ರಾಜಕಾರಣಿಗಳು ಹೇಗೆ ಬದಲಾಗುತ್ತಾರೆ ಎಂಬುದಕ್ಕೆ ಸಿಎಂ ಸಿಂಧೂರವೇ ಸಾಕ್ಷಿ: ಪ್ರತಾಪ್‌ ಸಿಂಹ ಲೇವಡಿ

Public TV
2 Min Read
siddaramaiah pratap simha

– ಜನ ಥೂ ಛೀ ಅಂತಾ ಉಗಿದ ಮೇಲೆ ಸಿದ್ದರಾಮಯ್ಯ ಬದಲಾಗಿದ್ದಾರೆ
– ಯುದ್ಧ ಗೆದ್ದ ಮೇಲೆ ಶಾಂತಿ ಸ್ಥಾಪನೆ ಮಾಡ್ತೀವಿ: ಮಾಜಿ ಸಂಸದ

ಮೈಸೂರು: ಹಿಂದೂಗಳು ಒಗ್ಗಟ್ಟಾಗಿದ್ದಾರೆ. ರಾಜಕಾರಣಿಗಳು ಹೇಗೆ ಬದಲಾಗುತ್ತಾರೆ ಎಂಬುದಕ್ಕೆ ಸಿಎಂ ಸಿಂಧೂರವೇ ಸಾಕ್ಷಿ ಎಂದು ಸಿದ್ದರಾಮಯ್ಯ (Siddaramaiah) ವಿರುದ್ಧ ಮಾಜಿ ಸಂಸದ ಪ್ರತಾಪ್‌ ಸಿಂಹ (Pratap Simha) ಕಿಡಿಕಾರಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಅವರು, ಜಮ್ಮು ಮತ್ತು ಕಾಶ್ಮೀರ ಭಾರತ ಮಾತೆಯ ಸಿಂಧೂರ ಎಂಬ ಜೈಕಾರ ಹಾಕಿಕೊಂಡು ಎಲ್ಲಾ ಬಿಜೆಪಿ ಕಾರ್ಯಕರ್ತರು ಬೆಳೆದಿದ್ದಾರೆ. ಮೋದಿ ಅವರು ಬಾಯಿ ಮಾತಿಗೆ ಈ ಜಯ ಘೋಷ ಹಾಕಲಿಲ್ಲ. ಇವತ್ತು ಆಪರೇಷನ್ ಸಿಂಧೂರ (Operation Sindoor) ಮಾಡಿ ಅದನ್ನು ನಿಜ ಮಾಡಿದ್ದಾರೆ. ನ್ಯೂಕ್ಲಿಯರ್ ಟೆಸ್ಟ್ ಮಾಡಿದ ವಾಜಪೇಯಿ ನಮ್ಮ ಹೆಮ್ಮೆ. ಈಗ ಮೋದಿ ಅವರು ಕೂಡ ಹೆಮ್ಮೆ ಎಂದು ಬಣ್ಣಿಸಿದ್ದಾರೆ. ಇದನ್ನೂ ಓದಿ: ಏರ್‌ಸ್ಟ್ರೈಕ್‌ಗೆ ಸಾಕ್ಷಿ ಎಲ್ಲಿದೆ ಅಂದವರ ಬಾಯಿಯನ್ನೇ ಬಂದ್‌ ಮಾಡಿದ ಸೇನೆ!

Operation Sindoor Indian Army shares proof target significance of precision strike on Pak terror

ಸಿದ್ದರಾಮಯ್ಯ ಮೊದಲು ಯುದ್ಧ ಬೇಡ ಎಂದು ಪಾಕಿಸ್ತಾನಿಗಳಿಗೆ ಹೀರೋ ಆಗಿದ್ದರು. ಜನ ಥೂ ಛೀ ಅಂತಾ ಉಗಿದ ಮೇಲೆ ಸಿದ್ದರಾಮಯ್ಯ ಬದಲಾಗಿದ್ದರು. ಇವತ್ತು ಕಾಂಗ್ರೆಸ್ ಶಾಂತಿಯ ಮಂತ್ರದ ಟ್ವೀಟ್ ಮಾಡಿತ್ತು. ಜನ ತಿರುಗಿ ಬಿದ್ದ ಮೇಲೆ ಟ್ವೀಟ್ ಡಿಲೀಟ್ ಮಾಡಿದ್ದಾರೆ. ಜನಕ್ಕೆ ಹೆದರಿ ಸಿದ್ದರಾಮಯ್ಯ ಇಂದು ಹಣೆಗೆ ಸಿಂಧೂರ ಇಟ್ಟುಕೊಂಡಿದ್ದಾರೆ. ಸಿದ್ದರಾಮಯ್ಯ ಇಂದು ಸಿಂಧೂರರಾಮಯ್ಯ ಆಗಿದ್ದಾರೆ. ಹಿಂದೂಗಳು ಒಟ್ಟಾಗಿದ್ದಾರೆ. ರಾಜಕಾರಣಿಗಳು ಹೇಗೆ ಬದಲಾಗುತ್ತಾರೆ ಎಂಬುದಕ್ಕೆ ಸಿಎಂ ಸಿಂಧೂರವೇ ಸಾಕ್ಷಿ ಎಂದು ಟಾಂಗ್‌ ಕೊಟ್ಟಿದ್ದಾರೆ.

ಶಾಂತಿಯಿಂದ ಮಾತ್ರ ಸ್ವಾತಂತ್ರ್ಯ ಬಂತಾ? ಗಾಂಧೀಜಿಯ ಶಾಂತಿ ಮಂತ್ರದಿಂದ ಮಾತ್ರ ಸ್ವಾತಂತ್ರ್ಯ ಬರಲಿಲ್ಲ. ಭಗತ್ ಸಿಂಗ್, ಸಾರ್ವಕರ್, ಸುಭಾಷ್ ಚಂದ್ರ ಬೋಸ್‌ರಂಥ ಕ್ರಾಂತಿಕಾರಿಗಳ ಕೊಡುಗೆ ಮುಖ್ಯ ಆಗಿತ್ತು. ಯುದ್ಧ ಗೆದ್ದ ಮೇಲೆ ಶಾಂತಿ ಸ್ಥಾಪನೆ ಮಾಡ್ತೀವಿ. ಶಾಂತಿ ಸ್ಥಾಪನೆಗಾಗಿಯೇ ಯುದ್ಧ ಮಾಡ್ತಾ ಇರೋದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಪಿಕ್ಚರ್ ಅಭಿ ಬಾಕಿ ಹೈ: ಉಗ್ರರಿಗೆ ಎಚ್ಚರಿಕೆ ಕೊಟ್ಟ ಮಾಜಿ ಸಿಡಿಎಸ್‌ ನರವಾಣೆ

ಪಾಕಿಸ್ತಾನ ಸೃಷ್ಟಿ ಆಗಲು ಕಾರಣ ಕಾಂಗ್ರೆಸ್. ಪಾಕಿಸ್ತಾನದ ಪಿತಾಮಹ ಕಾಂಗ್ರೆಸ್. ಕಾಂಗ್ರೆಸ್ ಹುಟ್ಟಿಸಿದ ಶಿಶು ಪಾಕಿಸ್ತಾನ. ಹೀಗಾಗಿ, ಪಾಕಿಸ್ತಾನದ ಮೇಲೆ ಯುದ್ಧ ಅಂದರೆ ಕಾಂಗ್ರೆಸ್‌ಗೆ ಹಿಂಸೆ ಅನ್ನಿಸುತ್ತೆ. ಕಾಂಗ್ರೆಸ್ ಮನಸ್ಥಿತಿ ಅರ್ಥ ಮಾಡಿಕೊಳ್ಳಬೇಕು. ಸಿದ್ದರಾಮಯ್ಯರ ಒಳಗಡೆಯೂ ನೋವು ಬಂದು ಶಾಂತಿಯ ಮಂತ್ರ ಪಠಿಸಿದ್ದರು ಎಂದು ಪ್ರತಾಪ್‌ ಸಿಂಹ ಕಾಲೆಳೆದಿದ್ದಾರೆ.

Share This Article