– ತನಿಖಾ ತಂಡ ರಿಲೀಸ್ ಮಾಡಿದ ರೇಖಾಚಿತ್ರದಲ್ಲಿ ಇರುವವರ ಪೈಕಿ ಒಬ್ಬ ನನ್ನ ಮಾತಾಡಿಸಿದ್ದ
ಶ್ರೀನಗರ: ಆ ದಿನ ಉಗ್ರನೊಬ್ಬ ಇವತ್ತು ಜನದಟ್ಟಣೆ ಕಡಿಮೆ ಇದೆ ಎಂದು ನನ್ನ ಜೊತೆ ಮಾತನಾಡಿದ ಎಂದು ಮಹಾರಾಷ್ಟ್ರ (Maharashtra) ಪ್ರವಾಸಿಗ ಆದರ್ಶ್ ಸ್ಫೋಟಕ ಮಾಹಿತಿ ನೀಡಿದ್ದಾರೆ.
ಏ.21ರಂದು ನಾನು ಕುದುರೆ ತೆಗೆದುಕೊಂಡು ಬೈಸರನ್ ವ್ಯಾಲಿಗೆ ಹೋಗಿದ್ದೆ. ಅಲ್ಲಿ ಮ್ಯಾಗಿ ಅಂಗಡಿ ಬಳಿ ನಿಂತಿದ್ದೆ. ಆಗ ನಾಲ್ಕೈದು ಜನ ಇದ್ದರು. ಆ ಪೈಕಿ ಓರ್ವ ಬಂದು, ನೀನು ಕಾಶ್ಮೀರದವನಾ? ಹಿಂದೂನಾ? ನೀನು ಇಲ್ಲಿಯವರಾ ಥರ ಕಾಣುವುದಿಲ್ಲ ಎಂದು ಕೇಳಿದ್ದ. ಆದರೆ ನಾನು ಇಲ್ಲಾ ನಾನು ಇಲ್ಲಿಯವನೇ ಎಂದು ಹೇಳಿದ್ದೆ. ಹಾಗೆಯೇ ಮಾತನಾಡುತ್ತಾ ಇವತ್ತು ಜನದಟ್ಟಣೆ ತುಂಬಾ ಕಡಿಮೆ ಇದೆ ಎಂದು ಹೇಳಿ ಅಲ್ಲಿಂದ ಹೊರಟುಹೋದರು ಎಂದರು.ಇದನ್ನೂ ಓದಿ: ಪಾಕಿಸ್ತಾನದಿಂದ ಮತ್ತೆ ಕದನ ವಿರಾಮ ಉಲ್ಲಂಘನೆ – LOCಯಲ್ಲಿ ಪಾಕ್ ಸೇನೆ ಅಪ್ರಚೋದಿತ ಗುಂಡಿನ ದಾಳಿ
ಅಲ್ಲಿ ನೆಟ್‌ವರ್ಕ್ ಇಲ್ಲದ ಕಾರಣ ಮ್ಯಾಗಿ ಅಂಗಡಿಯವರ ನಂಬರ್ ತೆಗೆದುಕೊಂಡು ಕೆಳಗೆ ಹೋಗಿ ಪೇಮೆಂಟ್ ಮಾಡಿದ್ದೆ. ಮಾರನೇ ದಿನ ಅಲ್ಲಿ ಉಗ್ರರ ದಾಳಿ ಆಯ್ತು. ಅದಾದ ನಂತರ ರೇಖಾಚಿತ್ರ ರಿಲೀಸ್ ಮಾಡಿದ್ದರು. ಈ ಬಗ್ಗೆ ನಾನು ನನ್ನ ತಂದೆಗೆ ಹೇಳಿದೆ. ತನಿಖಾ ತಂಡ ರಿಲೀಸ್ ಮಾಡಿದ ರೇಖಾಚಿತ್ರದ ಪೈಕಿ ಒಬ್ಬ ನನ್ನ ಜೊತೆ ಮಾತನಾಡಿದ್ದ. ಆಗ ನನ್ನ ತಂದೆ ತನಿಖಾ ಸಂಸ್ಥೆಗೆ ಮಾಹಿತಿ ನೀಡಬೇಕು ಎಂದರು. ಆಗ ನಾನು ಇ-ಮೇಲ್ ಮೂಲಕ ಎನ್‌ಐಎಗೆ ಮಾಹಿತಿ ನೀಡಿದೆ ಎಂದು ತಿಳಿಸಿದರು.
ಏ.22 ರಂದು ಪಹಲ್ಗಾಮ್‌ನ ಬೈಸರನ್ ವ್ಯಾಲಿಯಲ್ಲಿ ನಡೆದ ಹಿಂದೂಗಳ ನರಮೇಧದಲ್ಲಿ ಒಟ್ಟು 26 ಜನರು ಪ್ರಾಣಕಳೆದುಕೊಂಡಿದ್ದರು. ಈ ಪೈಕಿ ಕರ್ನಾಟಕದ ಮೂವರು ಗುಂಡಿನ ದಾಳಿಗೆ ಬಲಿಯಾಗಿದ್ದಾರೆ. ಸದ್ಯ ಈ ಕುರಿತು ಎನ್‌ಐಎ ತನಿಖೆ ನಡೆಸುತ್ತಿದೆ.ಇದನ್ನೂ ಓದಿ: Fashion | ನಾರಿಯರ ಮನಗೆದ್ದ ಚೋಕರ್ ನೆಕ್ಲೆಸ್!