ನವದೆಹಲಿ: ಕೇಂದ್ರ ಲೋಕಸೇವಾ ಆಯೋಗ (UPSC) 2024ರ ನಾಗರಿಕ ಸೇವೆಗಳ ಪರೀಕ್ಷೆಯ (CSE) ಫಲಿತಾಂಶವನ್ನು ಇಂದು (ಏ.22) ಪ್ರಕಟವಾಗಿದೆ. ಒಟ್ಟು 1,009 ಅಭ್ಯರ್ಥಿಗಳು ತೇರ್ಗಡೆ ಹೊಂದಿದ್ದು, 2018ರಿಂದ ಯುಪಿಎಸ್‌ಸಿ ತಯಾರಿ ನಡೆಸುತ್ತಿದ್ದ ಪ್ರಯಾಗ್‌ರಾಜ್‌ನ ಶಕ್ತಿ ದುಬೆ (Shakti Dubey) ಪ್ರಥಮ ರ‍್ಯಾಂಕ್‌ನೊಂದಿಗೆ ಅಗ್ರಸ್ಥಾನ ಪಡೆದುಕೊಂಡಿದ್ದಾರೆ. ಹರ್ಷಿತಾ ಗೋಯಲ್ 2ನೇ ರ‍್ಯಾಂಕ್ ಪಡೆದುಕೊಂಡಿದ್ದಾರೆ.
ಈ ನೇಮಕಾತಿ ಪ್ರಕ್ರಿಯೆಯಲ್ಲಿ ಒಟ್ಟು 1,129 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಈ ಪೈಕಿ ಭಾರತೀಯ ಆಡಳಿತ ಸೇವೆ (IAS) ನ 180 ಹುದ್ದೆಗಳು, ಭಾರತೀಯ ವಿದೇಶಾಂಗ ಸೇವೆ (IFS) ನ 55 ಹುದ್ದೆಗಳು ಮತ್ತು ಭಾರತೀಯ ಪೊಲೀಸ್ ಸೇವೆ (IPS) ನ 147 ಹುದ್ದೆಗಳು ಸೇರಿವೆ. ಇದನ್ನೂ ಓದಿ: ಸಂಸತ್ತೇ ಸರ್ವೋಚ್ಚ, ಚುನಾಯಿತ ಪ್ರತಿನಿಧಿಗಳು ಸಾಂವಿಧಾನಿಕ ವಿಷಯದ ಅಲ್ಟಿಮೇಟ್ ಮಾಸ್ಟರ್ಸ್: ಧನಕರ್
ಫಲಿತಾಂಶದಲ್ಲಿ ಉತ್ತರ ಪ್ರದೇಶ (Uttar Pradesh) ಪ್ರಯಾಗ್‌ರಾಜ್ ಮೂಲದ ಶಕ್ತಿ ದುಬೆ, ಯುಪಿಎಸ್‌ಸಿ ಟಾಪರ್ ಆಗಿ ಹೊರಹೊಮ್ಮಿದ್ದಾರೆ. ಅಲಹಾಬಾದ್ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದಿದ್ದ ಶಕ್ತಿ ದುಬೆ, ಬನಾರಸ್ ವಿವಿಯಲ್ಲಿ ಜೀವ ರಸಾಯನಶಾಸ್ತ್ರ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು. 2018ರಿಂದಲೂ ಯುಪಿಎಸ್‌ಸಿಗೆ ತಯಾರಿ ನಡೆಸಿದ್ದ ಶಕ್ತಿ ಪರಿಶ್ರಮಕ್ಕಿಂದು ಫಲ ಸಿಕ್ಕಿದೆ. ಇದನ್ನೂ ಓದಿ: ಪ್ರಿಯಾಂಕಾ Vs ಬಾನ್ಸುರಿ ಸ್ವರಾಜ್ – ʼNational Herald Ki Lootʼ ಕೈಚೀಲ ಹೊತ್ತು ಸಭೆಗೆ ಹಾಜರ್
ಯುಪಿಎಸ್‌ಸಿ ಟಾಪ್-10 ಟಾಪರ್ಸ್ ಯಾರು?
ಶಕ್ತಿ ದುಬೆ, ಹರ್ಷಿತಾ ಗೋಯೆಲ್, ಡೋಂಗ್ರೆ ಅರ್ಚಿತ್ ಪರಾಗ್, ಶಾ ಮಾರ್ಗಿ ಚಿರಾಗ್, ಆಕಾಶ್ ಗರ್ಗ್, ಕೋಮಲ್ ಪುನಿಯಾ, ಆಯುಷಿ ಬನ್ಸಾಲ್, ರಾಜ್ ಕೃಷ್ಣ ಝಾ, ಆದಿತ್ಯ ವಿಕ್ರಮ್ ಅಗರ್ವಾಲ್, ಮಾಯಾಂಕ್ ತ್ರಿಪಾಠಿ ಕ್ರಮವಾಗಿ ಅಗ್ರ 10 ರ‍್ಯಾಂಕ್‌ಗಳಲ್ಲಿದ್ದಾರೆ. ಇದನ್ನೂ ಓದಿ: 1 ಲಕ್ಷ ರೂ. ದಾಟಿದ ಚಿನ್ನದ ಬೆಲೆ – ಸಾರ್ವಕಾಲಿಕ ದಾಖಲೆ
1009 ಅಭ್ಯರ್ಥಿಗಳು ತೇರ್ಗಡೆ:
ಕೇಂದ್ರ ಲೋಕಸೇವಾ ಆಯೋಗ (UPSC) 2024ರ ನಾಗರಿಕ ಸೇವಾ ಪರೀಕ್ಷೆಯಲ್ಲಿ ಒಟ್ಟು 1,009 ಅಭ್ಯರ್ಥಿಗಳನ್ನು ನೇಮಕಾತಿಗಾಗಿ ಆಯ್ಕೆ ಮಾಡಿದೆ. ಆಯ್ಕೆಯಾದ ಅಭ್ಯರ್ಥಿಗಳಲ್ಲಿ ಸಾಮಾನ್ಯ ವರ್ಗದ 335, ಆರ್ಥಿಕವಾಗಿ ದುರ್ಬಲ ವರ್ಗ (ಇಡಬ್ಲ್ಯೂಎಸ್) 109, ಇತರ ಹಿಂದುಳಿದ ವರ್ಗಗಳು (ಒಬಿಸಿ) 318, ಪರಿಶಿಷ್ಟ ಜಾತಿ (ಎಸ್‌ಸಿ) 160 ಮತ್ತು ಪರಿಶಿಷ್ಟ ಪಂಗಡ (ಎಸ್‌ಟಿ) 87 ಸೇರಿದಂತೆ ವಿವಿಧ ವರ್ಗಗಳ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ.
ವಿಶೇಷ ಚೇತನರ ವಿಭಾಗದಿಂದ 45, ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ಅದರಲ್ಲಿ 12 ಅಭ್ಯರ್ಥಿಗಳು ಪಿಡಬ್ಲ್ಯೂಬಿಡಿ-1 (ದೃಷ್ಟಿಹೀನ), 8 ಪಿಡಬ್ಲ್ಯೂಬಿಡಿ-2 (ಶ್ರವಣದೋಷ), 16 ಪಿಡಬ್ಲ್ಯೂಬಿಡಿ-3 (ಚಲನಾ ದುರ್ಬಲತೆ) ಮತ್ತು 9 ಪಿಡಬ್ಲ್ಯೂಬಿಡಿ-5 (ಇತರ ಅಂಗವೈಕಲ್ಯ) ಅಭ್ಯರ್ಥಿಗಳಿದ್ದಾರೆ.