‘ಬಿಲ್ಲ ರಂಗ ಬಾಷಾ’ ಸಿನಿಮಾದ (Billa Ranga Basha) ಚಿತ್ರೀಕರಣದಲ್ಲಿ ಸುದೀಪ್ ಬ್ಯುಸಿಯಾಗಿದ್ದಾರೆ. ಈ ಚಿತ್ರದ ಶೂಟಿಂಗ್ ಟೈಟ್ ಸೆಕ್ಯೂರಿಟಿಯೊಂದಿಗೆ ಸಿನಿಮಾ ಮಾಡ್ತಿದ್ದಾರೆ. ಈ ಬಗ್ಗೆ ಡೈರೆಕ್ಟರ್ ಅನೂಪ್ ಭಂಡಾರಿ (Anup Bhandari) ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿದ್ದಾರೆ. ಇದನ್ನೂ ಓದಿ:ಧರ್ಮ, ರಾಗಿಣಿ ನಟನೆಯ ‘ಸಿಂಧೂರಿ’ ಚಿತ್ರಕ್ಕೆ ಅದ್ಧೂರಿ ಚಾಲನೆ
ಏ.16ರಿಂದ ‘ಬಿಲ್ಲ ರಂಗ ಬಾಷಾ’ ಚಿತ್ರದ ಶೂಟಿಂಗ್ ನಡೆಯುತ್ತಿದೆ. ಈ ಬಗ್ಗೆ ಸುದೀಪ್ (Sudeep) ಅವರೇ ಮಾಹಿತಿ ತಿಳಿಸಿದ್ದಾರೆ. ಈ ಚಿತ್ರದ ಶೂಟಿಂಗ್ ಅದೆಷ್ಟು ವ್ಯವಸ್ಥಿತವಾಗಿ ನಡೆಯುತ್ತಿದೆ. ಪ್ರತಿಯೊಬ್ಬ ಸಿಬ್ಬಂದಿಗೂ ಇಲ್ಲಿ ಐಡಿ ಕಾರ್ಡ್ ಇದೆ. ಅದನ್ನ ಚೆಕ್ ಮಾಡೋಕೆ ಸೆಕ್ಯೂರಿಟಿಗಳೂ ಇದ್ದಾರೆ. ಹಾಗೆಲ್ಲಾ ಸುಮ್ಮನೆ ಚಿತ್ರದ ಸೆಟ್ ಒಳಗೆ ಹೋಗೋಕೆ ಆಗಲ್ಲ ಎಂಬುದು ಅನೂಪ್ ಹಂಚಿಕೊಂಡ ವಿಡಿಯೋ ಮೂಲಕ ಸ್ಪಷ್ಟವಾಗಿದೆ. ಇದನ್ನೂ ಓದಿ:ಪತಿಯೊಂದಿಗೆ ಗರ್ಭಿಣಿ ಕಿಯಾರಾ ಅಡ್ವಾಣಿ ವೆಕೇಷನ್
ಚಿತ್ರದಲ್ಲಿ ಸುದೀಪ್ ಲುಕ್ ಹೇಗಿರಲಿದೆ ಎಂಬ ಸುಳಿವು ವಿಡಿಯೋದಲ್ಲಿ ಬಿಟ್ಟು ಕೊಟ್ಟಿಲ್ಲ. ಆದರೆ ಚಿತ್ರದ ಸೆಟ್‌ಗೆ ಕೂಲಿಂಗ್ ಗ್ಲ್ಯಾಸ್ ಧರಿಸಿ ಸುದೀಪ್ ಸ್ಟೈಲೀಶ್ ಎಂಟ್ರಿ ಕೊಟ್ಟಿದ್ದಾರೆ. ಟೈಟ್ ಸೆಕ್ಯೂರಿಟಿಯೊಂದಿಗೆ ಚಿತ್ರದ ಶೂಟಿಂಗ್ ಮಾಡಲಾಗ್ತಿದೆ. ಇಡೀ ಶೂಟಿಂಗ್ ಸ್ಪಾಟ್ ಕವರ್ ಮಾಡಲಾಗಿದೆ. ಸದ್ಯ ಈ ಝಲಕ್ ನೋಡಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ. ಸಿನಿಮಾಗಾಗಿ ಕಿಚ್ಚನ ಫ್ಯಾನ್ಸ್ ಎದುರು ನೋಡ್ತಿದ್ದಾರೆ.
View this post on Instagram
‘ವಿಕ್ರಾಂತ್ ರೋಣ’ ಚಿತ್ರದ ಬಳಿಕ ಮತ್ತೊಮ್ಮೆ ಅನೂಪ್ ಭಂಡಾರಿ ಜೊತೆ ಸುದೀಪ್ ಕೈಜೋಡಿಸಿದ್ದಾರೆ. ‘ಬಿಲ್ಲ ರಂಗ ಬಾಷಾ’ ಸಿನಿಮಾ ಮೂಲಕ ವಿಭಿನ್ನ ಕಥೆ ಹೇಳಲು ಸುದೀಪ್ ಸಜ್ಜಾಗಿದ್ದಾರೆ.