ಬೆಂಗಳೂರು: ಇದೇ ಮೊದಲ ಬಾರಿಗೆ ಸಾಯಿಬಾಬಾರ ಮೂಲ ಪಾದುಕೆಗಳು ಬೆಂಗಳೂರಿನ (Bengaluru) ಸಾಯಿ ಮಂದಿರಕ್ಕೆ ಬಂದಿವೆ. ಈ ಪಾದುಕೆಯ ಆಶೀರ್ವಾದಕ್ಕೆ ಭಕ್ತರು ಸಾಲುಗಟ್ಟಿ ನಿಂತಿದ್ದು, ಇಂದು ದರ್ಶನಕ್ಕೆ ಕೊನೆಯ ದಿನವಾಗಿದೆ. ಈ ಪಾದುಕೆಯ ಮಹತ್ವ, ವಿಶೇಷದ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಶಿರಡಿ (Shiradi) ಸಂಸ್ಥಾನದ ಮೂಲ ಪಾದುಕೆಯನ್ನು ಮೊದಲ ಬಾರಿಗೆ ಬೆಂಗಳೂರಿನಲ್ಲಿ ಭಕ್ತರಿಗಾಗಿ ದರ್ಶನಕ್ಕೆ ಇಡಲಾಗಿದೆ. ಮಲ್ಲೇಶ್ವರಂನ (Malleshwaram) ಸಾಯಿ ಮಂದಿರದಲ್ಲಿ ಮೂಲ ಪಾದುಕೆಯನ್ನು ಇಟ್ಟಿದ್ದು, ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಬಂದು ದರ್ಶನ ಪಡೆದಿದ್ದಾರೆ.ಇದನ್ನೂ ಓದಿ: ಜನಿವಾರ ಹಾಕಿದ್ದಕ್ಕೆ CET ಪರೀಕ್ಷೆಗೆ ಅವಕಾಶ ಕೊಡದ ಸಿಬ್ಬಂದಿ; ಬ್ರಾಹ್ಮಣ ಸಂಘಟನೆಗಳಿಂದ ಆಕ್ರೋಶ
ಶಿರಡಿ ಸಾಯಿ ಬಾಬಾರ ಮೂಲ ಪಾದುಕೆ ಕೇವಲ ಮೂರು ಕಡೆಗಳಲ್ಲಿ ಮಾತ್ರ ಇದೆ. ಒಂದು ಸಂಸ್ಥಾನದಲ್ಲಿ, ಒಂದು ಮ್ಯೂಸಿಯಂನಲ್ಲಿ ಹಾಗೂ ಮೂರನೇಯದು ಬೆಂಗಳೂರಿನ ಸಾಯಿ ಮಂದಿರಲ್ಲಿದೆ. ಅಪರೂಪದಲ್ಲಿ ಅಪರೂಪಕ್ಕೆ ಸಿಗುವ ಈ ಮೂಲ ಪಾದುಕೆಯ ದರ್ಶನಕ್ಕೆ ಜನ ಮುಗಿಬಿದ್ದಿದ್ದಾರೆ. ಶಿರಡಿಯಿಂದ ಬಂದಿರುವ ಅರ್ಚಕರ ತಂಡವೇ ಮಧ್ಯಾಹ್ನ 12 ಗಂಟೆಗೆ ಶಿರಡಿ ಆರತಿ, ಸಂಜೆ ಆರೂವರೆಗೆ ದೂಪಾರ್ಥಿ ಪೂಜೆ ಮಾಡುತ್ತಾರೆ. ಗುರುವಾರದಿಂದ ಭಕ್ತರಿಗೆ ಅವಕಾಶ ಕಲ್ಪಿಸಿದ್ದು, ಇಂದು ಕೊನೆಯ ದಿನವಾಗಿದೆ. ಬೆಳಗ್ಗೆ 7 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ದರ್ಶನಕ್ಕೆ ಅವಕಾಶ ಇರಲಿದೆ.
ಏ.16ನೇ ತಾರೀಖಿಗೆ ಮೂಲ ಪಾದುಕೆ ಬೆಂಗಳೂರಿಗೆ ಬಂದಿದೆ. ಮಲ್ಲೇಶ್ವರಂ 18ನೇ ಅಡ್ಡರಸ್ತೆಯಿಂದ ಸಾಯಿ ಮಂದಿರಕ್ಕೆ ಮೆರವಣಿಗೆ ಮೂಲಕ ಪಾದುಕೆಯನ್ನು ಸಾಯಿ ಸನ್ನಿದಿಗೆ ತಂದು ಇಡಲಾಗಿದೆ. ಈ ಪಾದುಕೆಯನ್ನು ಕೆಲವೇ ಕೆಲವು ಸಾಯಿ ಮಂದಿರಗಳಲ್ಲಿ ಭಕ್ತರ ದರ್ಶನಕ್ಕೆ ಕಳುಹಿಸಿ ಕೊಡುವ ಧಾರ್ಮಿಕ ಪದ್ಧತಿ ಇದೆ. ಅದರಂತೆ ಈ ಬಾರಿ ಮಲ್ಲೇಶ್ವರಂನ ಸಾಯಿ ಮಂದಿರಕ್ಕೆ ಪಾದುಕೆ ಬಂದಿದ್ದು, ಭಕ್ತರು ಸಾಯಿ ಬಾಬಾರ ಕೃಪೆಗೆ ಪಾತ್ರರಾಗಿದ್ದಾರೆ.ಇದನ್ನೂ ಓದಿ: ಗರ್ಭಧರಿಸಿದ್ದ ಗೋವಿನ ಹತ್ಯೆಗೈದು ದುರುಳರ ವಿಕೃತಿ