ಬೆಂಗಳೂರು: ಪಾಕಿಸ್ತಾನ ಪ್ರಜೆಗಳನ್ನು (Pakistan Citizens) ವಾಪಸ್ ಕಳುಹಿಸಲು ಕೇಂದ್ರ ಸರ್ಕಾರದಿಂದ ಸೂಚನೆ ಬಂದಿದ್ದು, ಶುಕ್ರವಾರ ಗೃಹ ಸಚಿವಾಲಯದಿಂದ ಅಡ್ವೈಸರಿ ಬಂದಿದೆ ಎಂದು ಗೃಹ ಸಚಿವ ಪರಮೇಶ್ವರ್ (G Parameshwar) ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ಬೆಂಗಳೂರಿನಲ್ಲಿ ಮಾತನಾಡಿದ ಅವರು, ರಾಜ್ಯದ ಎಲ್ಲಾ ಎಸ್‌ಪಿಗಳು, ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದೇವೆ. ಎಷ್ಟು ಮಂದಿ ಪಾಕ್ ಪ್ರಜೆಗಳಿದ್ದಾರೆ ಎಂದು ಪತ್ತೆಹಚ್ಚಲಾಗುತ್ತಿದೆ. ಪಾಕ್ ವಿದ್ಯಾರ್ಥಿಗಳಿದ್ದರೂ ವಾಪಸ್ ಕಳುಹಿಸಬೇಕಾಗುತ್ತದೆ. ಪಾಕ್ ವಿದ್ಯಾರ್ಥಿಗಳಿಗೆ ವಿನಾಯ್ತಿ ಕೊಟ್ಟ ಹಾಗೆ ಕಾಣಿಸುತ್ತಿಲ್ಲ ಎಂದರು. ಇದನ್ನೂ ಓದಿ: ದೇಶಕ್ಕೇನಾದರೂ ಪರವಾಗಿಲ್ಲ, ವೋಟ್ ಬಿದ್ದರೆ ಸಾಕು ಅನ್ನೋ ಮನಸ್ಥಿತಿಯಲ್ಲಿದ್ದಾರೆ ಸಿಎಂ: ಅಶೋಕ್
ಪಾಕ್ ಪ್ರಜೆಗಳ ಬಗ್ಗೆ ಅಧಿಕಾರಿಗಳು ಮಾಹಿತಿ ಸಂಗ್ರಹ ಮಾಡುತ್ತಿದ್ದಾರೆ. ಬೆಂಗಳೂರಿನಲ್ಲಿಯೂ ಸೀನಿಯರ್ ಪೊಲೀಸ್ ಅಧಿಕಾರಿಗಳಿಗೆ ತಿಳಿಸಿದ್ದೇವೆ. ದೀರ್ಘಾವಧಿ ವೀಸಾ ಇದ್ದವರಿಗೆ ಕ್ರಮ ತೆಗೆದುಕೊಂಡಿದ್ದೇವೆ. ಪ್ರತಿ ಜಿಲ್ಲೆಯ ಎಸ್‌ಪಿಗೆ ತಿಳಿಸಿದ್ದೇವೆ. ರಾಜ್ಯದಲ್ಲಿ ಪೊಲೀಸ್ ಇಲಾಖೆ ಅಲರ್ಟ್ ಆಗಿದೆ. ಘಟನೆ ಆದಮೇಲೆ ಅಲರ್ಟ್ ಆಗಿದ್ದೇವೆ ಎಂದು ತಿಳಿಸಿದರು. ಇದನ್ನೂ ಓದಿ: ಬೈಕ್ ಕಳ್ಳತನ ಮಾಡಿದ್ದ ಇಬ್ಬರು ಕಳ್ಳರು ಅಂದರ್ – 5 ಬೈಕ್ ವಶಕ್ಕೆ
ಮೋದಿ (Narendra Modi) ರಾಜೀನಾಮೆ ಯಾರು ಕೇಳಿದ್ದಾರೆ ಗೊತ್ತಿಲ್ಲ. ಅದರ ಬಗ್ಗೆ ನನಗೆ ಗೊತ್ತಿಲ್ಲ ಎಂದು ಹೇಳಿದರು. ಇದನ್ನೂ ಓದಿ: ದೆಹಲಿ-ಮುಂಬೈ ಎಕ್ಸ್‌ಪ್ರೆಸ್ ವೇ ಸ್ವಚ್ಛಗೊಳಿಸುತ್ತಿದ್ದಾಗ ಪಿಕಪ್ ಡಿಕ್ಕಿ – 6 ಮಂದಿ ಸ್ವಚ್ಛತಾ ಸಿಬ್ಬಂದಿ ಸಾವು