ನವದೆಹಲಿ: ಕೇಂದ್ರ ಸರ್ಕಾರ ಪಾಕಿಸ್ತಾನದ (Pakistan) ಪ್ರಜೆಗಳಿಗೆ ಭಾರತ (India) ತೊರೆಯಲು ನೀಡಿದ್ದ ಗಡುವು ಮುಗಿದಿದೆ. ಗಡುವು ಮುಗಿದರೂ ಭಾರತ ತೊರೆಯದೇ ಇಲ್ಲೇ ಉಳಿದಿದವರನ್ನು ಬಂಧಿಸಿ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾ 3 ಲಕ್ಷ ರೂ. ದಂಡ ಅಥವಾ ಎರಡನ್ನೂ ವಿಧಿಸಲಾಗುತ್ತದೆ ಕೇಂದ್ರ ಸರ್ಕಾರ ಎಚ್ಚರಿಸಿದೆ.
ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಯ (Pahalgam Terror Attack) ನಂತರ ಕೇಂದ್ರ ಸರ್ಕಾರ ಪಾಕಿಸ್ತಾನಿ ಪ್ರಜೆಗಳಿಗೆ ಭಾರತ ಬಿಟ್ಟು ವಾಪಸ್ ಹೋಗುವಂತೆ ಆದೇಶಿಸಲಾಗಿತ್ತು. ಸಾರ್ಕ್ ವೀಸಾ ಹೊಂದಿರುವವರು ಏ.26ರೊಳಗೆ ದೇಶ ಬಿಡಬೇಕಿತ್ತು. ವೈದ್ಯಕೀಯ ವೀಸಾ ಹೊಂದಿರುವ ಪಾಕಿಸ್ತಾನಿ ಪ್ರಜೆಗಳು ಏ.29ರೊಳಗೆ ದೇಶ ಬಿಡಬೇಕು ಎಂದು ಆದೇಶದಲ್ಲಿ ತಿಳಿಸಲಾಗಿತ್ತು. ಇದನ್ನೂ ಓದಿ: ಭಾರತ – ಪಾಕ್ ನಡುವೆ ಉದ್ವಿಗ್ನತೆ ಮೇಲೆ ಚೀನಾ ನಿಗಾ – ಪಾಕಿಸ್ತಾನದ ಈ ಬೇಡಿಕೆಗೆ ಬೆಂಬಲ
ಏ.26ರೊಳಗೆ ನಿರ್ಗಮಿಸಬೇಕಾದ 12 ವಿಭಾಗಗಳ ವೀಸಾಗಳಲ್ಲಿ ವೀಸಾ ಆನ್ ಆಗಮನ, ವ್ಯವಹಾರ, ಚಲನಚಿತ್ರ, ಪತ್ರಕರ್ತರು, ಸಾರಿಗೆ, ಸಮ್ಮೇಳನ, ಪರ್ವತಾರೋಹಣ, ವಿದ್ಯಾರ್ಥಿಗಳು, ಸಂದರ್ಶಕ, ಪ್ರವಾಸಿಗರು, ಯಾತ್ರಿಗಳ ವೀಸಾಗಳು ಸೇರಿತ್ತು. ಆದರೆ ದೇಶ ತೊರೆಯದ ಪಾಕ್ ಪ್ರಜೆಗಳನ್ನು ಏ.4 ರಿಂದ ಜಾರಿಗೆ ಬಂದ ವಲಸೆ ಮತ್ತು ವಿದೇಶಿಯರ ಕಾಯ್ದೆ 2025ರ ಅಡಿ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು 3 ಲಕ್ಷ ರೂ.ಗಳ ದಂಡ ಅಥವಾ ಎರಡನ್ನೂ ವಿಧಿಸಬಹುದಾಗಿದೆ.
ಏ.22 ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪಾಕ್ ಬೆಂಬಲಿತ ಉಗ್ರರು ನಡೆಸಿದ್ದ ದಾಳಿಯಲ್ಲಿ 26 ಜನ ಪ್ರವಾಸಿಗರು ಸಾವನ್ನಪ್ಪಿದ್ದರು. ಇದಾದ ಬಳಿಕ ಪಾಕ್ ವಿರುದ್ಧ ಭಾರತ ಕಠಿಣ ಕ್ರಮಗಳನ್ನು ಕೈಗೊಂಡಿತ್ತು. ಇದನ್ನೂ ಓದಿ: ಭಾರತದ ಮೇಲೆ ದಾಳಿಗೆಂದೇ 130 ಅಣು ಬಾಂಬ್‌ಗಳನ್ನು ಬಚ್ಚಿಟ್ಟಿದ್ದೇವೆ – ಪಾಕ್ ಸಚಿವನ ಬೆದರಿಕೆ