ನಟಿ ಶ್ರೀನಿಧಿ ಶೆಟ್ಟಿ ‘ಹಿಟ್ 3’ ಚಿತ್ರದ ಪ್ರಚಾರಕ್ಕಾಗಿ ಬೆಂಗಳೂರಿಗೆ ಬಂದಿಳಿದಿದ್ದಾರೆ. ಪ್ರಚಾರ ಕಾರ್ಯದ ವೇಳೆ, ಪಹಲ್ಗಾಮ್‌ನಲ್ಲಿ ನಡೆದ ಉಗ್ರರ (Pahalgam Terrorist Attack) ದಾಳಿ ಬಗ್ಗೆ ನಟಿ ಖಂಡಿಸಿದ್ದಾರೆ. ತಪ್ಪು ಮಾಡಿದವರಿಗೆ ಶಿಕ್ಷೆಯಾಗಲಿ ಎಂದು ಶ್ರೀನಿಧಿ (Srinidhi Shetty) ‘ಪಬ್ಲಿಕ್ ಟಿವಿ’ಗೆ ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ:ಸಕ್ಸಸ್‌ಗಾಗಿ ಅದೃಷ್ಟ ಪರೀಕ್ಷೆಗಿಳಿದ ಸೋನಾಕ್ಷಿ ಸಿನ್ಹಾ

ಅಂದಹಾಗೆ, ನಾನಿ ನಟನೆಯ ‘ಹಿಟ್ 3’ ಸಿನಿಮಾ ಮೇ 1ರಂದು ಕನ್ನಡ, ತೆಲುಗು ಸೇರಿದಂತೆ ಹಲವು ಭಾಷೆಗಳಲ್ಲಿ ರಿಲೀಸ್ ಆಗ್ತಿದೆ. ಈ ಸಿನಿಮಾಗೆ ಸುದೀಪ್ ಪುತ್ರಿ ಸಾನ್ವಿ ಹಾಡಿದ್ದಾರೆ. ಈ ಚಿತ್ರವನ್ನು ಶೈಲೇಶ್ ಕೊಲನು ನಿರ್ದೇಶನ ಮಾಡಿದ್ದಾರೆ.


