ರಾಯಚೂರು: ಸೌತ್ ಸೆಂಟ್ರಲ್ ರೈಲ್ವೇ ಗುಂತಕಲ್ ವಲಯದಿಂದ ರಾಯಚೂರಿನ (Raichuru) ರೈಲ್ವೇ ನಿಲ್ದಾಣದವರೆಗೆ ಸಿವಿಲ್ ಡಿಫೆನ್ಸ್ ತಂಡದಿಂದ ಮಾಕ್ ಡ್ರಿಲ್ (Mock Drill) ನಡೆಸಲಾಯಿತು. ಯುದ್ಧದ ದಾಳಿ ಸಂದರ್ಭಗಳಲ್ಲಿ ನಾಗರಿಕರ ರಕ್ಷಣೆ ಬಗ್ಗೆ ಜಾಗೃತಿ ಮೂಡಿಸಲು 30ಕ್ಕೂ ಹೆಚ್ಚು ಜನರ ಸಿವಿಲ್ ಡಿಫೆನ್ಸ್ ತಂಡ ಅಣಕು ಕಾರ್ಯಾಚರಣೆ ಮಾಡಿತು.ಇದನ್ನೂ ಓದಿ: ಆಪರೇಷನ್ ಸಿಂಧೂರ | ಉಗ್ರರ ಶವಗಳನ್ನು ಟ್ರ್ಯಾಕ್ಟರ್‌ನಲ್ಲಿ ಸಾಗಿಸಿದ ಭಿಕಾರಿಸ್ತಾನ್!
ಲಕ್ಷ್ಮೀ ಬಾಂಬ್, ಸ್ಮೋಕ್ ಬಾಂಬ್‌ಗಳನ್ನು ಬಳಸಿ ದಾಳಿ ವೇಳೆ ಜನ ಹೇಗೆ ತಮ್ಮನ್ನು ತಾವು ರಕ್ಷಿಸಿಕೊಳ್ಳಬೇಕು? ಅಧಿಕಾರಿಗಳು ಹೇಗೆ ಅಲರ್ಟ್ ಆಗಿರಬೇಕು? ಹಂತ ಹಂತವಾಗಿ ಗಾಯಾಳುಗಳನ್ನು ರಕ್ಷಿಸಿ ಹೇಗೆ ಪ್ರಾಥಮಿಕ ಚಿಕಿತ್ಸೆ ಕೊಡಿಸಬೇಕು ಎನ್ನುವುದರ ಬಗ್ಗೆ ಜಾಗೃತಿ ಮೂಡಿಸಲಾಯಿತು. ಡಿವಿಜನ್ ಸಿವಿಲ್ ಡಿಫೆನ್ಸ್ ಎಮರ್ಜೆನ್ಸಿ ಆಫಿಸರ್ ಕೆ.ಸುದರ್ಶನ ರೆಡ್ಡಿ ನೇತೃತ್ವದಲ್ಲಿ ಮಾಕ್ ಡ್ರಿಲ್ ನಡೆಸಲಾಯಿತು.
ರೈಲ್ವೇ ನಿಲ್ದಾಣದಲ್ಲಿ ಯುದ್ಧದ ದಾಳಿ ಸನ್ನಿವೇಶ ಸೃಷ್ಟಿಸಿ ಅಣಕು ಕಾರ್ಯಾಚರಣೆ ಮಾಡಿದ ಸಿಬ್ಬಂದಿ ಜನರು ತೆಗೆದುಕೊಳ್ಳಬೇಕಾದ ಎಚ್ಚರಿಕೆ ಕ್ರಮಗಳ ಬಗ್ಗೆ ತಿಳಿಸಿದರು. ಬೆಂಕಿ ನಂದಿಸಿ ಅಪಾಯಗಳನ್ನು ತಗ್ಗಿಸುವ ಬಗ್ಗೆ ಮಾಕ್ ಡ್ರಿಲ್ ಮಾಡಲಾಯಿತು. ಗಡಿಯಲ್ಲಿ ಯುದ್ಧದ ಕಾರ್ಮೋಡ ಆವರಿಸಿರುವುದರಿಂದ ಕೇಂದ್ರದ ಸೂಚನೆ ಮೇರೆಗೆ ರೈಲ್ವೇ ಇಲಾಖೆಯಿಂದ ಕಾಚಗೂಡು, ರಾಯಚೂರು, ಔರಂಗಾಬಾದ್ ಮೂರು ಸ್ಥಳಗಳಲ್ಲಿ ಅಣಕು ಕಾರ್ಯಾಚರಣೆ ನಡೆಸಲಾಯಿತು.ಇದನ್ನೂ ಓದಿ: ಆಮೀರ್ ಖಾನ್ ನಿವಾಸಕ್ಕೆ ಅಲ್ಲು ಅರ್ಜುನ್ ಭೇಟಿ- ಒಟ್ಟಿಗೆ ಸಿನಿಮಾ ಮಾಡ್ತಾರಾ?