– ಹಿಂದೂಗಳನ್ನ ಹುಡುಕಿ ಕೊಂದ್ರು ಅಂತ ಬಿಜೆಪಿ ರಾಜಕಾರಣ ಮಾಡ್ತಿದೆ ಎಂದು ಸಚಿವ ಅಸಮಾಧಾನ
ಬೆಳಗಾವಿ: ಪಹಲ್ಗಾಮ್ ದಾಳಿ (Pahalgam Terrorist Attack) ವಿಚಾರದಲ್ಲಿ ಬಿಜೆಪಿ ರಾಜಕಾರಣ ಮಾಡುತ್ತಿದೆ. ಹಿಂದೂಗಳನ್ನ ಹುಡುಕಿ ಕೊಂದರು ಅಂತ ರಾಜಕಾರಣ ಮಾಡುತ್ತಿದೆ ಎಂದು ಸಚಿವ ಆರ್.ಬಿ ತಿಮ್ಮಾಪೂರ (RB Timmapur) ಹೇಳಿದ್ದಾರೆ.
ಬೆಳಗಾವಿಯಲ್ಲಿ ʻಪಬ್ಲಿಕ್ ಟಿವಿʼ (Public TV) ಜೊತೆಗೆ ಮಾತನಾಡಿದ ಅವರು, ಪ್ಯಾಂಟ್ ಬಿಚ್ಚಿಸಿದ್ರು ಅಂತ ಮೃತರ ಪತ್ನಿಯೇ ಹೇಳಿದ್ದಾರೆ, ಇದಕ್ಕೆ ನೀವೇನು ಹೇಳ್ತೀರಿ ಅನ್ನೋ ಪ್ರಶ್ನೆಗೆ ಉತ್ತರಿಸಿ, ಪ್ಯಾಂಟ್ ಬಿಚ್ಚಿಸಿದರು ಮತ್ತೊಂದು ಬಿಚ್ಚಿಸಿದರು ಎಂಬುದು ನನಗೆ ಗೊತ್ತಿಲ್ಲ. ಆದ್ರೆ ರಾಜಕಾರಣದಲ್ಲಿ ಧರ್ಮ ಬೆರೆಸದೇ ರಕ್ಷಣೆ ಕಡೆ ಗಮನ ಕೊಡಲಿ ಎಂದು ಹೇಳಿದರು. ಇದನ್ನೂ ಓದಿ: ಉಗ್ರರು ನಿಮ್ಮ ಚಡ್ಡಿ ಬಿಚ್ಚಿಸಿ ಚೆಕ್ ಮಾಡಿದ್ರೆ ಏನ್ ಮಾಡ್ತೀರಿ – ತಿಮ್ಮಾಪೂರ್ ವಿರುದ್ಧ ಸೂರ್ಯ ಆಕ್ರೋಶ
ಇಂತಹ ಕೃತ್ಯವನ್ನು ನಾವೆಲ್ಲರೂ ಖಂಡಿಸುತ್ತೇವೆ. ಅಂತಹವರ ಮೇಲೆ ತುರ್ತು ಕ್ರಮ ಕೈಗೊಳ್ಳಬೇಕು. ಉಗ್ರರು ಬಂದು ನನ್ನ ದೇಶದ ಪ್ರಜೆಯನ್ನ ಹೊಡೆದಾಗ ಕೆಲವರು ಧರ್ಮ ಕೇಳಿ ಮಾಡಿದ್ದಾರೆ ಅಂತ ಮಾಧ್ಯಮಗಳಲ್ಲಿ ಗಮನಿಸಿದೆ. ಇಂತಹ ಕೃತ್ಯಕ್ಕೆ ಸಪೋರ್ಟ್ ಮಾಡುವವರ ವಿರುದ್ಧವೂ ಕ್ರಮ ಆಗಬೇಕು. ಅವರನ್ನ ಸದೆಬಡಿಯುವ ಕಡೆ ಗಮನಕೊಡಬೇಕು. ಬೇಹುಗಾರಿಕೆ ಗಟ್ಟಿಗೊಳಿಸಿದ್ರೆ, ಈ ಸ್ಥಿತಿ ಬರುತ್ತಿರಲಿಲ್ಲ. ಯುದ್ಧಕ್ಕೆ ಹೊರಟಿದ್ದೀವಿ ಅನ್ನೋ ಮಾತೇ ಬರುತ್ತಿರಲಿಲ್ಲ ಎಂದು ತಿಳಿಸಿದರು. ಇದನ್ನೂ ಓದಿ: Pahalgam Terror Attack – ಮೃತ ಭರತ್ ಭೂಷಣ್ ಪತ್ನಿ ಹೇಳಿಕೆ ದಾಖಲಿಸಿಕೊಂಡ ಎನ್‌ಐಎ
ಆದ್ರೆ ದೇಶದ ಪ್ರಜೆಗಳ ವಿಚಾರದಲ್ಲಿ ರಾಜಕೀಯ ಮಾಡೋದು ಸರಿಯಲ್ಲ, ಧರ್ಮವನ್ನ ಇದರಲ್ಲಿ ತರಬೇಡಿ ಎಂದು ಒತ್ತಾಯಿಸಿದರು. ಇದನ್ನೂ ಓದಿ: ಬರಿದಾದ ತುಂಗಭದ್ರಾ; ಕಲ್ಯಾಣ ಕರ್ನಾಟಕ, ಆಂಧ್ರ-ತೆಲಂಗಾಣದ ಜಿಲ್ಲೆಗಳಿಗೆ ನೀರಿನ ಅಭಾವ ಸಾಧ್ಯತೆ