ಪಂಚಾಂಗ
ವಾರ: ಸೋಮವಾರ, ತಿಥಿ: ಅಷ್ಟಮಿ
ನಕ್ಷತ್ರ: ಆಶ್ಲೇಷ, ಯೋಗ: ವೃದ್ಧಿ ಕರಣ: ಬವ
ಶ್ರೀ ವಿಶ್ವಾವಸು ನಾಮ ಸಂವತ್ಸರ
ಉತ್ತರಾಯಣ, ವಸಂತ ಋತು
ವೈಶಾಖ ಮಾಸ, ಶುಕ್ಲ ಪಕ್ಷ,
ರಾಹುಕಾಲ: 7:37 ರಿಂದ 9:11
ಗುಳಿಕಕಾಲ: 1:55 ರಿಂದ 3:29
ಯಮಗಂಡಕಾಲ: 10:46 ರಿಂದ 12:20
ಮೇಷ: ಅತಿಯಾದ ಒಳ್ಳೆಯತನ, ಸ್ಥಿರಾಸ್ತಿ ತಗಾದೆ, ಬೇಜವಾಬ್ದಾರಿತನದಿಂದ ಸಂಕಷ್ಟ, ಮನಸ್ಸಿಗೆ ಬಾಧೆ, ಆರೋಗ್ಯ ಸಮಸ್ಯೆ.
ವೃಷಭ: ಮಿತ್ರರಿಂದ ನಷ್ಟ, ಪಾಲುದಾರಿಕೆ ವ್ಯವಹಾರದಲ್ಲಿ ಕಿರಿಕಿರಿ, ನಿದ್ರಾಭಂಗ, ಕುಟುಂಬದಲ್ಲಿ ಆತಂಕ.
ಮಿಥುನ: ಅನ್ಯ ಜನರಲ್ಲಿ ವೈಮನಸ್ಸು, ಅನಾವಶ್ಯಕ ಮಾತುಗಳಿಂದ ದೂರವಿರಿ, ಆದಾಯ ಕಡಿಮೆ ಖರ್ಚು ಜಾಸ್ತಿ.
ಕಟಕ: ಪುಣ್ಯಕ್ಷೇತ್ರ ದರ್ಶನ, ದೂರಾಲೋಚನೆ, ಅನಾರೋಗ್ಯ, ಸಣ್ಣಪುಟ್ಟ ವಿಚಾರಗಳಿಂದ ಮನಸ್ತಾಪ.
ಸಿಂಹ: ಮನೆಯಲ್ಲಿ ಸಂತಸ, ಹಿರಿಯರಲ್ಲಿ ಭಕ್ತಿ, ಉತ್ತಮ ವಹಿವಾಟು, ನಿರುದ್ಯೋಗಿಗಳಿಗೆ ಉದ್ಯೋಗ ಅವಕಾಶ.
ಕನ್ಯಾ: ಶತ್ರುಗಳಿಂದ ತೊಂದರೆ, ಅಧಿಕ ಖರ್ಚು, ಚಂಚಲ ಮನಸ್ಸು, ಉದ್ಯೋಗದಲ್ಲಿ ಬಡ್ತಿ, ಪರರ ಧನಪ್ರಾಪ್ತಿ.
ತುಲಾ: ಬಂದು ಮಿತ್ರರ ಭೇಟಿ, ಅನ್ಯ ಜನರಲ್ಲಿ ಪ್ರೀತಿ, ವಿವಾಹ ಯೋಗ, ಶರೀರದಲ್ಲಿ ತಳಮಳ, ಪರಸ್ತ್ರೀಯಿಂದ ತೊಂದರೆ.
ವೃಶ್ಚಿಕ: ಕೆಲಸ ಕಾರ್ಯಗಳಲ್ಲಿ ವಿಘ್ನ, ಸ್ಥಳ ಬದಲಾವಣೆ, ಹಣಕಾಸಿನ ತೊಂದರೆ, ವಾಹನದಿಂದ ಕಂಟಕ, ಮಾನಸಿಕ ಅಶಾಂತಿ.
ಧನಸ್ಸು: ಮಾನಸಿಕ ಒತ್ತಡ, ಪರಸ್ತ್ರೀ ಸಹವಾಸ, ಸೌಜನ್ಯದಿಂದ ವರ್ತಿಸಿ, ವ್ಯರ್ಥ ಧನ ಹಾನಿ, ಅನೇಕ ವಿಷಯಗಳಲ್ಲಿ ತೊಂದರೆ.
ಮಕರ: ಅತಿಯಾದ ಭಯ, ವಾದ ವಿವಾದ, ಮಿತ್ರರ ಬೆಂಬಲ, ಅತಿಯಾದ ಆತ್ಮವಿಶ್ವಾಸ ಒಳ್ಳೆಯದಲ್ಲ, ಅಕಾಲ ಭೋಜನ.
ಕುಂಭ: ಹಿತ ಶತ್ರು ಬಾಧೆ, ಎಷ್ಟೇ ಒತ್ತಡವಿದ್ದರೂ ವಿವೇಚನೆ ಕಳೆದುಕೊಳ್ಳಬೇಡಿ, ಮಾತಾಪಿತರಲ್ಲಿ ಪ್ರೀತಿ.
ಮೀನ: ವಿಧೇಯತೆಯೇ ಯಶಸ್ಸಿನ ಮೆಟ್ಟಿಲು, ಅನಾವಶ್ಯಕ ವೆಚ್ಚ, ಕಾರ್ಯ ವಿಕಲ್ಪ, ಪರರಿಗೆ ಸಹಾಯ, ಮಹಿಳೆಯರಿಗೆ ಶುಭ.