’ಡ್ರ್ಯಾಗನ್’ (Dragon) ಚಿತ್ರದ ಸಕ್ಸಸ್ ಬಳಿಕ ಕಯಾದು ಲೋಹರ್‌ಗೆ ಬೇಡಿಕೆ ಹೆಚ್ಚಾಗಿದೆ. ತೆಲುಗು, ತಮಿಳಿನಿಂದಲೂ ನಟಿಗೆ ಅವಕಾಶಗಳು ಹರಿದು ಬರುತ್ತಿವೆ. ಇದೀಗ ಹೊಸ ಸಿನಿಮಾಗೆ ಕಾಲಿವುಡ್ ಸ್ಟಾರ್ ನಟ ಸಿಂಬುಗೆ ಕಯಾದು ನಾಯಕಿಯಾಗಿದ್ದಾರೆ. ಇದನ್ನೂ ಓದಿ:ಸತತ 7 ಸಿನಿಮಾಗಳು ಫ್ಲಾಪ್- ಗೆಲುವಿಗಾಗಿ ಕಾಯ್ತಿದ್ದಾರೆ ಪೂಜಾ ಹೆಗ್ಡೆ
ಸಿಂಬು (Simbu) ನಟನೆಯ 49ನೇ ಚಿತ್ರಕ್ಕೆ (STR 49) ಕಯಾದು ಹೀರೋಯಿನ್ ಆಗಿದ್ದಾರೆ. ಈ ಚಿತ್ರದ ಮುಹೂರ್ತ ಅದ್ಧೂರಿಯಾಗಿ ಜರುಗಿದೆ. ಹೊಸ ಪಾತ್ರದ ಮೂಲಕ ಮೋಡಿ ಮಾಡಲು ಕನ್ನಡದ ‘ಮುಗಿಲ್‌ಪೇಟೆ’ ನಟಿ ಸಜ್ಜಾಗಿದ್ದಾರೆ. ಇದನ್ನೂ ಓದಿ:ಮೆಗಾಸ್ಟಾರ್ ಕುಟುಂಬದಲ್ಲಿ ಸಂಭ್ರಮ- ಮೊದಲ ಮಗುವಿನ ನಿರೀಕ್ಷೆಯಲ್ಲಿ ವರುಣ್ ತೇಜ್ ದಂಪತಿ

View this post on Instagram
’ಡ್ರ್ಯಾಗನ್’ ಫೆ.25ರಂದು ರಿಲೀಸ್ ಆಗಿತ್ತು. ಪ್ರದೀಪ್ ರಂಗನಾಥನ್, ಅನುಪಮಾ ಪರಮೇಶ್ವರನ್ ಜೊತೆ ಕಯಾದು ನಟಿಸಿದ್ದರು. ಈ ಚಿತ್ರ ಸೂಪರ್ ಹಿಟ್ ಆಗಿ ಒಟಿಟಿಯಲ್ಲೂ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ.
View this post on Instagram
ಅಂದಹಾಗೆ, ರವಿಚಂದ್ರನ್ ಪುತ್ರ ಮನೋರಂಜನ್ ನಟನೆಯ ‘ಮುಗಿಲ್‌ಪೇಟೆ’ ಚಿತ್ರದ ನಾಯಕಿಯಾಗಿ ಕಯಾದು ಸಿನಿ ಪಯಣ ಶುರು ಮಾಡಿದರು. 2021ರಲ್ಲಿ ಚಿತ್ರ ರಿಲೀಸ್ ಆಗಿತ್ತು.


