ಫಸ್ಟ್‌ ಟೈಂ ಮೋದಿಯನ್ನು ಭೇಟಿಯಾಗಿ ಮಾತುಕತೆ ನಡೆಸಿದ ಮೋಹನ್‌ ಭಾಗವತ್‌

Public TV
1 Min Read
Mohan Bhagwat Narendra Modi

ನವದೆಹಲಿ: ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಮುಖ್ಯಸ್ಥ ಮೋಹನ್ ಭಾಗವತ್ (Mohan Bhagwat) ಅವರು ಇಂದು ಮೊದಲ ಬಾರಿಗೆ ದೆಹಲಿಯ ಪ್ರಧಾನಿ ನಿವಾಸದಲ್ಲಿ ನರೇಂದ್ರ ಮೋದಿ (Narendra Modi) ಅವರನ್ನು ಭೇಟಿಯಾಗಿದ್ದಾರೆ.

ಮೋದಿ ಅವರು ಮಂಗಳವಾರ ಸಂಜೆ ಮೂರು ಸೇನೆಯ ಮುಖ್ಯಸ್ಥರ ಜೊತೆ ಉನ್ನತ ಮಟ್ಟದ ಸಭೆ ನಡೆಸಿದ ಬಳಿಕ ಮೋಹನ್‌ ಭಾಗವತ್‌ ಅವರು ನಿವಾಸಕ್ಕೆ ಆಗಮಿಸಿದರು ಎಂದು ವರದಿಯಾಗಿದೆ. ಈ ಭೇಟಿಯ ಸಂದರ್ಭದಲ್ಲಿ ಗೃಹ ಸಚಿವ ಅಮಿತ್‌ ಶಾ ಉಪಸ್ಥಿತರಿದ್ದರು. ಇದನ್ನೂ ಓದಿ: ಟೈಂ ನೋಡಿ ಪಾಕ್‌ಗೆ ಹೊಡೆಯಿರಿ- ಸೇನೆಗೆ ಪರಮಾಧಿಕಾರ ಕೊಟ್ಟ ಮೋದಿ

2014 ರಲ್ಲಿ ಮೋದಿ ಅಧಿಕಾರ ಸ್ವೀಕರಿಸಿದ ಬಳಿಕ ಮೋಹನ್ ಭಾಗವತ್ ಅವರು ದೆಹಲಿಯ ಪ್ರಧಾನಿ ನಿವಾಸದಲ್ಲಿ ಮೋದಿ ಅವರನ್ನು ಭೇಟಿಯಾಗಿರಲಿಲ್ಲ.  11 ವರ್ಷದ ಬಳಿಕ ಮೋದಿ ಅವರನ್ನು ಭೇಟಿಯಾಗಿರುವುದು ವಿಶೇಷ.

Pahalgam Terror Attack Armed forces have complete freedom to decide Indias response says PM Narendra Modi

ಕಳೆದ ವಾರ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ, ಪಹಲ್ಗಾಮ್ ಹತ್ಯಾಕಾಂಡಕ್ಕೆ ಕಾರಣರಾದವರಿಗೆ ಬಲವಾದ ಪ್ರತಿಕ್ರಿಯೆ ನೀಡಬೇಕೆಂದು ಭಾಗವತ್ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದರು.

ನಾವು ಬಲವಾದ ಪ್ರತಿಕ್ರಿಯೆಯನ್ನು ನಿರೀಕ್ಷಿಸುತ್ತೇವೆ. ಅವರ ಧರ್ಮದ ಬಗ್ಗೆ ಕೇಳಿದ ನಂತರ ಜನರನ್ನು ಕೊಲ್ಲಲಾಯಿತು. ಹಿಂದೂಗಳು ಎಂದಿಗೂ ಅಂತಹ ಕೆಲಸವನ್ನು ಮಾಡುವುದಿಲ್ಲ. ನಮ್ಮ ಹೃದಯದಲ್ಲಿ ನೋವು ಇದೆ. ನಾವು ಕೋಪಗೊಂಡಿದ್ದೇವೆ ಎಂದಿದ್ದರು. ಇದನ್ನೂ ಓದಿ: 4 ದಿನದ ಮೊದಲೇ ಪಹಲ್ಗಾಮ್‌ನಿಂದ 7 ಕಿ.ಮೀ ದೂರದ ಜಾಗಕ್ಕೆ ಬಂದಿದ್ದ ಉಗ್ರರು

ಪ್ರಧಾನಿಯ ಹೆಸರನ್ನು ಉಲ್ಲೇಖಿಸದೆ, ಭಾಗವತ್ ತನ್ನ ಜನರನ್ನು ರಕ್ಷಿಸುವುದು ರಾಜನ ಕರ್ತವ್ಯ ಎಂದು ಹೇಳಿದ್ದರು. ಇದನ್ನೂ ಓದಿ: ಭಾರತದಲ್ಲಿ ಪಾಕ್ ರಕ್ಷಣಾ ಸಚಿವರ ಬಾಯಿ ಬಂದ್!

ನಾವು ಎಂದಿಗೂ ನಮ್ಮ ನೆರೆಹೊರೆಯವರನ್ನು ಅವಮಾನಿಸುವುದಿಲ್ಲ ಅಥವಾ ಹಾನಿ ಮಾಡುವುದಿಲ್ಲ. ಆದರೆ ಬೇರೆಯವರು ಕೆಟ್ಟದ್ದು ಮಾಡಿದರೆ ಬೇರೆ ಆಯ್ಕೆ ಏನಿದೆ? ಜನರನ್ನು ರಕ್ಷಿಸುವುದು ರಾಜನ ಕರ್ತವ್ಯ. ರಾಜನು ತನ್ನ ಕರ್ತವ್ಯವನ್ನು ನಿರ್ವಹಿಸಬೇಕು. ಗೂಂಡಾಗಳಿಗೆ ಪಾಠ ಕಲಿಸುವುದು ಸಹ ಕರ್ತವ್ಯದ ಭಾಗ ಎಂದಿದ್ದರು.

Share This Article