‘ಕಣ್ಣಪ್ಪ’ ಸಿನಿಮಾದಲ್ಲಿ (Kannappa) ಉಚಿತವಾಗಿ ನಟಿಸಿರುವ ಪ್ರಭಾಸ್ ಬಗ್ಗೆ ನಟ ಮಂಚು ವಿಷ್ಣು (Manchu Vishnu) ಹಗುರವಾಗಿ ಮಾತಾಡಿ, ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ. ಪ್ರಭಾಸ್ ʻಸಾಮಾನ್ಯ ನಟ’ ಎಂದು ಮಂಚು ವಿಷ್ಣು ಆಡಿದ ಮಾತುಗಳು ಪ್ರಭಾಸ್ ಅಭಿಮಾನಿಗಳನ್ನು ಕೆರಳಿಸಿವೆ. ಅಭಿಮಾನಿಗಳ ಆಕ್ರೋಶಕ್ಕೂ ಕಾರಣವಾಗಿದೆ. ಇದನ್ನೂ ಓದಿ: ‘ಕಿಸ್’ ನಟಿಗೆ ಅದೃಷ್ಟ- ಸಿದ್ಧಾರ್ಥ್ ಮಲ್ಹೋತ್ರಾಗೆ ಶ್ರೀಲೀಲಾ ಜೋಡಿ?
ಪ್ರಭಾಸ್ (Prabhas) ಬಗ್ಗೆ ಲಘುವಾಗಿ ಮಾತನಾಡಿ ಮಂಚು ವಿಷ್ಣು ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಸಂದರ್ಶನದಲ್ಲಿ ಮಂಚು ವಿಷ್ಣು ನೇರವಾಗಿ ಪ್ರಭಾಸ್ ನಟನೆ ಬಗ್ಗೆ ಮಾತನಾಡಿಲ್ಲ, ಬದಲಿಗೆ ಮೋಹನ್ ಲಾಲ್ (Mohanlal) ಜೊತೆ ಹೋಲಿಸಿ ಕಾಮೆಂಟ್ ಮಾಡಿದ್ದಾರೆ. ಪ್ರಭಾಸ್ ಜೊತೆ ನಟಿಸಿದ ಅನುಭವ ಹೇಗಿತ್ತು ಎಂದು ವಿಷ್ಣು ಮಂಚುಗೆ ಕೇಳಲಾದ ಪ್ರಶ್ನೆಗೆ, ಪ್ರಭಾಸ್ ಆ್ಯಕ್ಟಿಂಗ್ ಸೀದಾಸಾದಾ, ಅವರು ಸಾಮಾನ್ಯ ನಟ ಅನ್ನಿಸುತ್ತದೆ. ಅವರು ಲೆಜೆಂಡರಿ ನಟನಾಗಿ ಬೆಳೆಯಲು ಸಮಯ ಬೇಕು ಅಂತ ನನಗೆ ಅನಿಸುತ್ತದೆ. ಆದರೆ ಮೋಹನ್ ಲಾಲ್ ಲೆಜೆಂಡ್. ಏಕೆಂದರೆ ಅವರು ಸಾಗಿಬಂದ ಹಾದಿ. ಮುಂದಿನ ದಿನಗಳಲ್ಲಿ ಪ್ರಭಾಸ್ ಕೂಡ ಲೆಜೆಂಡ್ ಆಗುತ್ತಾರೆ ನನಗೆ ನಂಬಿಕೆಯಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಉಗ್ರರ ದಾಳಿ ಸ್ಥಳದಲ್ಲೇ ಮಾರ್ಟಿನ್ ಸಿನಿಮಾ ಶೂಟಿಂಗ್ ನಡೆದಿತ್ತು, ಆಗ ಸೆಕ್ಯೂರಿಟಿ ಚೆನ್ನಾಗಿತ್ತು: ಧ್ರುವ ಸರ್ಜಾ
ವಿಷ್ಣು ಮಂಚು ಅವರು ಪ್ರಭಾಸ್ ಬಗ್ಗೆ ಸಾಮಾನ್ಯ ನಟ ಎಂದು ನೀಡಿರುವ ಹೇಳಿರುವ ಹೇಳಿಕೆ ಈಗ ಅಭಿಮಾನಿಗಳ ಕೋಪಕ್ಕೆ ಕಾರಣವಾಗಿದೆ. ಪ್ರಭಾಸ್ ಬಗ್ಗೆ ವಿಷ್ಣು ಲಘುವಾಗಿ ಮಾತನಾಡಿದ್ದಾರೆ ಎಂದು ನಟನ ಫ್ಯಾನ್ಸ್ ರೆಬೆಲ್ ಆಗಿದ್ದಾರೆ.
ಅಂದಹಾಗೆ, ತೆಲುಗಿನ ಹಿರಿಯ ನಟ ಮೋಹನ್ ಬಾಬು ನಿರ್ಮಾಣದ ‘ಕಣ್ಣಪ್ಪ’ ಚಿತ್ರದ ಜೂನ್ 27ರಂದು ರಿಲೀಸ್ ಆಗಲಿದೆ. ಇದರಲ್ಲಿ ಅಕ್ಷಯ್ ಕುಮಾರ್, ‘ಮಗಧೀರ’ ನಟಿ ಕಾಜಲ್, ಮೋಹನ್‌ಲಾಲ್ ಸೇರಿದಂತೆ ಅನೇಕರು ನಟಿಸಿದ್ದಾರೆ.