– ವಿಮಾನಗಳ ಹಾರಾಟಕ್ಕೂ ಸಮಸ್ಯೆ
– ಮ್ಯಾಡ್ರಿಡ್ ಓಪನ್ ಟೆನಿಸ್ ಟೂರ್ನಿ ತಾತ್ಕಾಲಿಕ ಸ್ಥಗಿತ
ಮ್ಯಾಡ್ರಿಡ್: ಫ್ರಾನ್ಸ್, ಪೋರ್ಚುಗಲ್ ಹಾಗೂ ದಕ್ಷಿಣ ಫ್ರಾನ್ಸ್‌ನಲ್ಲಿಂದು (Spain, Portugal, France) ಏಕಕಾಲಕ್ಕೆ ವಿದ್ಯುತ್ ಕಡಿತಗೊಂಡಿದ್ದು (Power Outage), ಲಕ್ಷಾಂತರ ಜನರು ಪರದಾಡುವಂತಾಗಿದೆ. ಅಲ್ಲದೇ ಈ ವಿದ್ಯುತ್ ಕಡಿತವು ರೈಲು (Train) ಸಂಚಾರ ಹಾಗೂ ವಿಮಾನ ಹಾರಾಟದ ಮೇಲೆ ಪರಿಣಾಮ ಬೀರಿದೆ ಎಂದು ವರದಿಗಳು ತಿಳಿಸಿವೆ.
ಮೂರು ಯೂರೋಪಿಯನ್ ದೇಶಗಳಲ್ಲಿ (European countries) ವಿದ್ಯುತ್ ಕಡಿತ ಸಂಭವಿಸಿದ್ದು, ಲಕ್ಷಾಂತರ ಜನಕ್ಕೆ ಸಮಸ್ಯೆ ತಂದೊಡ್ಡಿದೆ. ಆದ್ರೆ ವಿದ್ಯುತ್ ಕಡಿತಕ್ಕೆ ಇನ್ನೂ ನಿಖರ ಕಾರಣ ತಿಳಿದುಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ನಡುವೆ ಸ್ಪ್ಯಾನಿಷ್ ಪ್ರಧಾನಿ ಪೆಡ್ರೋ ಸ್ಯಾಂಚೆಜ್ ಪರಿಸ್ಥಿತಿ ಮೇಲ್ವಿಚಾರಣೆ ನಡೆಸಲು ಗ್ರಿಡ್ ಆಪರೇಟರ್ ತುರ್ತು ಸಭೆ ಕರೆದಿದ್ದಾರೆ. ಇಂಧನ ಸಚಿವೆ ಸಾರಾ ಆಗೆಸೆನ್ ಕೂಡ ಸಭೆಯಲ್ಲಿ ಪಾಲ್ಗೊಂಡಿದ್ದಾರೆ. ಇದನ್ನೂ ಓದಿ: ಫ್ಲೋರಿಡಾದಲ್ಲಿ 2 ದೋಣಿಗಳ ನಡುವೆ ಮುಖಾಮುಖಿ ಡಿಕ್ಕಿ – ಓರ್ವ ಸಾವು, 12 ಮಂದಿಗೆ ಗಾಯ
ಸದ್ಯ ಈ ಕುರಿತು ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿರುವ ಸರ್ಕಾರಿ ಸ್ವಾಮ್ಯದ ವಿದ್ಯುತ್ ಕಂಪನಿ ರೆಡ್ ಎಲೆಕ್ಟ್ರಿಕಾ, ಶೀಘ್ರದಲ್ಲೇ ಸಮಸ್ಯೆ ಪರಿಹರಿಸಲು ನಮ್ಮ ತಂಡ ಕೆಲಸ ಮಾಡುತ್ತಿದೆ. ಜೊತೆಗೆ ವಿದ್ಯುತ್ ಕಡಿತಕ್ಕೆ ನಿಖರ ಕಾರಣವನ್ನೂ ಪರಿಶೀಲಿಸಲಾಗುತ್ತಿದೆ, ಅದಕ್ಕಾಗಿ ಯುರೋಪಿಯನ್ ನೆಟ್‌ವರ್ಕ್ ಆಫ್ ಟ್ರಾನ್ಸ್‌ಮಿಷನ್ ಸಿಸ್ಟಮ್ ಆಪರೇಟರ್‌ಗಳೊಂದಿಗೆ ಸಂಪರ್ಕದಲ್ಲಿದೆ ಎಂದು ಮಾಹಿತಿ ಹಂಚಿಕೊಂಡಿದೆ. ಇದನ್ನೂ ಓದಿ: 26 ರಫೇಲ್ ಯುದ್ಧ ವಿಮಾನಗಳ ಖರೀದಿಗೆ ಸಹಿ; ಭಾರತ-ಫ್ರಾನ್ಸ್ ಮಧ್ಯೆ 63,000 ಕೋಟಿ ಮೆಗಾ ಡೀಲ್
ರೈಲು ಸಂಚಾರ, ವಿಮಾನ ಹಾರಾಟದಲ್ಲಿ ವ್ಯತ್ಯಯ:
ಏಕಕಾಲಕ್ಕೆ ದೇಶದ ವಿವಿಧೆಡೆ ವಿದ್ಯುತ್ ಕಡಿತಗೊಂಡ ಪರಿಣಾಮ ಸ್ಪೇನ್‌ನಾದ್ಯಂತ ರೈಲುಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಮ್ಯಾಡ್ರಿಡ್‌ನ ವಿಮಾನಗಳ ಹಾರಟದಲ್ಲೂ ಸಮಸ್ಯೆ ಉಂಟಾಗಿದೆ. ಪರಿಸ್ಥಿತಿ ಕುರಿತು ಬಜೆಟ್ ವಿಮಾನಯಾನ ಸಂಸ್ಥೆ ರಯಾನ್ಏರ್ ಮೇಲ್ವಿಚಾರಣೆ ನಡೆಸುತ್ತಿದೆ. ಅಲ್ಲದೇ ವಿದ್ಯುತ್ ಕಡಿತದಿಂದಾಗಿ ಮ್ಯಾಡ್ರಿಡ್ ಓಪನ್ ಟೆನಿಸ್ ಟೂರ್ನಿಯನ್ನ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಮೋದಿ-ರಾಜನಾಥ್ ಸಿಂಗ್ ಮಹತ್ವದ ಚರ್ಚೆ; ಉಗ್ರರ ವಿರುದ್ಧ ಮುಂದಿನ ಕ್ರಮಕ್ಕೆ ಮಾಸ್ಟರ್ ಪ್ಲ್ಯಾನ್