ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ (Vijayalakshmi) ಸಾಮಾಜಿಕ ಜಾಲತಾಣದಲ್ಲಿ ಒಂದಲ್ಲಾ ಒಂದು ಪೋಸ್ಟ್ ಹಂಚಿಕೊಳ್ಳುವ ಮೂಲಕ ಸದಾ ಆ್ಯಕ್ಟೀವ್ ಆಗಿರುತ್ತಾರೆ. ಇದೀಗ ಪತಿ ಜೊತೆಗಿನ ಹೊಸ ಫೋಟೋವನ್ನು ಹಂಚಿಕೊಂಡಿದ್ದಾರೆ. ಈ ಜೋಡಿಯ ಫೋಟೋ ನೋಡಿ ಫ್ಯಾನ್ಸ್ ವಾವ್ ಎಂದಿದ್ದಾರೆ. ಇದನ್ನೂ ಓದಿ: ಅಜಿತ್ ಕುಮಾರ್, ಬಾಲಯ್ಯಗೆ ಸೇರಿದಂತೆ ಹಲವು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ
ದರ್ಶನ್ (Darshan) ಜೊತೆಗಿನ ವಿಶೇಷ ಫೋಟೋವೊಂದನ್ನು ವಿಜಯಲಕ್ಷ್ಮಿ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಅದರಲ್ಲಿ ನೆಚ್ಚಿನ ಕುದುರೆ ಜೊತೆ ದರ್ಶನ್ ದಂಪತಿ ಖುಷಿಯಿಂದ ಪೋಸ್ ನೀಡಿದ್ದಾರೆ. ಈ ಫೋಟೋ ಈಗ ನಟನ ಫ್ಯಾನ್ಸ್ ಪೇಜ್‌ಗಳಲ್ಲಿ ವೈರಲ್ ಆಗ್ತಿದೆ. ಇದನ್ನೂ ಓದಿ:ನಮ್ಮ ಜನಗಳನ್ನ ಸಾಯಿಸ್ತಾರೆ ಅಂದ್ರೆ ನಾವ್ ಯುದ್ಧ ಮಾಡ್ಲೇಬೇಕು – ಉಗ್ರರ ದಾಳಿ ಖಂಡಿಸಿದ ಪ್ರೇಮ್
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬೇಲ್ ಮೇಲೆ ದರ್ಶನ್ ಹೊರಬಂದ್ಮೇಲೆ ಪತಿಯ ವ್ಯವಹಾರವನ್ನು ವಿಜಯಲಕ್ಷ್ಮಿ ಅವರೇ ನೋಡಿಕೊಳ್ತಿದ್ದಾರೆ. ದರ್ಶನ್‌ಗೆ ಎಲ್ಲೇ ಶೂಟಿಂಗ್ ಇದ್ರೂ ಅಥವಾ ಯಾವುದೇ ಕಾರ್ಯಕ್ರಮ ಆಗಿದ್ರೂ ಪತ್ನಿ ಜೊತೆಯಾಗಿರುತ್ತಾರೆ. ಇದು ಫ್ಯಾನ್ಸ್‌ಗೆ ಖುಷಿ ಕೊಟ್ಟಿದೆ. ಈ ಜೋಡಿ ಮೇಲೆ ಕೆಟ್ಟ ದೃಷ್ಟಿ ಬೀಳದಿರಲಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ.
ಅಂದಹಾಗೆ, ʻಡೆವಿಲ್’ ಸಿನಿಮಾದ ಚಿತ್ರೀಕರಣವು ಮೈಸೂರು ಹಾಗೂ ರಾಜಸ್ಥಾನದಲ್ಲಿ ನಡೆದಿದೆ. ಈ ಸಿನಿಮಾ ಕೆಲಸ ಭರದಿಂದ ನಡೆಯುತ್ತಿದೆ. ದರ್ಶನ್ ಜೊತೆ ರಚನಾ ರೈ, ವಿನಯ್ ಗೌಡ, ಶರ್ಮಿಳಾ ಮಾಂಡ್ರೆ ನಟಿಸುತ್ತಿದ್ದಾರೆ. ‘ತಾರಕ್’ ಡೈರೆಕ್ಟರ್ ಮಿಲನಾ ಪ್ರಕಾಶ್ ʻಡೆವಿಲ್’ಗೆ ನಿರ್ದೇಶನ ಮಾಡುತ್ತಿದ್ದಾರೆ.