ಬೆಂಗಳೂರಿನ ಅರಮನೆ ಮೈದಾನದ ಗಾಯತ್ರಿ ವಿಹಾರ್‌ನಲ್ಲಿ ‘ಪಬ್ಲಿಕ್ ಟಿವಿ’ ಪ್ರಸ್ತುತಿ ವಿದ್ಯಾಪೀಠ 8ನೇ ಆವೃತ್ತಿಗೆ ಇಂದು ಬೆಳಗ್ಗೆ ಚಾಲನೆ ಸಿಕ್ಕಿದೆ. ಕರ್ನಾಟಕದ ಅತಿದೊಡ್ಡ ಶೈಕ್ಷಣಿಕ ಮೇಳಕ್ಕೆ ವಿದ್ಯಾರ್ಥಿಗಳು ಮತ್ತು ಪೋಷಕರ ದಂಡು ಆಗಮಿಸುತ್ತಿದೆ. ಇಂದು ಮತ್ತು ನಾಳೆ (ಏ.26, 27) ಎರಡು ದಿನ ಬೆಳಗ್ಗೆ 9 ರಿಂದ ಸಂಜೆ 6 ಗಂಟೆವರೆಗೆ ಶೈಕ್ಷಣಿಕ ಮೇಳ ನಡೆಯಲಿದೆ. ತಪ್ಪದೇ ಆಗಮಿಸಿ ಸದುಪಯೋಗಪಡಿಸಿಕೊಳ್ಳಿ.. ಫೋಟೊಗಳಲ್ಲಿ ವಿದ್ಯಾಪೀಠದ ಚಿತ್ರಣ ಕಂಡುಬಂದಿದ್ದು ಹೀಗೆ..
ಪಬ್ಲಿಕ್ ಟಿವಿಯ ವಿದ್ಯಾಪೀಠ 8ನೇ ಆವೃತ್ತಿಗೆ ಶನಿವಾರ ಬೆಳಗ್ಗೆ ಚಾಲನೆ ದೊರೆಯಿತು. ಪಬ್ಲಿಕ್ ಟಿವಿ ಮುಖ್ಯಸ್ಥರಾದ ಹೆಚ್.ಆರ್.ರಂಗನಾಥ್ ಅವರು ಟೇಪ್ ಕತ್ತರಿಸಿ ಮೇಳಕ್ಕೆ ಚಾಲನೆ ಕೊಟ್ಟರು. ಈ ವೇಳೆ, ರೇವಾ ಯೂನಿವರ್ಸಿಟಿ ಚಾನ್ಸಲರ್ ಡಾ. ಪಿ.ಶ್ಯಾಮರಾಜ್, ಗಾರ್ಡನ್ ಸಿಟಿ ಯೂನಿವರ್ಸಿಟಿ ಚಾನ್ಸಲರ್ ಡಾ. ವಿ.ಜೆ.ಜೋಸೆಫ್, ಕೇಂಬ್ರಿಡ್ಜ್ ಶಿಕ್ಷಣ ಸಮೂಹ ಸಂಸ್ಥೆಯ ಚೇರ್ಮನ್ ಡಾ. ಡಿ.ಕೆ.ಮೋಹನ್, ರಾಮಯ್ಯ ಯೂನಿವರ್ಸಿಟಿ ಆಫ್ ಅಪ್ಲೈಡ್ ಸೈನ್ಸ್‌ನ ವೈಸ್ ಚಾನ್ಸಲರ್ ಡಾ. ಕುಲ್ದೀಪ್ ಕುಮಾರ್ ರೈನಾ ಸಾಥ್ ನೀಡಿದರು.
ಪಬ್ಲಿಕ್ ಟಿವಿ ವಿದ್ಯಾಪೀಠ ಶೈಕ್ಷಣಿಕ ಮೇಳವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಗಣ್ಯರು.
ಸಮಾರಂಭದಲ್ಲಿ ಮಾತನಾಡಿದ ಪಬ್ಲಿಕ್ ಟಿವಿ ಮುಖ್ಯಸ್ಥರಾದ ಹೆಚ್.ಆರ್.ರಂಗನಾಥ್
ವಿದ್ಯಾಪೀಠ 7 ಆವೃತ್ತಿಗಳ ಮಾಹಿತಿ ಒಳಗೊಂಡ ಪುಸ್ತಕವನ್ನು ಗಣ್ಯರು ಬಿಡುಗಡೆ ಮಾಡಿದರು.
ವಿದ್ಯಾಪೀಠ ಶೈಕ್ಷಣಿಕ ಮೇಳದಲ್ಲಿ ಮಾಹಿತಿ ಪಡೆದುಕೊಳ್ಳುತ್ತಿರುವ ವಿದ್ಯಾರ್ಥಿಗಳು.
ವಿದ್ಯಾಪೀಠ ಶೈಕ್ಷಣಿಕ ಮೇಳದ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಂಪರ್ ಬಹುಮಾನ ಗೆಲ್ಲಿ. ಸೈಕಲ್ ಗಿಫ್ಟ್‌ಗಳು.
ಪಬ್ಲಿಕ್ ಟಿವಿಯ ಶೈಕ್ಷಣಿಕ ಮೇಳದಲ್ಲಿ ಪಾಲ್ಗೊಂಡು ಲ್ಯಾಪ್‌ಟಾಪ್ ಬಹುಮಾನ ಗೆದ್ದ ವಿದ್ಯಾರ್ಥಿ.
ವಿದ್ಯಾಪೀಠ ಎಜುಕೇಷನ್ ಎಕ್ಸ್‌ಪೋದಲ್ಲಿ ಭಾಗವಹಿಸಿರುವ ವಿದ್ಯಾರ್ಥಿಗಳು, ಪೋಷಕರು.