ನವದೆಹಲಿ: ನಮ್ಮ ಮೇಲೆ ಭಾರತ (India) ಯುದ್ಧ ಸಾರಲಿದೆ ಎಂದು ಪಾಕ್ (Pakistan) ಹೇಳುತ್ತಾ ಬರುತ್ತಿದೆ. ಆದರೆ ಭಾರತ ಇಲ್ಲಿಯವರೆಗೆ ಯುದ್ಧದ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲ. ಆದರೆ ಭಾರತ ಬಾಲಾಕೋಟ್ ಮೇಲಿನ ಏರ್ ಸ್ಟ್ರೈಕ್ (Balakot Air Strike) ಮಾಡಿದ ಬಳಿಕ ತನ್ನ ಬತ್ತಳಿಕೆಗೆ ಹಲವಾರು ಶಸ್ತ್ರಾಸ್ತ್ರಗಳನ್ನು ಸೇರ್ಪಡೆ ಮಾಡುವ ಮೂಲಕ ಪಾಕಿಸ್ತಾನಕ್ಕೆ ಬಿಸಿ ಮುಟ್ಟಿಸಿದೆ.
ಹಾಗೇ ನೋಡಿದರೆ ಬಾಲಾಕೋಟ್ ಏರ್‌ಸ್ಟ್ರೈಕ್ ನಡೆಸಿದ ನಂತರ ಭಾರತದ ಮೂರು ಪಡೆಗಳು ಮತ್ತಷ್ಟು ಬಲಶಾಲಿಯಾಗಿದೆ. ಹೀಗಾಗಿ 2019 ರಿಂದ ಏನೇನು ಬದಲಾವಣೆಯಾಗಿದೆ? ಈ ಎಲ್ಲಾ ವಿವರಗಳನ್ನು ಇಲ್ಲಿ ನೀಡಲಾಗಿದೆ. ಇದನ್ನೂ ಓದಿ: ದೀರ್ಘ ರಜೆ ಕೊಡಲ್ಲ – ಶಸ್ತ್ರಾಸ್ತ್ರ ಕಾರ್ಖಾನೆ ಉದ್ಯೋಗಿಗಳಿಗೆ ಸೂಚನೆ
ಭಾರತದ ಒಳಗಡೆಯಿಂದಲೇ ದಾಳಿ:
2019 – ಬಾಲಾಕೋಟ್ ಮೇಲಿನ ಏರ್ ಸ್ಟ್ರೈಕ್ ವೇಳೆ ಮಿರಾಜ್ ವಿಮಾನಗಳು ಗಡಿ ನಿಯಂತ್ರಣ ರೇಖೆಯನ್ನು ದಾಟಿ ಉಗ್ರರ ನೆಲೆಗಳ ಮೇಲೆ ಇಸ್ರೇಲ್ ನಿರ್ಮಿತ SPICE ಬಾಂಬ್ ಹಾಕಿತ್ತು. ಈ ರೀತಿಯ ಕಾರ್ಯಾಚರಣೆಯ ಸಂದರ್ಭದಲ್ಲಿ ಶತ್ರು ರಾಷ್ಟ್ರಗಳು ವಿಮಾನದ ಮೇಲೆ ದಾಳಿ ನಡೆಸುವ ಸಾಧ್ಯತೆ ಹೆಚ್ಚು. ಅಭಿನಂದನ್ ವರ್ಧಮಾನ್ ಅವರಂತೆ ಪೈಲಟ್‌ಗಳನ್ನು ಸೆರೆ ಹಿಡಿಯವ ಅಪಾಯದ ಸಾಧ್ಯತೆಯಿದೆ.
2025 – 300 ಕಿ.ಮೀ ದೂರದಲ್ಲಿ ಟಾರ್ಗೆಟ್ ಧ್ವಂಸ ಮಾಡಬಲ್ಲ SCALP ಕ್ಷಿಪಣಿಯನ್ನು ಭಾರತ ಹೊಂದಿದೆ. ಭಾರತದ ಒಳಗಡೆಯೇ ರಫೇಲ್ ಯುದ್ಧ ವಿಮಾನದಲ್ಲಿ ಕ್ಷಿಪಣಿ ಹಾರಿಸಿ ಶತ್ರುಗಳ ನೆಲೆಗಳನ್ನು ಧ್ವಂಸ ಮಾಡಬಹುದು. ಗಡಿ ದಾಟದೇ ಬ್ರಹ್ಮೋಸ್ ಕ್ಷಿಪಣಿಯ ಮೂಲಕ ಶತ್ರು ದೇಶದ ವಾಯುನೆಲೆಯನ್ನೇ ಹಾಳು ಮಾಡಬಹುದು. ಇದನ್ನೂ ಓದಿ: ಯುದ್ಧ ನಡೆದರೆ ಇಂಗ್ಲೆಂಡ್‌ಗೆ ಪಲಾಯನ – ಪಾಕ್ ಸಂಸದ
ಡ್ರೋನ್ ಶಕ್ತಿ
2019 – ಗಡಿ ನಿಯಂತ್ರಣ ರೇಖೆಯ ಬಳಿಯ ಶತ್ರುಗಳ ಪೋಸ್ಟ್‌ಗಳನ್ನು ಗುರಿಯಾಗಿಸಿ ಸೈನಿಕರು ಫಿರಂಗಿಯಿಂದ ಮಾತ್ರ ದಾಳಿ ನಡೆಸಬಹುದಾಗಿತ್ತು.
2020 – ಭಾರತ ಈಗ ಸ್ವದೇಶಿ ALS-50 ರೆಕ್ಕೆಯನ್ನು ಹೊಂದಿರುವ ಡ್ರೋನ್ ಅಭಿವೃದ್ಧಿ ಪಡಿಸಿದೆ. ಈ ಡ್ರೋನ್ ಮೂಲಕ 50 ಕಿ.ಮೀ ದೂರದಲ್ಲಿರುವ ಶತ್ರುವಿನ ನೆಲೆಯನ್ನು ಟಾರ್ಗೆಟ್ ಮಾಡಬಹುದಾಗಿದೆ.
ಗಡಿಗಳ ಬಳಿ ತ್ವರಿತ, ನಿಖರ ಮತ್ತು ಕಡಿಮೆ-ವೆಚ್ಚದ ಯುದ್ಧತಂತ್ರದ ಕಾರ್ಯಾಚರಣೆಗಳಿಗಾಗಿ ನಾಗಾಸ್ತ್ರದಂತ ಸೂಸೈಡ್ ಡ್ರೋನ್ ಮತ್ತು ಇತರ ಡ್ರೋನ್‌ಗಳನ್ನು ಭಾರತ ಖರೀದಿಸಿದೆ. ಜಿಪಿಎಸ್ ಆಧಾರಿತ ನಾಗಾಸ್ತ್ರ 30 ಕಿ.ಮೀ ದೂರವನ್ನು ಕ್ರಮಿಸುವ ಸಾಮರ್ಥ್ಯವನ್ನು ಹೊಂದಿದೆ.
ನೆಲದಿಂದಲೇ ಉರುಳಿಸಬಹುದು
2019 – ಶತ್ರು ದೇಶದ ಯುದ್ಧ ವಿಮಾನಗಳು ಭಾರತದ ಗಡಿಯನ್ನು ದಾಟಿ ಬಂದರೆ ನಾವು ಯುದ್ಧ ವಿಮಾನವನ್ನು (ಎರಡು ಯುದ್ಧ ವಿಮಾನಗಳ ಕಾದಾಟಕ್ಕೆ ಡಾಗ್ ಫೈಟ್ ಎಂದು ಕರೆಯಲಾಗುತ್ತದೆ) ಹಾರಿಸಿ ಹಿಮ್ಮೆಟಿಸಬೇಕಿತ್ತು. ಬಾಲಾಕೋಟ್ ಏರ್‌ಸ್ಟ್ರೈಕ್ ಮಾಡಿದ ಬಳಿಕ ಪಾಕ್ ಯುದ್ಧ ವಿಮಾನಗಳು ಭಾರತದ ಮೇಲೆ ದಾಳಿ ನಡೆಸಲು ಬಂದಿತ್ತು. ಈ ಸಂದರ್ಭದಲ್ಲಿ ಮಿಗ್, ಸುಕೋಯ್ ವಿಮಾನಗಳನ್ನು ಹಾರಿಸಿ ಭಾರತ ತಡೆದಿತ್ತು. ಹಾರುವ ಶವಪೆಟ್ಟಿಗೆ ಎಂದೇ ಕುಖ್ಯಾತವಾಗಿರುವ ಮಿಗ್ ವಿಮಾನದ ಮೂಲಕವೇ ಅಭಿನಂದನ್ AMRAAM ಕ್ಷಿಪಣಿ ಸಿಡಿಸಿ ಎಫ್16 ವಿಮಾನವನ್ನು ಹೊಡೆದು ಹಾಕಿದ್ದರು.
2025 – ಭಾರತ ಈಗ ರಷ್ಯಾದ ಅತ್ಯಾಧುನಿಕ S-400 ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಥೆಯನ್ನು ಹೊಂದಿದೆ. ಶತ್ರು ದೇಶದ ವಿಮಾನ ಅಥವಾ ಯಾವುದೇ ಕ್ಷಿಪಣಿ ಬಂದರೂ ಅದರ ವೇಗವನ್ನು ಗುರುತಿಸಿ ನೆಲದಿಂದಲೇ ಕ್ಷಿಪಣಿ ಹಾರಿಸಿ ಹೊಡೆದು ಹಾಕುತ್ತದೆ. ಈ ಮೂಲಕ ಭಾರತ ಶತ್ರು ದೇಶದ ಮೇಲೆ ದಾಳಿ ಮಾಡುವುದರ ಜೊತೆಗೆ ಶತ್ರು ದೇಶದಿಂದ ಬಂದ ಪ್ರತಿದಾಳಿಯನ್ನು ತಟಸ್ಥಗೊಳಿಸುವ ಸಾಮರ್ಥ್ಯವನ್ನು ಪಡೆದಿರುವುದು ವಿಶೇಷ.