– PSL ಪಂದ್ಯ ಆರಂಭಕ್ಕೂ ಮುನ್ನವೇ ಘಟನೆ, ಆದಾಯಕ್ಕೂ ಕುತ್ತು
ಇಸ್ಲಾಮಾಬಾದ್ (ರಾವಲ್ಪಿಂಡಿ): ದೇಶದ 15 ಪ್ರಮುಖ ನಗರಗಳನ್ನು ಗುರಿಯಾಗಿಸಿದ್ದ ಪಾಕಿಸ್ತಾನ, ಭಾರತದ ಡ್ರೋನ್ ದಾಳಿಗೆ (Drone Attack) ತತ್ತರಿಸಿದೆ. ಭಾರತದ ಇಂದು ನಡೆಸಿದ ಡ್ರೋನ್ ಮತ್ತು ಕ್ಷಿಪಣಿ ದಾಳಿಗೆ ರಾವಲ್ಪಿಂಡಿ ಕ್ರಿಕೆಟ್ ಸ್ಟೇಡಿಯಂನ (Rawalpindi Cricket Stadium) ಒಂದು ಭಾಗವೇ ಛಿದ್ರ ಛಿದ್ರವಾಗಿದೆ.
🚨 An Indian drone crashed near the food street adjacent to #Rawalpindi Cricket Stadium after colliding with a tree. The crash caused a fire at the site. On one hand, we are attacking India through social media; on the other hand, all of this is being watched . What’s going on? pic.twitter.com/tKs10Nikd1
— Islamabadies (@Islamabadies) May 8, 2025
ಕೆಲ ದಿನಗಳ ಹಿಂದಷ್ಟೇ ಪಾಕಿಸ್ತಾನ ಚಾಂಪಿಯನ್ಸ್ ಟ್ರೋಫಿ (Champions Trophy) ಟೂರ್ನಿಗೆ ಆತಿಥ್ಯ ವಹಿಸಿತ್ತು. ಹೆಚ್ಚಿನ ಸಂಖ್ಯೆಯ ಕ್ರಿಕೆಟ್‌ಪ್ರಿಯರನ್ನು ಸೆಳೆದು ಆದಾಯ ಗಳಿಸಲು ನೂರಾರು ಕೋಟಿ ವೆಚ್ಚದಲ್ಲಿ ರಾವಲ್ಪಿಂಡಿ ಮೈದಾನವನ್ನು ನವೀಕರಿಸಿತ್ತು. ಆದ್ರೆ ಇಂದು ಭಾರತ ನಡೆಸಿದ ದಾಳಿಯಲ್ಲಿ ಸ್ಟೇಡಿಯಂನ ಒಂದು ಭಾಗವೇ ಛಿದ್ರವಾಗಿದೆ. ಕುರಿತ ವಿಡಿಯೋಗಳು ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿವೆ. ಇದನ್ನೂ ಓದಿ: ಪಾಕ್ ಮಿಸೈಲ್‌ಗಳಿಂದ ಭಾರತ ರಕ್ಷಿಸಿದ S-400 ‘ಸುದರ್ಶನ ಚಕ್ರ’- ಏನಿದರ ವಿಶೇಷತೆ?
17 Indian Kamikazi drone strikes in Lahore, Sheikhupura, Sialkot, Gujranwala, Narowal, and Chakwal. (25 explosions, 7 of them in Islamabad and Rawalpindi)
This is to check if Pakistan’s anti-air system is working. Now, you can guess what will happen next. pic.twitter.com/pnT3u73Wnf
— Imtiaz Mahmood (@ImtiazMadmood) May 8, 2025
PSL ಪಂದ್ಯಕ್ಕೂ ಮುನ್ನವೇ ಘಟನೆ:
ಡ್ರೋನ್ ಅಪ್ಪಳಿಸಿದ ರಾವಲ್ಪಿಂಡಿ ಕ್ರೀಡಾಂಗಣದಲ್ಲಿಂದು ಪಾಕಿಸ್ತಾನ ಸೂಪರ್ ಲೀಗ್ ಪಂದ್ಯ ನಿಗದಿಯಾಗಿತ್ತು. ರಾತ್ರಿ 8 ಗಂಟೆಗೆ ಪೇಶಾವರ್ ಝಲ್ಮಿ ಮತ್ತು ಕರಾಚಿ ಕಿಂಗ್ಸ್ ತಂಡಗಳ ನಡುವೆ ಪಂದ್ಯ ಆರಂಭವಾಗಬೇಕಿತ್ತು. ಇದೀಗ ಡ್ರೋನ್ ಅಪ್ಪಳಿಸಿದ್ದು, ಭದ್ರತಾ ಕಳವಳ ಹೆಚ್ಚಿಸಿದೆ. ದಾಳಿಯ ಬಳಿಕ ಪಂದ್ಯವನ್ನು ಕರಾಚಿಗೆ ಸ್ಥಳಾಂತರಿಸಲು ಸಿದ್ಧತೆ ನಡೆಯುತ್ತಿದೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಪಾಕಿಸ್ತಾನದ HQ-9 ವಾಯು ರಕ್ಷಣಾ ಕ್ಷಿಪಣಿ ಉಡಾವಣಾ ಕೇಂದ್ರಗಳೇ ಉಡೀಸ್
ಇನ್ನೂ ಭಾರತದ ಡ್ರೋನ್ ದಾಳಿಯಿಂದ ಆತಂಕಗೊಂಡಿರುವ ಕ್ರಿಕೆಟ್ ಪ್ರಿಯರು ಪಂದ್ಯ ವೀಕ್ಷಣೆಗೆ ಹಿಂದೇಟು ಹಾಕಿದ್ದಾರೆ. ಇದು ಪಾಕಿಸ್ತಾನ ಕ್ರಿಕೆಟ್ ಬೋರ್ಡ್‌ನ ಆರ್ಥಿಕತೆಗೂ ಪೆಟ್ಟು ನೀಡಿದಂತಾಗಿದೆ. ಇದನ್ನೂ ಓದಿ: India Strikes | ಯುಸ್ ನಾಗರಿಕರು ಪಾಕ್ ತೊರೆಯುವಂತೆ ಅಮೆರಿಕ ರಾಯಭಾರ ಕಚೇರಿ ಸೂಚನೆ
ಲಾಹೋರ್ ರೆಡಾರ್ ಕೇಂದ್ರ ಧ್ವಂಸ
ಭಾರತದ ನಗರಗಳ ಮೇಲೆ ದಾಳಿ ನಡೆಸಲು ಹೊಂಚು ಹಾಕಿದ್ದ ಪಾಕ್‌ಗೆ ಭಾರತ ದಿಟ್ಟ ಉತ್ತರ ನೀಡಿದೆ. ಭಾರತದ ವಾಯುಸೇನೆಯು ಲಾಹೋರ್‌ನಲ್ಲಿರುವ ರೆಡಾರ್ ಕೇಂದ್ರವನ್ನೇ ಧ್ವಂಸ ಮಾಡಿದೆ. ಶೇಖ್‌ಪುರ, ಸಿಯಾಲ್ ಕೋಟ್, ಗುಜರನ್ ವಾಲಾ ಮತ್ತು ನರೊವಾಲಾ ಮತ್ತ ಚಕ್ವಾಲ್ ಮೇಲೂ ಭಾರತದ ಕಾಮಕಾಜಿ ಡ್ರೋನ್ ದಾಳಿ (Kamikazi Drone Strike) ನಡೆಸಿದೆ. ಒಟ್ಟು 25 ಕ್ಷಿಪಣಿಗಳನ್ನು ಭಾರತ ಹಾರಿಸಿದೆ ಇದರಲ್ಲಿ 7 ಇಸ್ಲಾಮಾಬಾದ್ ಮತ್ತು ರಾವಲ್ಪಿಂಡಿಯನ್ನು ಗುರಿಯಾಗಿಸಿವೆ.