ಪಂಚಾಂಗ
ಸಂವತ್ಸರ: ವಿಶ್ವಾವಸು, ಋತು: ವಸಂತ
ಅಯನ: ಉತ್ತರಾಯಣ, ಮಾಸ: ವೈಶಾಖ
ಪಕ್ಷ: ಶುಕ್ಲ, ತಿಥಿ: ಬಿದಿಗೆ
ನಕ್ಷತ್ರ: ಕೃತಿಕಾ
ರಾಹುಕಾಲ: 03:25 – 04:59
ಗುಳಿಕಕಾಲ: 12:16 – 01:51
ಯಮಗಂಡಕಾಲ: 09:08 – 10:42
ಮೇಷ: ನಿರ್ಧಾರ ತೆಗೆದುಕೊಳ್ಳುವ ಮುನ್ನ ಯೋಚಿಸಿ, ಹೊಸ ಯೋಜನೆಗಳನ್ನು ಪ್ರಾರಂಭಿಸಲು ಸಕಾಲ, ಹೊಟೇಲ್ ಉದ್ಯಮಿಗಳಿಗೆ ಆದಾಯ ವೃದ್ಧಿ.
ವೃಷಭ: ಅನಗತ್ಯ ಖರ್ಚು ವೆಚ್ಚ, ನೇರ ಮಾತುಗಳಿಂದ ತೊಂದರೆ, ಹಿತೈಷಿಗಳಿಂದ ಉತ್ತಮ ಸಲಹೆ.
ಮಿಥುನ: ಸಂಗಾತಿಯೊಂದಿಗೆ ಮನಸ್ತಾಪ, ಕ್ರೀಡಾಪಟುಗಳಿಗೆ ಉತ್ತಮ ಸೌಲಭ್ಯ, ಕೆಲಸದಲ್ಲಿ ತೊಡಕುಂಟಾದರೂ ಧೈರ್ಯದಿಂದ ಎದುರಿಸುವಿರಿ.
ಕಟಕ: ಹೊಸ ಜವಾಬ್ದಾರಿಗಳು ಹೆಗಲೇರುವ ಸಾಧ್ಯತೆ, ಆತ್ಮವಿಶ್ವಾಸ ಹೆಚ್ಚಾಗುವುದು, ಕುಟುಂಬದವರೊಂದಿಗೆ ಪ್ರವಾಸ.
ಸಿಂಹ: ಬಂಧು ಮಿತ್ರರೊಡನೆ ವಿನಾಕಾರಣ ವಿವಾದ, ಕೆಲಸಗಳು ಸಕಾಲದಲ್ಲಿ ಪೂರ್ಣಗೊಳ್ಳುವುದಿಲ್ಲ, ಮನೆಯಲ್ಲಿ ಸಂತಸದ ವಾತಾವರಣ.
ಕನ್ಯಾ: ಗೃಹ ನಿರ್ಮಾಣದಲ್ಲಿ ಆತುರ ಬೇಡ, ಸಾಲ ಮರುಪಾವತಿಯಿಂದ ನೆಮ್ಮದಿ, ಪ್ರತಿಷ್ಠಿತ ಜನರ ಪರಿಚಯ.
ತುಲಾ: ರಾಸಾಯನಿಕ ವಸ್ತು ತಯಾರಿಕೆಗೆ ಹೆಚ್ಚಿನ ಬೇಡಿಕೆ, ಗುರಿ ತಲುಪಲು ಹೆಚ್ಚು ಶ್ರಮ ಪಡಬೇಕಾದೀತು, ವೈಯಕ್ತಿಕ ವಿಷಯಗಳಲ್ಲಿ ಎಚ್ಚರಿಕೆ ಅಗತ್ಯ.
ವೃಶ್ಚಿಕ: ಹೊಸ ವಾಹನ ಖರೀದಿ ಸಾಧ್ಯತೆ, ಆವಿವಾಹಿತರಿಗೆ ವಿವಾಹ ಯೋಗ, ಆರೋಗ್ಯದಲ್ಲಿ ತೊಂದರೆ.
ಧನಸ್ಸು: ಹಣಕಾಸಿನ ವಿಚಾರದಲ್ಲಿ ಉತ್ತಮ ಪರಿಸ್ಥಿತಿ, ರಾಜಕೀಯದವರಿಗೆ ಪದವಿ ಪ್ರಾಪ್ತಿ, ಪುಣ್ಯಕ್ಷೇತ್ರ ದರ್ಶನ ಸಾಧ್ಯತೆ.
ಮಕರ: ಮಕ್ಕಳ ವಿಷಯದಲ್ಲಿ ಸಂಯಮದಿಂದಿರಿ, ಬೆಂಕಿಯಿಂದ ತೊಂದರೆ ಉಂಟಾಗಬಹುದು, ಕೃಷಿ ವರ್ಗದವರಿಗೆ ಸಹಾಯಧನ ಸಿಗಲಿದೆ.
ಕುಂಭ: ನಿರೀಕ್ಷಿಸಿದ ಕೆಲಸ ಕಾರ್ಯ ಆಗುವುದು, ಲೇವಾದೇವಿ ಮಾಡುವವರಿಗೆ ನಷ್ಟ, ಕುಟುಂಬದಲ್ಲಿ ಅಪವಾದಕ್ಕೆ ಒಳಗಾಗುವಿರಿ.
ಮೀನ: ಕಾನೂನು ವಿದ್ಯಾರ್ಥಿಗಳಿಗೆ ಪ್ರಗತಿ ಹೆಚ್ಚು, ಬಂಗಾರ ಖರೀದಿಸುವ ಸಾಧ್ಯತೆ, ನೀರಿನ ವ್ಯತ್ಯಾಸದಿಂದ ಅನಾರೋಗ್ಯ.