ಇಸ್ಲಾಮಾಬಾದ್: ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರ (PoK)ದ ಉಗ್ರ ತಾಣಗಳ ಮೇಲೆ ಭಾರತ ನಡೆಸಿದ ಏರ್‌ಸ್ಟ್ರೈಕ್ ಬಳಿಕ ಪಾಕಿಸ್ತಾನದ ರೆಡಾರ್ (Pakistans Radar) ಮತ್ತು ವಾಯು ರಕ್ಷಣಾ ವ್ಯವಸ್ಥೆಯ ಮೂಲಸೌಕರ್ಯದ ವಿಶ್ವಾಸಾರ್ಹತೆ ಮತ್ತೊಮ್ಮೆ ಬಟಾಬಯಲಾಗಿದೆ.
ಪಾಕಿಸ್ತಾನಕ್ಕೆ ಸರಬರಾಜು ಮಾಡಿದ ಚೀನಾ ನಿರ್ಮಿತ ರೆಡಾರ್ (Chinese Radars) ವ್ಯವಸ್ಥೆಗಳು ಭಾರತೀಯ ಸೇನೆಯ ವಾಯುದಾಳಿಯನ್ನು ಪತ್ತೆಹಚ್ಚುವಲ್ಲಿ ವಿಫಲವಾಗಿದೆ ಎಂದು ಗುಪ್ತಚರ ಮೂಲಗಳು ತಿಳಿಸಿವೆ ಎಂದು ವರದಿಯಾಗಿದೆ. 2022ರ ಮಾರ್ಚ್‌ನಲ್ಲಿಯೂ ಭಾರತದ ಬ್ರಹ್ಮೋಸ್ ಕ್ಷಿಪಣಿಯ ಆಕಸ್ಮಿಕ ದಾಳಿಯನ್ನ ಪತ್ತೆಹಚ್ಚುವಲ್ಲಿ ಪಾಕಿಸ್ತಾನದ ರೆಡಾರ್ ವ್ಯವಸ್ಥೆ ವಿಫಲವಾಗಿತ್ತು. ಇದೀಗ ʻಆಪರೇಷನ್ ಸಿಂಧೂರʼ ಸಂದರ್ಭದಲ್ಲೂ ಭಾರತೀಯ ಕ್ಷಿಪಣಿಗಳನ್ನು ಪತ್ತೆ ಹಚ್ಚುವಲ್ಲಿ ವಿಫಲವಾಗಿದೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಆಪರೇಷನ್ ಸಿಂಧೂರ | ಉಗ್ರರ ಶವಗಳನ್ನು ಟ್ರ್ಯಾಕ್ಟರ್‌ನಲ್ಲಿ ಸಾಗಿಸಿದ ಭಿಕಾರಿಸ್ತಾನ್!
ಚೀನಾದ ರೆಡಾರ್ ವಿಫಲ
ಮೇ 7ರಂದು ದೇಶಾದ್ಯಂತ ಮಾಕ್ ಡ್ರಿಲ್ ನಡೆಸಲು ಭಾರತೀಯ ಕೇಂದ್ರ ಸಚಿವಾಲಯ ಕರೆ ಕೊಟ್ಟಿತ್ತು, ಇಂದು ಸೂರ್ಯೋದಯಕ್ಕೂ ಮುನ್ನವೇ ಪಾಕ್ ಮತ್ತು ಪಾಕ್ ಆಕ್ರಮಿತ ಕಾಶ್ಮೀರದ ಉಗ್ರ ತಾಣಗಳ ಮೇಲೆ ದಾಳಿ ನಡೆಸಿ ಯಾರೂ ಊಹಿಸದ ರೀತಿಯಲ್ಲಿ ಪಾಕ್‌ಗೆ ಶಾಕ್ ಕೊಟ್ಟಿದೆ. ಆದ್ರೆ ಪಾಕಿಸ್ತಾನವು ತನ್ನ ರಕ್ಷಣಾ ವ್ಯವಸ್ಥೆಗೆ ಅಳವಡಿಸಿಕೊಂಡಿರುವ ಚೀನಾದ ತಂತ್ರಜ್ಞಾನ ಆಧರಿತ ರೆಡಾರ್ ವ್ಯವಸ್ಥೆಯು ಸೂಕ್ತ ಸಮಯದಲ್ಲಿ ಕ್ಷಿಪಣಿಗಳನ್ನ ಪತ್ತೆ ಹಚ್ಚಲು ಸಾಧ್ಯವಾಗದೇ ಬಹುದೊಡ್ಡ ವೈಫಲ್ಯ ಅನುಭವಿಸಿದೆ. ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಚೀನಾದ ರಕ್ಷಣಾ ಉತ್ಪನ್ನಗಳ ಬಗ್ಗೆ ಪ್ರಶ್ನೆ ಮಾಡುವಂತಾಗಿದೆ. ಇದನ್ನೂ ಓದಿ: ವಾಯುನೆಲೆ ನಿರ್ಬಂಧ – ಮೇ 10ರವರೆಗೆ 165ಕ್ಕೂ ಹೆಚ್ಚು ಇಂಡಿಗೋ ವಿಮಾನ ಬಂದ್
ಪಾಕಿಸ್ತಾನದ ವಾಯುರಕ್ಷಣಾ ವ್ಯವಸ್ಥೆಯಲ್ಲಿ ಲೋಪ ಸಂಭವಿಸಿದ್ದು ಇದೇ ಮೊದಲಲ್ಲ, 2019ರ ಬಾಲಾಕೋಟ್ ಸರ್ಜಿಕಲ್ ಸ್ಟ್ರೈಕ್ ಸಂದರ್ಭದಲ್ಲೂ ಇದೇ ರೀತಿ ಪಾಕಿಸ್ತಾನದ ರಾಡಾರ್ ವ್ಯವಸ್ಥೆಯಲ್ಲಿ ಲೋಪ ಸಂಭವಿಸಿತ್ತು. ಆಗ ಪಾಕಿಸ್ತಾನ ಚೀನಾ ನಿರ್ಮಿತ ರಾಡಾರ್‌ಗಳ ಮೊರೆ ಹೋಗಿತ್ತು. ಮೊದಲ ಬ್ಯಾಚ್‌ನ 6 ರೆಡಾರ್ ಸಿಸ್ಟಂಗಳನ್ನು 2015 ಮತ್ತು 2016ರಲ್ಲಿ ಚೀನಾ ಪಾಕ್‌ಗೆ ಹಸ್ತಾಂತರ ಮಾಡಿತ್ತು. ಅಷ್ಟೇ ಅಲ್ಲದೇ ಚೀನಾದಿಂದ ಪಾಕ್ 9 LY-80 LOMADS (ಕಡಿಮೆ ಮತ್ತು ಮಧ್ಯಮ ಎತ್ತರದ ವಾಯು ರಕ್ಷಣಾ ವ್ಯವಸ್ಥೆಗಳು) ಖರೀದಿಸಿತ್ತು. ಇದನ್ನು ವಿಶ್ವದ ಅತ್ಯಂತ ಮುಂದುವರಿದ ರಕ್ಷಣಾ ವ್ಯವಸ್ಥೆಗಳಲ್ಲಿ ಒಂದು ಎಂದು ಚೀನಾ ಬುರುಡೆ ಬಿಟ್ಟಿತ್ತು. ಇದೀಗ ʻಆಪರೇಷನ್ ಸಿಂಧೂರʼ ತಡೆಯುವಲ್ಲಿ ವಿಫಲವಾದ ಬಳಿಕ ಪಾಕ್ ನಿರೀಕ್ಷೆ ಸುಳ್ಳಾಗಿದೆ. ಇದನ್ನೂ ಓದಿ: JEM ಉಗ್ರ ಸಂಘಟನೆ ಮುಖ್ಯಸ್ಥ ಮಸೂದ್ ಅಜರ್ ಕುಟುಂಬದ 10 ಜನ ಸೇರಿ 14 ಮಂದಿ ಹತ್ಯೆ
ಭಾರತದ ಸೂಪರ್‌ಸಾನಿಕ್ ಮತ್ತು ಬ್ಯಾಲಿಸ್ಟಿಕ್ ಕ್ಷಿಪಣಿಗಳ ತೀವ್ರ ವೇಗ ಮತ್ತು ಎತ್ತರದ ಕಾರಣದಿಂದಾಗಿ ರೆಡಾರ್‌ಗಳಿಗೆ ಪತ್ತೆ ಹಚ್ಚಲು ಸಾಧ್ಯವಾಗುವುದಿಲ್ಲ ಎನ್ನುವುದು ಬ್ರಹ್ಮೋಸ್ ಕ್ಷಿಪಣಿ ಪ್ರಕರಣದಿಂದ ಬೆಳಕಿಗೆ ಬಂದಿತ್ತು. ರಿಯಲ್ ಟೈಂನಲ್ಲಿ ರೆಡಾರ್‌ಗಳಿಗೆ ಪತ್ತೆ ಹಚ್ಚಲು ಸಾಧ್ಯವಿಲ್ಲ ಎನ್ನುವುದನ್ನು ಅರಿತ ಭಾರತ ಇಂದು ರಫೇಲ್ ವಿಮಾನ ಮೂಲಕ ಕ್ಷಿಪಣಿಯನ್ನು ಹಾರಿಸಿ ಉಗ್ರರ ನೆಲೆಗಳನ್ನು ಧ್ವಂಸ ಮಾಡಿದೆ. ಇದನ್ನೂ ಓದಿ: ಸಿಂಧೂರ ಅಳಿಸಿದವರಿಗೆ ನಾರಿ ಶಕ್ತಿಯಿಂದಲೇ ಭಾರತ ಉತ್ತರ – ಕರ್ನಲ್ ಸೋಫಿಯಾ, ವಿಂಗ್ ಕಮಾಂಡರ್ ವ್ಯೋಮಿಕಾ ಬಗ್ಗೆ ಗೊತ್ತಾ?
ರಿಪೇರಿ ಮಾಡದ ಚೀನಾ:
ಇಲ್ಲಿಯವರೆಗೆ ಪಾಕಿಸ್ತಾನ LY-80 ರಕ್ಷಣಾ ವ್ಯವಸ್ಥೆಯಲ್ಲಿನ 388 ದೋಷಗಳ ಸುದೀರ್ಘ ಪಟ್ಟಿಯನ್ನು ಚೀನಾಕ್ಕೆ ಹಸ್ತಾಂತರಿಸಿದೆ, ಅವುಗಳಲ್ಲಿ 103 ಹೊಸದಾಗಿ ಪಟ್ಟಿಮಾಡಲಾದ ದೋಷಗಳಾಗಿದ್ದು, 255 ದೋಷಗಳನ್ನು ತಕ್ಷಣವೇ ಪರಿಹರಿಸಬೇಕಾದ ಅಗತ್ಯವಿದೆ ಎಂದು ಪಾಕ್ ಬೇಡಿಕೊಂಡಿತ್ತು. ಆದರೆ ಚೀನಾ ಸರಿಯಾಗಿ ರಿಪೇರಿ ಮಾಡಿಕೊಟ್ಟಿಲ್ಲ ಎಂದು ವರದಿಗಳು ಹೇಳಿವೆ. ಇದನ್ನೂ ಓದಿ: Operation Sindoor | ತಲೆ ಕೆಡಿಸಿಕೊಂಡು ʻಸಿಂಧೂರʼ ಅರ್ಥ ಹುಡುಕಾಡ್ತಿದೆ ಪಾಕ್ – ಗೂಗಲ್‌ನಲ್ಲಿ ಟ್ರೆಂಡ್
ಏನಿದು ಬ್ರಹ್ಮೋಸ್ ಕೇಸ್?
2022ರ ಮಾರ್ಚ್ 9ರ ಸಂಜೆಯ ವೇಳೆ ಹರ್ಯಾಣದ ಸಿರ್ಸಾದಿಂದ ಬ್ರಹ್ಮೋಸ್ ಕ್ಷಿಪಣಿ ಆಕಸ್ಮಿಕವಾಗಿ ಉಡಾವಣೆಯಾಗಿ ಕೇವಲ 3 ನಿಮಿಷ 44 ಸೆಕೆಂಡ್‌ನಲ್ಲಿ 124 ಕಿ.ಮೀ ಕ್ರಮಿಸಿ ಪಾಕಿಸ್ತಾನದ ಭೂ ಪ್ರದೇಶದ ಒಳಗಡೆ ಬಿದ್ದಿತ್ತು. ಈ ಘಟನೆಯಿಂದ ಯಾವುದೇ ಸಾವು, ನೋವು ಸಂಭವಿಸದೇ ಇದ್ದರೂ ಈ ಕ್ಷಿಪಣಿಯನ್ನು ತಡೆಯಲು ಪಾಕಿಸ್ತಾನದಿಂದ ಸಾಧ್ಯವಾಗಿರಲಿಲ್ಲ. ಈ ವಿಷಯವನ್ನು ಇಟ್ಟುಕೊಂಡು ಪಾಕಿಸ್ತಾನ ಭಾರೀ ವಿರೋಧ ವ್ಯಕ್ತಪಡಿಸಿತ್ತು. ಕೊನೆಗೆ ಭಾರತ ತಾಂತ್ರಿಕ ಸಮಸ್ಯೆಯಿಂದ ಈ ಕ್ಷಿಪಣಿ ಉಡಾವಣೆಯಾಗಿದೆ ಎಂದು ಹೇಳಿ ವಿಷಾದ ವ್ಯಕ್ತಪಡಿಸಿ ತನಿಖೆ ನಡೆಸುವುದಾಗಿ ಹೇಳಿತ್ತು. ತನಿಖೆಯ ಬಳಿಕ ವಾಯುಸೇನೆಯ ಇಮೇಜ್‌ಗೆ ಧಕ್ಕೆ ತಂದ ಹಿನ್ನೆಲೆಯಲ್ಲಿ ವಿಂಗ್ ಕಮಾಂಡರ್ ಅಭಿನವ್ ಶರ್ಮಾ ಅವರನ್ನು ಸೇವೆಯಿಂದಲೇ ವಜಾಗೊಳಿಸಿತ್ತು. ಈ ಕ್ಷಿಪಣಿ ಪ್ರಕರಣದಿಂದ ಭಾರತ ಸರ್ಕಾರಕ್ಕೆ 24 ಕೋಟಿ ರೂ. ನಷ್ಟವಾಗಿತ್ತು.