– ರಾಜ್ಯದ ಮೊದಲ 10 ಟಾಪರ್ಸ್
ನವದೆಹಲಿ: ಕೇಂದ್ರ ಲೋಕಸೇವಾ ಆಯೋಗ (UPSC) 2024ರ ನಾಗರಿಕ ಸೇವಾ ಪರೀಕ್ಷೆಯ ಅಂತಿಮ ಫಲಿತಾಂಶಗಳನ್ನು ಪ್ರಕಟಿಸಿದೆ. ಉತ್ತೀರ್ಣರಾಗಿರುವ 1009 ಅಭ್ಯರ್ಥಿಗಳ ಪೈಕಿ ಶಕ್ತಿ ದುಬೆ ದೇಶದಲ್ಲಿ ನಂಬರ್ 1 ಸ್ಥಾನ ಪಡೆದಿದ್ದಾರೆ. ಇನ್ನೂ ಟಾಪ್ 50ರ ಪಟ್ಟಿಯಲ್ಲಿ ಕರ್ನಾಟಕದ ಇಬ್ಬರು ಸ್ಥಾನ ಪಡೆದಿದ್ದಾರೆ.
ಟಾಪ್ 50ರ ಒಳಗೆ ಕರ್ನಾಟಕದ ಇಬ್ಬರು ವೈದ್ಯರು ಸೇರಿದ್ದಾರೆ. ಡಾ.ರಂಗ ಮಂಜು 24ನೇ ಮತ್ತು ಡಾ.ಸಚಿನ್ ಹರಿಹರ್ 41ನೇ ಸ್ಥಾನ ಪಡೆದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ರಾಜ್ಯದ ಟಾಪರ್ಸ್
– ಆರ್ ರಂಗರಾಜು – 24
– ಸಚಿನ್ ಹರಿಹರ – 41
– ಅನುಪ್ರಿಯಾ ಸಖ್ಯ – 120.
– ಬಿಎಂ ಮೇಘನಾ – 425.
– ಮಾಧವಿ ಆರ್ – 446
– ಭರತ್ ಸಿ ಯಾರಂ – 567
– ಡಾ.ಭಾನುಪ್ರಕಾಶ್ – 523
– ನಿಖಿಲ್ ಎಂಆರ್- 724
– ಟಿ ವಿಜಯ್ ಕುಮಾರ್ – 894.
– ಹನುಮಂತಪ್ಪ ನಂದಿ – 910.
– ವಿಶಾಕ ಕದಂ – 962
– ಸಂದೀಪ್ ಸಿಂಗ್ – 981
– ಮೋಹನ್ ಪಾಟೀಲ್ – 984
ದೇಶದ ಮೊದಲ 10 ಟಾಪರ್ಸ್: ಶಕ್ತಿ ದುಬೆ, ಹರ್ಷಿತಾ ಗೋಯೆಲ್, ಡೋಂಗ್ರೆ ಅರ್ಚಿತ್ ಪರಾಗ್, ಶಾ ಮಾರ್ಗಿ ಚಿರಾಗ್, ಆಕಾಶ್ ಗರ್ಗ್, ಕೊಮ್ಮಲ್ ಪುನಿಯಾ, ಆಯುಷಿ ಬನ್ಸಾಲ್, ರಾಜ್ ಕೃಷ್ಣ ಝಾ, ಆದಿತ್ಯ ವಿಕ್ರಮ್ ಅಗರ್ವಾಲ್, ಮಾಯಾಂಕ್ ತ್ರಿಪಾಠಿ
1009 ಅಭ್ಯರ್ಥಿಗಳು ತೇರ್ಗಡೆ: ಕೇಂದ್ರ ಲೋಕಸೇವಾ ಆಯೋಗ (UPSC) 2024ರ ನಾಗರಿಕ ಸೇವಾ ಪರೀಕ್ಷೆಯಲ್ಲಿ ಒಟ್ಟು 1,009 ಅಭ್ಯರ್ಥಿಗಳನ್ನು ನೇಮಕಾತಿಗಾಗಿ ಆಯ್ಕೆ ಮಾಡಿದೆ. ಆಯ್ಕೆಯಾದ ಅಭ್ಯರ್ಥಿಗಳಲ್ಲಿ ಸಾಮಾನ್ಯ ವರ್ಗದ 335, ಆರ್ಥಿಕವಾಗಿ ದುರ್ಬಲ ವರ್ಗ (ಇಡಬ್ಲ್ಯೂಎಸ್) 109, ಇತರ ಹಿಂದುಳಿದ ವರ್ಗಗಳು (ಒಬಿಸಿ) 318, ಪರಿಶಿಷ್ಟ ಜಾತಿ (ಎಸ್‌ಸಿ) 160 ಮತ್ತು ಪರಿಶಿಷ್ಟ ಪಂಗಡ (ಎಸ್‌ಟಿ) 87 ಸೇರಿದಂತೆ ವಿವಿಧ ವರ್ಗಗಳ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ.
ವಿಶೇಷ ಚೇತನರ ವಿಭಾಗದಿಂದ 45, ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ಅದರಲ್ಲಿ 12 ಅಭ್ಯರ್ಥಿಗಳು ಪಿಡಬ್ಲ್ಯೂಬಿಡಿ-1 (ದೃಷ್ಟಿಹೀನ), 8 ಪಿಡಬ್ಲ್ಯೂಬಿಡಿ-2 (ಶ್ರವಣದೋಷ), 16 ಪಿಡಬ್ಲ್ಯೂಬಿಡಿ-3 (ಚಲನಾ ದುರ್ಬಲತೆ) ಮತ್ತು 9 ಪಿಡಬ್ಲ್ಯೂಬಿಡಿ-5 (ಇತರ ಅಂಗವೈಕಲ್ಯ) ಅಭ್ಯರ್ಥಿಗಳಿದ್ದಾರೆ.
2024ರ ಕೇಂದ್ರ ಲೋಕಸೇವಾ ಆಯೋಗದ ಪೂರ್ವಭಾವಿ ಪರೀಕ್ಷೆಯು ಜೂನ್ 16ರಂದು ನಡೆದಿತ್ತು. 9,92,599 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರು. ಈ ಪೈಕಿ 5,83,213 ಅಭ್ಯರ್ಥಿಗಳು ಮಾತ್ರ ಪರೀಕ್ಷೆ ಬರೆದಿದ್ದರು. ಮುಖ್ಯ ಪರೀಕ್ಷೆಗೆ 14,627 ಅಭ್ಯರ್ಥಿಗಳು ಆಯ್ಕೆಯಾಗಿದ್ದರು. ಕಳೆದ ಸೆಪ್ಟೆಂಬರ್‌ನಲ್ಲಿ ಮುಖ್ಯ ಪರೀಕ್ಷೆ ನಡೆದಿತ್ತು. ಈ ಪೈಕಿ 2,845 ಅಭ್ಯರ್ಥಿಗಳು ಸಂದರ್ಶನ ಹಂತಕ್ಕೆ ಆಯ್ಕೆಯಾಗಿದ್ದರು. ಐಎಎಸ್, ಐಎಫ್‌ಎಸ್, ಐಪಿಎಸ್ ಸೇರಿದಂತೆ ಕೇಂದ್ರ ಲೋಕಸೇವಾ ಆಯೋಗ ನಡೆಸುವ ಕೇಂದ್ರ ನಾಗರಿಕ ಸೇವಾ ಪರೀಕ್ಷೆಯ ವಿವಿಧ ಹುದ್ದೆಗಳಿಗೆ ಅಂತಿಮವಾಗಿ 1,009 ಅಭ್ಯರ್ಥಿಗಳು ಆಯ್ಕೆಯಾಗಿದ್ದರು. ಈ ಪೈಕಿ 725 ಪುರುಷರು ಹಾಗೂ 284 ಮಹಿಳೆಯರು ಸೇರಿದ್ದಾರೆ.