ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ (Pahalgam Terrorist Attack) ನಡೆದ ಉಗ್ರರ ಅಟ್ಟಹಾಸಕ್ಕೆ 27 ಮಂದಿ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ. ಅವರ ನೀಚ ಕ್ರೌರ್ಯದ ಬಗ್ಗೆ ಸಿನಿಮಾ ಸ್ಟಾರ್‌ಗಳು ಖಂಡಿಸಿದ್ದಾರೆ. ಇದೀಗ ಭಾರತಾಂಬೆಯ ಕಳಶದಂತಿರುವ ಜಮ್ಮು ಮತ್ತು ಕಾಶ್ಮೀರ ಎಂದಿಗೂ ನಮ್ಮದೆ ಎಂದು ನಟ ಧ್ರುವ ಸರ್ಜಾ (Dhruva Sarja) ಎಂದು ಉಗ್ರರ ದಾಳಿ ಬಗ್ಗೆ ಖಡಕ್ ಆಗಿ ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನೂ ಓದಿ:ಪಹಲ್ಗಾಮ್‌ನಲ್ಲಿ ಅಮಾಯಕರ ನೆತ್ತರು ಹರಿಸಲಾಗಿದೆ: ಉಗ್ರರ ದಾಳಿ ಬಗ್ಗೆ ಸುದೀಪ್ ಕಿಡಿ
ಭಾರತಾಂಬೆಯ ಕಳಶದಂತಿರೋ ಜಮ್ಮು ಮತ್ತು ಕಾಶ್ಮೀರ ಎಂದಿಗೂ ನಮ್ಮದೆ..
ಪಹಲ್ಗಾಮ್ ನಲ್ಲಿ ಉಗ್ರರು, ಅಮಾಯಕರ ಮೇಲೆ ನಡೆಸಿದಂತ ಕೃತ್ಯ ಎಂದಿಗೂ ಯಾರೂ ಕ್ಷಮಿಸಲಾಗದು.
ಎಲ್ಲಾ ಧರ್ಮದ ಸಾರ ಪ್ರೀತಿ ಹಾಗೂ ಅಹಿಂಸೆ. ಪ್ರೀತಿಯಿಂದ ಸಾಧಿಸಲಾಗದ್ದು ಹಿಂಸೆ ಹಾಗೂ ದ್ವೇಷದಿಂದ ಸಾಧಿಸಲು ಸಾಧ್ಯವೇ ಇಲ್ಲ.
ಪ್ರಾಣ ಬಿಟ್ಟವರ ಆತ್ಮಕ್ಕೆ ಶಾಂತಿ ಸಿಗಲಿ… pic.twitter.com/txUq3cwVAv
— Dhruva Sarja (@DhruvaSarja) April 23, 2025
ಭಾರತಾಂಬೆಯ ಕಳಶದಂತಿರುವ ಜಮ್ಮು ಮತ್ತು ಕಾಶ್ಮೀರ ಎಂದಿಗೂ ನಮ್ಮದೆ. ಪಹಲ್ಗಾಮ್‌ನಲ್ಲಿ ಉಗ್ರರು, ಅಮಾಯಕರ ಮೇಲೆ ನಡೆಸಿದಂತ ಕೃತ್ಯ ಎಂದಿಗೂ ಯಾರೂ ಕ್ಷಮಿಸಲಾಗದು. ಎಲ್ಲಾ ಧರ್ಮದ ಸಾರ ಪ್ರೀತಿ ಹಾಗೂ ಅಹಿಂಸೆ. ಪ್ರೀತಿಯಿಂದ ಸಾಧಿಸಲಾಗದ್ದು, ಹಿಂಸೆ ಹಾಗೂ ದ್ವೇಷದಿಂದ ಸಾಧಿಸಲು ಸಾಧ್ಯವೇ ಇಲ್ಲ. ಪ್ರಾಣ ಬಿಟ್ಟವರ ಆತ್ಮಕ್ಕೆ ಶಾಂತಿ ಸಿಗಲಿ. ಕಳೆದುಕೊಂಡವರ ಕುಟುಂಬಗಳಿಗೆ ದೇವರು ಧೈರ್ಯ ಕರುಣಿಸಲಿ ಎಂದು ಧ್ರುವ ಸರ್ಜಾ (Dhruva Sarja) ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ. ಜೈ ಹಿಂದ್, ಜೈ ಭಾರತ, ಜೈ ಆಂಜನೇಯ ಎಂದು ಹೇಳಿದ್ದಾರೆ. ಇದನ್ನೂ ಓದಿ:ಮುಗ್ಧರ ಕ್ರೂರ ಹತ್ಯೆಯಿಂದ ತೀವ್ರ ದುಃಖವಾಗಿದೆ: ಪಹಲ್ಗಾಮ್ ಉಗ್ರರ ದಾಳಿ ಬಗ್ಗೆ ಯಶ್ ರಿಯಾಕ್ಷನ್
The brutal attack on innocent tourists in Pahalgam is heart-wrenching. This is not just an assault on individuals but on the spirit of our nation.
This is not the time for restraint, it’s time for a strong and clear response.
I urge @narendramodi
Ji, @AmitShah ji and DM…
— Kichcha Sudeepa (@KicchaSudeep) April 23, 2025
ಪಹಲ್ಗಾಮ್‌ನಲ್ಲಿ ಅಮಾಯಕರ ನೆತ್ತರು ಹರಿಸಲಾಗಿದೆ. ಇದು ಕೇವಲ ವ್ಯಕ್ತಿಗಳ ಮೇಲಿನ ದಾಳಿಯಲ್ಲ. ದೇಶದ ಶಕ್ತಿಯ ಮೇಲೆ ಮಾಡಲಾದ ದಾಳಿ. ಇದು ಸುಮ್ಮನಿರುವ ಸಮಯವಲ್ಲ. ಈ ಘಟನೆಗೆ ಪ್ರತಿಕ್ರಿಯೆ ಕೊಡಲೇಬೇಕು. ಈ ಹೀನ ಕೃತ್ಯದಲ್ಲಿ ಪಾಲ್ಗೊಂಡವರ ವಿರುದ್ಧ ತಕ್ಷಣ ಕ್ರಮ ವಹಿಸಿ ಅಂತಾ ಪ್ರಧಾನಿ ನರೇಂದ್ರ ಮೋದಿ, ಗೃಹಸಚಿವ ಅಮಿತ್ ಶಾ, ರಾಜನಾಥ್ ಸಿಂಗ್‌ಗೆ ಎಕ್ಸ್‌ನಲ್ಲಿ ಮೂಲಕ ಸುದೀಪ್ (Sudeep) ಮಾಡಿದ್ದಾರೆ.
Deeply saddened by the brutal killings of innocent people in Pahalgam. An attack on innocent individuals is beyond comprehension. Standing firmly with the victims’ families and the nation as we mourn this terrible tragedy.🙏
— Yash (@TheNameIsYash) April 23, 2025
ಯಶ್ (Yash) ಎಕ್ಸ್‌ನಲ್ಲಿ ಪಹಲ್ಗಾಮ್‌ನಲ್ಲಿ ಮುಗ್ಧ ಜನರ ಕ್ರೂರ ಹತ್ಯೆಯಿಂದ ತೀವ್ರ ದುಃಖವಾಗಿದೆ. ಮುಗ್ಧ ಜನರ ಮೇಲಿನ ದಾಳಿಯನ್ನು ಊಹಿಸಲು ಸಾಧ್ಯವಿಲ್ಲ. ಈ ಭೀಕರ ದುರಂತದಲ್ಲಿ ಸಂತ್ರಸ್ತರ ಕುಟುಂಬಗಳು ಮತ್ತು ರಾಷ್ಟçದೊಂದಿಗೆ ದೃಢವಾಗಿ ನಿಲ್ಲುತ್ತೇವೆ ಎಂದು ಬರೆದುಕೊಂಡಿದ್ದಾರೆ.
Deeply saddened by the brutal killings of innocent people in Pahalgam. An attack on innocent individuals is beyond comprehension. Standing firmly with the victims’ families and the nation as we mourn this terrible tragedy.🙏
— Yash (@TheNameIsYash) April 23, 2025
ಮುಗ್ಧ ಜೀವಗಳು ಪಹಲ್ಗಾಮ್‌ನಲ್ಲಿ ಬಲಿಯಾಗಿರೋದು ಕೇಳಿ ಆಘಾತವಾಗಿದೆ. ಈ ದುರಂತದಲ್ಲಿ ದುಃಖದಲ್ಲಿರುವ ಕುಟುಂಬಕ್ಕೆ ನನ್ನ ಪ್ರಾರ್ಥನೆಗಳು ಎಂದು ನಟಿ ರಾಧಿಕಾ ಪಂಡಿತ್ (Radhika Pandit) ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ಕಾಶ್ಮೀರದಲ್ಲಿ ಪ್ರವಾಸಿಗರ ಮೇಲೆ ನಡೆದಿರುವ ಉಗ್ರರ ದಾಳಿಯನ್ನ ತೀವ್ರವಾಗಿ ಖಂಡಿಸುತ್ತೇನೆ. ಶಾಂತಿ ಸೌಹಾರ್ದದ ಭಾರತದಲ್ಲಿ ಇಂತಹ ಕೃತ್ಯಗಳು ಮರುಕಳಿಸದಿರಲಿ. ಹಾಗೆಯೇ ಈ ಕೃತ್ಯ ಎಸಗಿದವರಿಗೆ ಕಠಿಣ ಶಿಕ್ಷೆ ಆಗಲಿ ಮತ್ತು ನಮ್ಮನ್ನು ಅಗಲಿದ ಎಲ್ಲಾ ಭಾರತೀಯರಿಗೆ ಭಾವಪೂರ್ಣ ಶ್ರದ್ಧಾಂಜಲಿ ಕೋರುತ್ತಾ ಎಲ್ಲಾ ಕುಟುಂಬಸ್ಥರಿಗೆ ಈ ದುಃಖವನ್ನು ಭರಿಸುವ ಶಕ್ತಿ ಹಾಗೂ ಧೈರ್ಯವನ್ನು ದೇವರು ನೀಡಲಿ. ಈ ಪೈಶಾಚಿಕ ಕೃತ್ಯ ಎಸಗುವವರ ವಿರುದ್ಧದ ಸರ್ಕಾರದ ಹೋರಾಟಕ್ಕೆ ಸದಾ ಬೆಂಬಲವಿರುತ್ತದೆ ಎಂದು ಶಿವಣ್ಣ (Shivanna) ಪ್ರತಿಕ್ರಿಯೆ ನೀಡಿದ್ದಾರೆ.
ಕನ್ನಡದ ನಟಿ ರಶ್ಮಿಕಾ ಮಂದಣ್ಣ (Rashmika Mandanna) ರಿಯಾಕ್ಟ್ ಮಾಡಿ, ನನ್ನ ಹೃದಯ ಒಡೆದಿದೆ ಎಂದು ಇನ್ಸ್ಟಾಗ್ರಾಂ ಬರೆದುಕೊಂಡಿದ್ದಾರೆ.
ಕಾಶ್ಮೀರದ ಪಹಲ್ಗಾಮ್‌ನಲ್ಲಿ ಅಮಾಯಕರ ಮೇಲೆ ನಡೆದ ಭೀಕರ ಭಯೋತ್ಪಾದಕ ದಾಳಿಯ ಬಗ್ಗೆ ಕೇಳಿ ನೋವಾಗಿದೆ. ಅವರ ಕುಟುಂಬಗಳಿಗೆ ಹೃದಯಪೂರ್ವಕ ಪ್ರಾರ್ಥನೆ ಮತ್ತು ಸಂತಾಪಗಳು. ಇದು ಎಂದಿಗೂ ಮರೆಯಲಾಗದ ಘೋರ ದಾಳಿ ಎಂದು ಬಾಲಿವುಡ್ ಬೆಡಗಿ ಅನುಷ್ಕಾ ಶರ್ಮಾ ಪ್ರತಿಕ್ರಿಯೆ ನೀಡಿದ್ದಾರೆ.