ಸಿಂಧನೂರು | ಸರ್ಕಾರಿ ಹುದ್ದೆಗಾಗಿ ನಗರಸಭೆ ಅಧ್ಯಕ್ಷೆ ಸ್ಥಾನಕ್ಕೆ ರಾಜೀನಾಮೆ

Public TV
1 Min Read
Raichur Priyanka Nayak

ರಾಯಚೂರು: ಜಿಲ್ಲೆಯ ಸಿಂಧನೂರು ನಗರಸಭೆ (Sindhanur Municipal Council) ಅಧ್ಯಕ್ಷೆ ಪ್ರಿಯಾಂಕ ನಾಯಕ್ ಸರ್ಕಾರಿ ಹುದ್ದೆಗೆ ಏರಲು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ರಾಯಚೂರು ಜಿಲ್ಲಾಧಿಕಾರಿಗಳಿಗೆ ನಗರಸಭೆ ಅಧ್ಯಕ್ಷೆ ಹಾಗೂ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ಕಾಂಗ್ರೆಸ್ ಬೆಂಬಲದೊಂದಿಗೆ ನಗರಸಭೆ ಅಧ್ಯಕ್ಷೆಯಾಗಿದ್ದ ಪ್ರಿಯಾಂಕ ನಾಯಕ್ 2025 ಫೆ.13 ರಂದು ಅಧ್ಯಕ್ಷೆಯಾಗಿ ಪದಗ್ರಹಣ ಮಾಡಿದ್ದರು. ಇಂಜಿನಿಯರಿಂಗ್ ಪದವಿಧರೆಯಾಗಿರುವ ಪ್ರಿಯಾಂಕ ಸ್ಪರ್ಧಾತ್ಮಕ ಪರೀಕ್ಷೆ (Competitive Exam) ಬರೆದಿದ್ದರು. ಹುದ್ದೆಯ ಅಂತಿಮ ಪಟ್ಟಿಯಲ್ಲಿ ಹೆಸರು ಬಂದಿದ್ದರಿಂದ ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಐತಿಹಾಸಿಕ ಕ್ಷಣ; ಯುನೆಸ್ಕೋದ ʻಮೆಮೋರಿ ಆಫ್ ದಿ ವರ್ಲ್ಡ್ ರಿಜಿಸ್ಟರ್‌ʼಗೆ ಭಗವದ್ಗೀತೆ, ನಾಟ್ಯಶಾಸ್ತ್ರ ಸೇರ್ಪಡೆ

Raichur Priyanka Nayak 3

ಅಕ್ಟೋಬರ್ ಅಂತ್ಯಕ್ಕೆ ನಗರಸಭೆ ಅಧಿಕಾರವಧಿ ಪೂರ್ಣಗೊಳ್ಳಲಿದೆ.‌ ಆದ್ರೆ ಸರ್ಕಾರಿ ಹುದ್ದೆಗೇರುವ ಭವಿಷ್ಯದ ದೃಷ್ಟಿಯಿಂದ ಅಧ್ಯಕ್ಷ ಈಗಲೇ ರಾಜೀನಾಮೆ ನೀಡಿದ್ದಾರೆ. ಇದನ್ನೂ ಓದಿ: ಹಿಂದೂಗಳ ಮೇಲಿನ ದಾಳಿಯಂತೆ ಪ್ರತಿಬಿಂಬಿಸುವ ಪ್ರಯತ್ನ – ಬಾಂಗ್ಲಾದೇಶಕ್ಕೆ ವಿದೇಶಾಂಗ ಸಚಿವಾಲಯ ತಿರುಗೇಟು

Raichur Priyanka Nayak 2

ಒಟ್ಟು 32 ಸದಸ್ಯ ಬಲದ ಸಿಂಧನೂರು ನಗರಸಭೆಯಲ್ಲಿ ಅಧ್ಯಕ್ಷ ಸ್ಥಾನ ಎಸ್‌ಟಿ ಮೀಸಲಾತಿ ಬಂದಿತ್ತು. ಕಾಂಗ್ರೆಸ್ ಪಕ್ಷದ ಸದಸ್ಯ ಬಲ 20 ಇದ್ದರೂ ಎಸ್‌ಟಿ ಸದಸ್ಯರಿರಲಿಲ್ಲ. ಜೆಡಿಎಸ್ ಸದಸ್ಯೆಯಾಗಿದ್ದ ಪ್ರಿಯಾಂಕ ನಾಯಕ್‌ಗೆ ಕಾಂಗ್ರೆಸ್ ಬೆಂಬಲ ಸಿಕ್ಕಿತ್ತು. ಅಧ್ಯಕ್ಷೆಯಾಗಿ ಎರಡು ತಿಂಗಳ ಅಧಿಕಾರವಧಿ ಪೂರೈಸಿರುವ ಪ್ರಿಯಾಂಕ ನಾಯಕ್ ಈಗ ರಾಜೀನಾಮೆ ಸಲ್ಲಿಸಿದ್ದಾರೆ. 10 ದಿನಗಳ ಒಳಗೆ ರಾಜೀನಾಮೆ ವಾಪಸ್ ಪಡೆಯದಿದ್ದರೇ ರಾಜೀನಾಮೆ ಅಂಗಿಕಾರವಾಗಲಿದೆ. ಇದನ್ನೂ ಓದಿ: ಪರೀಕ್ಷಾ ಸಿಬ್ಬಂದಿ ಜನಿವಾರ ತೆಗೆಯಬೇಕು ಅಂದಿದ್ದು ತಪ್ಪು, ಅಂತಹ ಯಾವುದೇ ಮಾರ್ಗಸೂಚಿ ಇಲ್ಲ: ಕೆಇಎ

Share This Article