ಬೆಂಗಳೂರು: ಸಿದ್ಧಾಂತವೇ ಇಲ್ಲದ ಸಿದ್ದರಾಮಯ್ಯ (CM Siddaramaiah) ಇಂದು ನಮ್ಮ ಮುಂದೆ ಇದ್ದಾರೆ, ದೇಶಕ್ಕೆ ಏನಾದರೂ ಪರವಾಗಿಲ್ಲ, ಮತ ಬಿದ್ದರೆ ಸಾಕು ಎಂಬ ಮನಸ್ಥಿತಿಗೆ ಸಿಎಂ ಬಂದಿದ್ದಾರೆ ಎಂದು ವಿಪಕ್ಷ ನಾಯಕ ಆರ್.ಆಶೋಕ್ (R Ashok) ಕಿಡಿಕಾರಿದ್ದಾರೆ.
ವಿಧಾನಸಭೆಯಲ್ಲಿ ಪಹಲ್ಗಾಮ್ (Pahalgam) ಉಗ್ರರ ದಾಳಿ ಪ್ರಕರಣದಲ್ಲಿ ಯುದ್ಧದ ಅನಿವಾರ್ಯತೆ ಇಲ್ಲವೆಂಬ ಸಿಎಂ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಸಿದ್ದರಾಮಯ್ಯ ಮಾನಸಿಕ ಸ್ಥಿತಿ ಪೂರ್ತಿ ಮುಸ್ಲಿಮರ ಮತದ ಬಗ್ಗೆಯೇ ಯೋಚಿಸುವ ರೀತಿ ಆಗಿರುವುದು ದುರದೃಷ್ಟಕರ. ಹಾಗಾದರೆ ಸತ್ತಿರುವವರ ಪ್ರಾಣಕ್ಕೆ ಬೆಲೆಯೇ ಇಲ್ಲವೇ? ಹಮಾಸ್ ಉಗ್ರರು ಬಂದು ತರಬೇತಿ ನೀಡಿ ಕಳುಹಿಸಿದ್ದರು ಎಂಬುದು ಮಾಹಿತಿಗಳ ಮೂಲಕ ಹೊಂದಾಣಿಕೆ ಆಗುತ್ತಿದೆ. ಅದನ್ನು ಸಿದ್ದರಾಮಯ್ಯ ಅವರು ಮಾತ್ರ ಕ್ಷಮಿಸಬಹುದಷ್ಟೇ. ದೇಶಕ್ಕೆ ಏನು ಆದರೂ ಪರವಾಗಿಲ್ಲ, ತಮಗೆ ಮತ ಬಿದ್ದರೆ ಸಾಕು ಎಂಬ ಮನಸ್ಥಿತಿಗೆ ಬಂದಿದ್ದಾರೆ. ಸಿದ್ಧಾಂತವೇ ಇಲ್ಲದ ಸಿದ್ದರಾಮಯ್ಯ ಇಂದು ನಮ್ಮ ಮುಂದೆ ಇದ್ದಾರೆ ಎಂದು ಕಿಡಿಕಾರಿದರು.ಇದನ್ನೂ ಓದಿ: ಪ್ರಧಾನ ಮಂತ್ರಿಗಳ ಈ ಆಟಿಟ್ಯೂಡ್ ಸರಿಯಿಲ್ಲ: ಮಲ್ಲಿಕಾರ್ಜುನ ಖರ್ಗೆ ಕಿಡಿ
ನಿಮ್ಮ ಮನೆಯಲ್ಲಿ ಈ ರೀತಿ ಉಗ್ರರು ಬಂದು ಹೊಡೆದು ಹಾಕಿರುತ್ತಿದ್ದರೆ ಈ ರೀತಿ ಹೇಳುತ್ತಿದ್ದರಾ? ಹಾಗಾದರೆ ಸತ್ತವರ ಮನೆ ಬಾಗಿಲಿಗೆ ಹಾರ ಹಾಕಲು ಯಾಕೆ ಹೋಗಿದ್ರಿ? ಇಲ್ಲಿ ಬಂದು ಸತ್ತವರು ಸತ್ತರು ಎನ್ನುವುದು ನಾಚಿಕೆಗೇಡಿನ ಸಂಗತಿ. ಮಲ್ಲಿಕಾರ್ಜುನ ಖರ್ಗೆ ಎಲ್ಲರೂ ಒಟ್ಟಾಗಿ ಹೋರಾಡೋಣ ಎಂದಿದ್ದಾರೆ. ಇಲ್ಲಿ ಸಿದ್ದರಾಮಯ್ಯ ಮನೆ ಮುರಿಯುವ ಮಾತಾಡಿದ್ದಾರೆ. ಯಾವುದೇ ಪಾಕಿಸ್ತಾನಿ ಭಾರತದಲ್ಲಿ ಇರಬಾರದು ಎಂದು ಕೇಂದ್ರ ಸರ್ಕಾರ ಸೂಚನೆ ಕೊಟ್ಟಿದೆ. ಭಟ್ಕಳದಲ್ಲಿ 10ಕ್ಕಿಂತ ಹೆಚ್ಚು ಪಾಕಿಸ್ತಾನದವರು ಇದ್ದಾರೆ. ಆದರೆ ಪಾಕಿಸ್ತಾನದಲ್ಲಿ ಈಗಾಗಲೇ ಭಾರತೀಯರನ್ನು ಹೊರ ಹಾಕಿದ್ದಾರೆ. ಇದರ ಬಗ್ಗೆ ಸಿದ್ದರಾಮಯ್ಯ ಯಾಕೆ ಮಾತನಾಡುತ್ತಿಲ್ಲ. ಕೂಡಲೇ ಭಟ್ಕಳದಲ್ಲಿರುವ ಪಾಕಿಸ್ತಾನದವರನ್ನು ಒದ್ದು ಹೊರ ಹಾಕಬೇಕು. ಮೀರ್ ಸಾಧಿಕ್‌ನಂತವರು ನಮ್ಮಲ್ಲೇ ಇದ್ದಾರೆ ಎಂದು ಆರೋಪಿಸಿದರು.
ಕಾಶ್ಮೀರದಲ್ಲಿ ಇರುವುದು ಐಎನ್‌ಡಿಐ ಮೈತ್ರಿ ಸರ್ಕಾರ, ಯಾವುದೇ ಸೆಕ್ಯುರಿಟಿ ಬಗ್ಗೆ ಅಲ್ಲಿನ ರಾಜ್ಯ ಸರ್ಕಾರ ಕೊಡುವ ಸಲಹೆ ಮೇರೆಗೆ ಆಗುತ್ತದೆ. ರಾಮೇಶ್ವರಂ ಕೆಫೆ, ಕುಕ್ಕರ್ ಬಾಂಬ್ ಸ್ಫೋಟ ಆದಾಗ ಏನು ಮಣ್ಣು ತಿನ್ನುತ್ತಿದ್ರಾ? ದೇಶದ ಪ್ರಶ್ನೆ ಬಂದಾಗ ಎಲ್ಲರೂ ಒಂದೇ ವಾಯ್ಸ್‌ನಲ್ಲಿ ಮಾತಾಡಬೇಕು. ಆದರೆ ಸಿದ್ದರಾಮಯ್ಯ ವೋಟ್ ವಾಯ್ಸ್‌ನಲ್ಲಿ ಮಾತಾಡುತ್ತಾರೆ. ಕಲಬುರ್ಗಿಯ ರಸ್ತೆಯಲ್ಲಿ ಪಾಕಿಸ್ತಾನದ ಧ್ವಜ ಹಾಕಿದ್ದರೆ ಮುಸ್ಲಿಂ ಮಹಿಳೆಯರು ಅದಕ್ಕೆ ಗೌರವ ತೋರಿಸಿದ್ದಾರೆ. ದೇಶದ ಒಳಗೆ ಇರುವ ದೇಶ ದ್ರೋಹಿಗಳನ್ನು ಮಟ್ಟ ಹಾಕಬೇಕು. ಸಿದ್ದರಾಮಯ್ಯ ಹೇಳಿಕೆ ಮೃತಪಟ್ಟವರಿಗೆ ಅವಮಾನವಾಗುವಂತಹದ್ದು, ಕೂಡಲೇ ಸಿದ್ದರಾಮಯ್ಯ ಜನರ ಮುಂದೆ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.
ಕೇಂದ್ರ ಗುಪ್ತಚರ ವ್ಯವಸ್ಥೆ ವೈಫಲ್ಯ ಎಂಬ ಸಚಿವ ಸಂತೋಷ್ ಲಾಡ್ ಹೇಳಿಕೆ ವಿಚಾರವಾಗಿ ಮಾತನಾಡಿ, ಸಂತೋಷ್ ಲಾಡ್ (Santosh Lad) ಇನ್ನಷ್ಟು ಮೆಚ್ಯೂರ್ ಆಗಬೇಕು. ಸೈನ್ಯದ ಬಗ್ಗೆಯೇ ಅನುಮಾನ ಪಡುತ್ತಾರಲ್ಲಾ? ಸೈನಿಕರು ಅಲ್ಲಿ ಪ್ರಾಣದ ಹಂಗು ತೊರೆದು ಇರುವುದರಿಂದ ಇಲ್ಲಿ ಸಂತೋಷ್ ಲಾಡ್ ಆರಾಮಾಗಿ ಮಜಾ ಹೊಡೆದುಕೊಂಡು ಇದ್ದಾರೆ. ಇದೇ ರೀತಿ ಪಕ್ಷಗಳು ಪಾಕಿಸ್ತಾನದಲ್ಲೂ (Pakistan) ಮಾಡುತ್ತಿದ್ದಾರಾ? ದೇಶಕ್ಕೆ ಸಂಕಷ್ಟ ಬಂದಾಗ ಹೇಗೆ ನಡೆದುಕೊಳ್ಳಬೇಕು ಎಂದು ಕಾಂಗ್ರೆಸ್ ಕಲಿಯಬೇಕು. ಸಿದ್ದರಾಮಯ್ಯ, ಸಂತೋಷ್ ಲಾಡ್, ದಿನೇಶ್ ಗುಂಡೂರಾವ್, ಪ್ರಿಯಾಂಕ್ ಖರ್ಗೆ ಇವರೆಲ್ಲರ ಹೇಳಿಕೆಗೆ ಜನ ಪಾಠ ಕಲಿಸಿಯೇ ಕಲಿಸುತ್ತಾರೆ ಎಂದರು.ಇದನ್ನೂ ಓದಿ: ನಡು ರಸ್ತೆಯಲ್ಲೇ ಕಾರು ಚಾಲಕನಿಗೆ ಹಿಗ್ಗಾಮುಗ್ಗ ಥಳಿಸಿ ಮಹಿಳೆಯ ದರ್ಪ