Good Friday 2025: ಗುಡ್‌ ಫ್ರೈಡೇ ಕ್ರೈಸ್ತರ ಪವಿತ್ರ ದಿನ ಏಕೆ? ಇದರ ಇತಿಹಾಸ ನೀವೂ ತಿಳಿಯಿರಿ…

Public TV
2 Min Read
WhatsApp Image 2025 04 17 at 15.31.14

ಕ್ರೈಸ್ತ ಸಮುದಾಯದವರು ಆಚರಿಸುವ ಪ್ರಮುಖ ಹಬ್ಬಗಳಲ್ಲಿ ಗುಡ್‌ ಫ್ರೈಡೇ (Good Friday 2025) ಸಹ ಒಂದು. ಇದು ಕ್ರೈಸ್ತ ಸಮುದಾಯದವರಿಗೆ ಮಹತ್ತರ ದಿನವಾಗಿದೆ. ಏಕೆಂದರೆ ಈ ದಿನ ಏಸು ಕ್ರಿಸ್ತನನ್ನು ಶಿಲುಬೆಗೇರಿಸಲಾಯಿತು. ಪ್ರಸಕ್ತ ವರ್ಷದಲ್ಲಿ ಗುಡ್‌ಫ್ರೈಡೇ ಅನ್ನು ಏಪ್ರಿಲ್‌ 18ರಂದು ಆಚರಿಸಲಾಗುತ್ತಿದೆ. ಕರ್ನಾಟಕದಲ್ಲಿಯೂ ಕ್ರೈಸ್ತ ಬಾಂಧವರು (Christian) ಅಂದು ಚರ್ಚ್‌ಗಳಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸುತ್ತಾರೆ.

ಗುಡ್‌ ಫ್ರೈಡೇ ದಿನದಂದು ಕ್ರೈಸ್ತರು ಚರ್ಚ್‌ಗಳಿಗೆ ಭೇಟಿ ನೀಡುವ ಮೂಲಕ ಶುಭ ಶುಕ್ರವಾರದ ಆಚರಣೆಯಲ್ಲಿ ತೊಡಗುತ್ತಾರೆ. ಪ್ರತಿ ವರ್ಷ ಈಸ್ಟರ್‌ಗೂ ಮುನ್ನ ಶುಕ್ರವಾರವನ್ನು ʻಗುಡ್‌ಫ್ರೈಡೇʼ ಎಂದು ಆಚರಿಸಲಾಗುತ್ತೆ. ಹಾಗಿದ್ದರೇ ಇಂದಿನ ಗುಡ್‌ ಫ್ರೈಡೇಯ ಬಗ್ಗೆ ಯಾವೆಲ್ಲಾ ವಿಚಾರಗಳನ್ನು ತಿಳಿದುಕೊಳ್ಳಬೇಕು ನೋಡಿ..

Good Friday 2025 4

ಗುಡ್‌ ಫ್ರೈಡೇ ಶುಕ್ರವಾರವೇ ಏಕೆ ಆಚರಿಸಬೇಕು?
ಯರೂಶಲಂ ಅಥವಾ ಜೆರುಸಲೇಂನಲ್ಲಿ ಯೇಸು ಕ್ರಿಸ್ತನ ವಿರುದ್ಧ ಸಂಚು ರೂಪಿಸಿ ಮೋಸದಿಂದ ಶುಕ್ರವಾರದ ದಿನದಂದು ಶಿಲುಬೆಗೇರಿಸಲಾಯಿತು. ಈ ಶಿಲುಬೆಗೇರಿಸಿದ ಘಟನೆಯನ್ನು ಗುಡ್‌ ಫ್ರೈಡೇ ಎಂದು ಕರೆಯಲಾಗುತ್ತದೆ. ಈ ಘಟನೆಯನ್ನು ಕ್ರಿಶ್ಚಿಯನ್‌ ಧರ್ಮದ ಪ್ರಮುಖ ಧಾರ್ಮಿಕ ಗ್ರಂಥವಾದ ಬೈಬಲ್‌ನ ಜಾನ್ – 18, 19 ರಲ್ಲಿ ವಿವರವಾಗಿ ವಿವರಿಸಲಾಗಿದೆ. ಗುಡ್‌ ಫ್ರೈಡೇಯು ಯೇಸುವಿನ ಮರಣದ ದಿನವಾಗಿದೆ.

Good Friday 2025 2

ಯೇಸುವನ್ನು ಶಿಲುಬೆಗೇರಿಸಲು ಕಾರಣವೇನು?
ನಂಬಿಕೆಯ ಪ್ರಕಾರ, ಅವರು ಪ್ರವಾದಿತ್ವವನ್ನು ಹೊಂದಿದ್ದರು, ಇದರಿಂದಾಗಿ ಯಹೂದಿಗಳಲ್ಲಿ ಯೇಸುವಿನ ಬಗ್ಗೆ ದ್ವೇಷ ಹುಟ್ಟಿಕೊಂಡಿತು. ಪ್ರವಾದಿತ್ವ ಎಂದರೆ ಒಬ್ಬರ ಪ್ರವಾದಿತ್ವದ ಬಗ್ಗೆ ಮಾತನಾಡುವುದು. ಯಹೂದಿಗಳ ಮೂಲಭೂತವಾದಿಗಳು ಯೇಸುಕ್ರಿಸ್ತನು ತನ್ನನ್ನು ದೇವರ ಮಗ ಎಂದು ಕರೆದುಕೊಳ್ಳುವುದನ್ನು ಅವರು ಇಷ್ಟಪಡಲಿಲ್ಲ. ಅವರು ರೋಮನ್ನರಿಗೆ ಈ ಬಗ್ಗೆ ದೂರು ನೀಡಿದರು ಮತ್ತು ಶಿಲುಬೆಗೇರಿಸಿಬೇಕೆಂದು ಬೇಡಿಕೆಯನ್ನಿಟ್ಟರು.

ಮತ್ತೊಂದು ನಂಬಿಕೆಯ ಪ್ರಕಾರ, ಚರ್ಚ್‌ನಲ್ಲಿ ರೋಮನ್‌ ತೆರಿಗೆದಾರರು ಅಸಭ್ಯ ವರ್ತನೆ ಮಾಡುತ್ತಿರುವುದನ್ನು ನೋಡಿರುತ್ತಾನೆ. ಇದರಿಂದ ದುಃಖಿತನಾದ ಯೇಸು ಅವರನ್ನು ಅಲ್ಲಿಂದ ಹೊಡೆದೋಡಿಸುತ್ತಾನೆ. ಪರಿಣಾಮವಾಗಿ, ರೋಮನ್ ಗವರ್ನರ್ ಯೇಸುವನ್ನು ಶಿಲುಬೆಗೇರಿಸುವ ಶಿಕ್ಷೆಯನ್ನು ವಿಧಿಸುತ್ತಾನೆ.

Good Friday 2025

ಯೇಸುವನ್ನು ಶಿಲುಬೆಗೇರಿಸಿದ್ದು ಎಲ್ಲಿ?
ಯೇಸುಕ್ರಿಸ್ತನನ್ನು ಶಿಲುಬೆಗೇರಿಸಿದ ಸ್ಥಳವನ್ನು ಗೊಲ್ಗೊಥಾ ಎಂದು ಕರೆಯಲಾಗುತ್ತದೆ. ಈ ಸ್ಥಳವು ಇಸ್ರೇಲ್ ರಾಜಧಾನಿ ಜೆರುಸಲೆಂನ ಕ್ರಿಶ್ಚಿಯನ್ ಪ್ರದೇಶದಲ್ಲಿದೆ. ಈ ಸ್ಥಳವನ್ನೇ ಹಿಲ್ ಆಫ್ ದಿ ಕ್ಯಾಲ್ವರಿ ಎಂದು ಕರೆಯಲಾಗುತ್ತದೆ. ಈ ಸ್ಥಳದಲ್ಲಿ ಫ್ಲ್ಯಾಗೆಲೇಷನ್ ಚರ್ಚ್ ಇದೆ.

ನೀವು ತಿಳಿಯಲೇಬೇಕಾದ ಯೇಸುವಿನ ಅಮರ ವ್ಯಾಖ್ಯಾನಗಳು
– ಮೊದಲ ಪದ: ತಂದೆಯೇ, ಅವರನ್ನು ಕ್ಷಮಿಸಿ, ಏಕೆಂದರೆ ಅವರು ಏನು ಮಾಡುತ್ತಿದ್ದಾರೆಂದು ಅವರಿಗೆ ತಿಳಿದಿಲ್ಲ.
– ಎರಡನೆಯ ಪದ: ಇಂದು ನೀವು ನನ್ನೊಂದಿಗೆ ಸ್ವರ್ಗದಲ್ಲಿ ಇರುವಿರಿ ಎಂದು ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ.
– ಮೂರನೆಯ ಪದ: ಓ ತಾಯಿ ನಿನ್ನ ಮಗನ ಸ್ಥಿತಿಯನ್ನು ನೋಡು.
– ನಾಲ್ಕನೆಯ ಪದ: ನನ್ನ ದೇವರೇ, ನನ್ನ ದೇವರೇ, ನೀನು ನನ್ನನ್ನು ಏಕೆ ಕೈಬಿಟ್ಟೆ?
– ಐದನೇ ಧ್ವನಿ: ನನಗೆ ಬಾಯಾರಿಕೆಯಾಗುತ್ತಿದೆ.
– ಆರನೇ ಧ್ವನಿ: ಎಲ್ಲವೂ ಮುಗಿದಿದೆ.

Share This Article