್‌ನ ಏರ್‌ಡಿಫೆನ್ಸ್ ಅನ್ನು ಉಡೀಸ್ ಮಾಡಿದೆ. ಲಾಹೋರ್, ಕರಾಚಿ, ರಾವಲ್‌ಪಿಂಡಿ, ಸಿಯಾಲ್ ಕೋಟ್ ಸೇರಿದಂತೆ 12 ನಗರಗಳನ್ನು ಟಾರ್ಗೆಟ್ ಮಾಡಿದ್ರು ಎಂಬ ಮಾಹಿತಿ ಲಭ್ಯವಾಗಿದೆ.
ಇನ್ನು ಬಹವಾಲ್‌ಪುರ ಮರ್ಕಜ್ ಸುಭಾನಲ್ಲಾ ಮಸೀದಿ ಛಿದ್ರ-ಛಿದ್ರವಾಗಿದೆ. ಜೈಷ್ ಇ ಮೊಹಮದ್, ಲಷ್ಕರ್ ಇ ತೊಯ್ಬಾ ಪ್ರಧಾನ ಕಚೇರಿಗಳು ಸರ್ವನಾಶವಾಗಿದೆ. ಪಿಓಕೆ ಹಾಗೂ ಪಾಕಿಸ್ತಾನದಲ್ಲಿರುವ ಭಯೋತ್ಪಾದಕ 9 ನೆಲೆಗಳ ಮೇಲೆ ಕ್ಷಿಪಣಿ ದಾಳಿ ಮೂಲಕ ಉಡೀಸ್ ಮಾಡಿದೆ. ಇದನ್ನೂ ಓದಿ: ಫ್ಯಾನ್ಸ್‌ಗೆ ಗುಡ್ ನ್ಯೂಸ್- ಬರಲಿದೆ ವಿಜಯ್ ಸೇತುಪತಿ ನಟನೆಯ ‘ಮಹಾರಾಜ’ ಸೀಕ್ವೆಲ್
ಬುಧವಾರ ಭಾರತ ಸೇನೆಯು ಪಾಕಿಸ್ತಾನದ ಮೇಲೆ ಕ್ಷಿಪಣಿ ದಾಳಿ ನಡೆಸಿದ ಬಳಿಕ ಉಗ್ರರ ನೆಲೆ ಧ್ವಂಸಗೊಂಡಿದೆ. ಇಲ್ಲಿಂದಲೇ ಉಗ್ರ ಮಸೂದ್ ಅಜರ್ ಜಿಹಾದ್‌ಗೆ ಕರೆ ನೀಡುತ್ತಿದ್ದ. ಕ್ಷಿಪಣಿ ದಾಳಿಯಿಂದಾಗಿ ಧ್ವಂಸವಾದ ಕಟ್ಟಡದ ಪೂರ್ಣ ವೀಡಿಯೋ ಬಿಡುಗಡೆಯಾಗಿದೆ. ಆ ವಿಡಿಯೋದಲ್ಲಿ ಉಗ್ರರ ನೆಲೆ ಪೂರ್ಣ ಪ್ರಮಾಣದಲ್ಲಿ ನಿರ್ನಾಮವಾಗಿದೆ.
ಭಾರತದ ಮಿಸೈಲ್‌ಗೆ ಪೂರ್ತಿ ಟೆರರ್ ಕ್ಯಾಂಪ್ ಛಿದ್ರಗೊಂಡಿದೆ. ಸದ್ಯ ಟೆರರ್ ಕ್ಯಾಂಪ್‌ಗೆ ಪಾಕ್ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಸದ್ಯ ಸ್ಥಳೀಯ ಜನರು ದಾಳಿಯಾದ ಪ್ರದೇಶಕ್ಕೆ ಭೇಟಿ ಕೊಡುತ್ತಿದ್ದಾರೆ. ಪೂರ್ತಿ ಟೆರರ್ ಕ್ಯಾಂಪ್ ಅನ್ನ ಪಾಕ್ ಸೀಲ್ ಮಾಡಿದೆ. ಮ್ಯಾಕ್ಸರ್ ಟೆಕ್ನಾಲಜೀಸ್ ಬಿಡುಗಡೆ ಮಾಡಿದ ಉಪಗ್ರಹ ಚಿತ್ರಗಳಲ್ಲಿ ನಿರ್ಣಾಯಕ ಸ್ಥಳಗಳಲ್ಲಿ ದಾಳಿಯಾಗಿರುವುದನ್ನು ತೋರಿಸಲಾಗಿದೆ. ಇದನ್ನೂ ಓದಿ: ಪಾಕ್ ಮಿಸೈಲ್‌ಗಳಿಂದ ಭಾರತ ರಕ್ಷಿಸಿದ S-400 ‘ಸುದರ್ಶನ ಚಕ್ರ’- ಏನಿದರ ವಿಶೇಷತೆ?
ಇತ್ತ ಪಾಕ್ ಉಗ್ರ ಸಂಘಟನೆ ಲಷ್ಕರ್ ಹೆಡ್‌ಕ್ವಾಟ್ರಸ್ ಮುರಿಡ್ಕೆ ಕೂಡ ಸ್ಮಶಾನವಾಗಿದೆ. `ಭಯೋತ್ಪಾದಕರ ನರ್ಸರಿ’ ಅಂತಲೇ ಕುಖ್ಯಾತಿ ಪಡೆದಿದೆ ಈ ಮುರಿಡ್ಕೆ. ಅಜ್ಮಲ್ ಕಸಬ್, ಡೇವಿಡ್ ಹೆಡ್ಲಿಗೆ ಟ್ರೈನಿಂಗ್ ಕೊಟ್ಟಿದ್ದ ಕ್ಯಾಂಪ್ ಈಗ ನಾಮಾವಷೇಶವಾಗಿದೆ.
ಹಲವು ವರ್ಷಗಳಿಂದ ಭಾರತೀಯ ಗುಪ್ತಚರ ಸಂಸ್ಥೆಗಳು ಮುರಿಡ್ಕೆ ಮೇಲೆ ನಿಗಾಯಿಟ್ಟಿತ್ತು. ನಿನ್ನೆ ನಡೆದ ದಾಳಿಯಲ್ಲಿ ಅಟ್ಟಾರಿ-ವಾಘಾ ಗಡಿಯಿಂದ ಸುಮಾರು 25-30 ಕಿ.ಮೀ ದೂರದಲ್ಲಿದ್ದ ಮುರಿಡ್ಕೆಯನ್ನು ಧ್ವಂಸ ಮಾಡಲಾಗಿದೆ. ಸುಮಾರು 82 ಎಕರೆ ವಿಸ್ತೀರ್ಣದ ಮರ್ಕಜ್ ತೈಬಾ ಕಾಂಪ್ಲೆಕ್ಸ್ ಕೂಡ ನೆಲಸಮವಾಗಿದೆ. ಇದನ್ನೂ ಓದಿ: ದೇವರೇ ನಮ್ಮಿಂದ ತಪ್ಪಾಗಿದೆ, ದಯವಿಟ್ಟು ಕಾಪಾಡು – ಸಂಸತ್‌ನಲ್ಲಿ ಕಣ್ಣೀರಿಟ್ಟ ಪಾಕ್ ಸಂಸದ
ಆಪರೇಷನ್ ಸಿಂಧೂರದಲ್ಲಿ ಉಗ್ರ ಮಸೂದ್ ಅಜರ್‌ನ ಸೋದರ ಮುಫ್ತಿ ಅಬ್ದುಲ್ ರೌಫ್ ಅಸ್ಗರ್‌ನ ನೆತ್ತರು ಹರಿದಿದೆ. ಈತ ಐಸಿ-814 ಪ್ರಯಾಣಿಕ ವಿಮಾನದ ಹೈಜಾಕ್‌ನ ಮಾಸ್ಟರ್ ಮೈಂಡ್ ಆಗಿದ್ದ. 1999 ಡಿ. 24ರಂದು ವಿಮಾನವನ್ನು ಹೈಜಾಕ್ ಮಾಡಲಾಗಿತ್ತು. ಇದೀಗ ಆಪರೇಷನ್ ಸಿಂಧೂರ ದಾಳಿಗೆ ಅಸ್ಗರ್ ಪ್ರಾಣಬಿಟ್ಟಿದ್ದಾನೆ.
ಇದನ್ನೂ ಓದಿ: