ಸ್ಮಾರ್ಟ್ ಮೀಟರ್ ಹಗರಣ ಆರೋಪ – ಸಚಿವ ಜಾರ್ಜ್ ವಿರುದ್ಧ ಲೋಕಾಯುಕ್ತಕ್ಕೆ ಬಿಜೆಪಿ ದೂರು

Public TV
1 Min Read
smart meter

ಬೆಂಗಳೂರು: ಸ್ಮಾರ್ಟ್ ಮೀಟರ್ ಹಗರಣ (Smart Meter Scam) ಆರೋಪಕ್ಕೆ ಸಂಬಂಧಪಟ್ಟಂತೆ ಲೋಕಾಯುಕ್ತಕ್ಕೆ ಬಿಜೆಪಿ (BJP) ದೂರು ನೀಡಿದೆ.

ಶಾಸಕರಾದ ಅಶ್ವಥ್ ನಾರಾಯಣ್, ಎಸ್.ಆರ್.ವಿಶ್ವನಾಥ್, ಧೀರಜ್ ಮುನಿರಾಜು ನೇತೃತ್ವದ ನಿಯೋಗದಿಂದ ಲೋಕಾಯುಕ್ತ ಕಚೇರಿಗೆ ಭೇಟಿ ನೀಡಿ, ದೂರು ಸಲ್ಲಿಸಿದ್ದಾರೆ. ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ದೂರು ನೀಡಿದ್ದು, ಇಂಧನ ಸಚಿವ ಕೆ.ಜೆ.ಜಾರ್ಜ್, ಗೌರವ್ ಗುಪ್ತಾ, ಟೆಕ್ನಿಕಲ್ ಡೈರೆಕ್ಟರ್ ಮಹಾಂತೇಶ್ & ಬಾಲಾಜಿ ಮೇಲೆ ದೂರು ನೀಡಲಾಗಿದೆ.ಇದನ್ನೂ ಓದಿ: ಚೀಟಿ ಹಣದ ವಿಚಾರಕ್ಕೆ ಗಲಾಟೆ – ಯುವಕನ ತಲೆ ಒಡೆದು ಹತ್ಯೆ

ಲೋಕಾಯುಕ್ತಕ್ಕೆ ದೂರು ನೀಡಿದ ಬಳಿಕ ಮಾತನಾಡಿದ ಶಾಸಕ ಅಶ್ವಥ್ ನಾರಾಯಣ್, ಇಂಧನ ಇಲಾಖೆ ಪ್ರಧಾನ ಕಾರ್ಯದರ್ಶಿ ಮೇಲೆ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ದೂರು ನೀಡಿದ್ದೇವೆ. ಇಂಧನ ಸಚಿವ ಕೆಜೆ ಜಾರ್ಜ್ (KJ George), ಗೌರವ್ ಗುಪ್ತಾ, ಟೆಕ್ನಿಕಲ್ ಡೈರೆಕ್ಟರ್ ಮಹಾಂತೇಶ್ & ಬಾಲಾಜಿ ವಿರುದ್ಧ ದೂರು ನೀಡಿದ್ದು, ರಾಜಶ್ರೀ ಕಂಪನಿಯ ಕಂಬ ತಯಾರಿಸುವ ಕಂಪನಿಗೆ ಸ್ಮಾರ್ಟ್ ಮೀಟರ್ ಅಳವಡಿಕೆಗೆ ಟೆಂಡರ್ ನೀಡಿದ್ದಾರೆ. ನಿಯಮಗಳ ಉಲ್ಲಂಘನೆ, ಬ್ಲಾಕ್ ಲಿಸ್ಟ್ ಕಂಪನಿಗೆ ಟೆಂಡರ್ ನೀಡಿದ್ದಾರೆ ಎಂದು ಆರೋಪಿಸಿದರು.

ಲೋಕಾಯುಕ್ತರಿಗೆ ಸವಿಸ್ತಾರವಾಗಿ ತಿಳಿಸಿದ್ದೇವೆ. ಇದನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಬೇಕಿದೆ. ಭ್ರಷ್ಟಾಚಾರದ ವಿರುದ್ಧ ನಾವು ಹೋರಾಟ ಮಾಡುತ್ತಿದ್ದೇವೆ. ಭ್ರಷ್ಟಾಚಾರ ಮುಕ್ತವಾಗಿಸಬೇಕು. ಇದೊಂದು ಬೇನಾಮಿ ಕಂಪನಿ. 9 ಸುಳ್ಳುಗಳನ್ನು ಜಾರ್ಜ್ ಹೇಳಿದ್ದಾರೆ. ಅದ್ಯಾವುದಕ್ಕೂ ಉತ್ತರವಿಲ್ಲ. ಸದನದ ಒಳಗೂ ಅಧಿಕಾರ ದುರ್ಬಳಕೆ ಮಾಡಿದ್ದಾರೆ. ಒಬ್ಬ ವ್ಯಕ್ತಿಗೆ ಟೆಂಡರ್ ಕೊಡಲು ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಕಿಡಿಕಾರಿದರು.ಇದನ್ನೂ ಓದಿ: 500 ರೂ. ಮುಖಬೆಲೆಯ ನಕಲಿ ನೋಟುಗಳ ಬಗ್ಗೆ ಹೈ ಅಲರ್ಟ್‌ – ಫೇಕ್‌ ನೋಟ್‌ ಗುರುತಿಸೋದು ಹೇಗೆ?

Share This Article