ಕೋಲಾರ: ಜಾತಿಗಣತಿ (Caste Census) ಬಗ್ಗೆ ಕ್ಷುಲ್ಲಕ ಕಾರಣಕ್ಕೆ ರಾಜಕೀಯ ಮಾಡುವ ಬಿಜೆಪಿಗೆ (BJP) ಮಾನ ಮರ್ಯಾದೆ ಇಲ್ಲ, ಅವರಿಗೆ ಮಾತನಾಡುವ ಯೋಗ್ಯತೆ ಇಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬೈರತಿ (Byrathi Suresh) ಸುರೇಶ್ ಕಿಡಿ ಕಾರಿದರು.
ಕೋಲಾರದ (Kolar) ಪ್ರವಾಸಿ ಮಂದಿರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇಷ್ಟು ದಿನ ಜಾತಿಗಣತಿ ಫ್ರೀಜರ್‌ನಲ್ಲಿದೆ ಎಂದು ಮಾತನಾಡುತ್ತಿದ್ದರು. ಆದರೆ ಈಗ ಜಾತಿ ಗಣತಿಗೆ ವಿರೋಧವಾಗಿ ಮಾತನಾಡುವುದು ಸರಿಯಲ್ಲ. ರಾಜ್ಯದಲ್ಲಿ ಲಿಂಗಾಯತರು ಮೊದಲ ಸ್ಥಾನದಲ್ಲಿದ್ದಾರೆ. ಒಕ್ಕಲಿಗರು ಎರಡನೆ ಸ್ಥಾನದಲ್ಲಿದ್ದಾರೆ. ಜಾತಿ ಗಣತಿಯಲ್ಲಿ 2 ಲಕ್ಷ ಜನ ಭಾಗಿಯಾಗಿ ತಯಾರಿಸಿರುವ ವರದಿ ಇದಾಗಿದೆ. ಜಾತಿ ಗಣತಿಯಲ್ಲಿ ಶಿಕ್ಷಕರನ್ನು ಬಳಸಿಕೊಳ್ಳಲಾಗಿದೆ. ಇದರಲ್ಲಿ ಒಂದೇ ಸಮುದಾಯದವರೆ ಇದ್ದಾರ, ಅವರು ಕೊಟ್ಟ ವರದಿ ಸುಳ್ಳಾ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಜಾತಿಗಣತಿ ವರದಿ ಅವೈಜ್ಞಾನಿಕ, ತಪ್ಪು ಎಂಬುದೆಲ್ಲಾ ಸಮಾಜ ದ್ರೋಹಿ ಮಾತುಗಳು: ಹೆಚ್.ಕೆ.ಪಾಟೀಲ್
ರಾಜ್ಯದಲ್ಲಿ ಯಾವ ಜನ ಎಷ್ಟು ಇದ್ದಾರೆ ಅನ್ನೋದು ಇದರಿಂದ ತಿಳಿಯಲಿದೆ. ಇನ್ನೂ 95% ರಷ್ಟು ಜನರಿಗೆ ಜಾತಿಗಣತಿಯಿಂದ ಖುಷಿ ಆಗಿದೆ. ಆದರೆ ಬಿಜೆಪಿಯವರಿಗೆ ಮಾಡುವ ಯೋಗ್ಯತೆ ಇಲ್ಲ, ಏನಾದರೂ ಮಾಡಿದ್ರೆ ಸಹಿಸಿಕೊಳ್ಳಲ್ಲ. ಈ ಹಿಂದೆ ಗ್ಯಾರಂಟಿಗಳನ್ನು ಕೊಟ್ಟಾಗ ಹೀಗೆಯೇ ಮಾತನಾಡಿದ್ದರು. ಲೋಕಸಭೆ ಚುನಾವಣೆಗೆ ನಿಲ್ಲುತ್ತದೆ ಎಂದು ಹೇಳಿದ್ದರು. ಆದರೆ ಈಗ ಎಲ್ಲರಿಗೂ ಗ್ಯಾರಂಟಿ ಸಿಗುತ್ತಿದೆ. ರಾಜ್ಯದ ಜನರೆಲ್ಲರೂ ಖುಷಿಯಾಗಿದ್ದಾರೆ, ನನ್ನ ವೈಯುಕ್ತಿಕವಾಗಿ ಇದು ಸರಿಯಿದೆ ಎಂದರು. ಇದನ್ನೂ ಓದಿ: ಮೊಬೈಲ್ ವಿಚಾರಕ್ಕೆ ಗಲಾಟೆ – ತಂದೆ ಎದೆಗೆ ಚೂರಿ ಹಾಕಿ ಕೊಂದ ಮಗ
ನನ್ನ ವೈಯಕ್ತಿಕ ವಿಚಾರ ಹೇಳುವುದಾದರೇ, ಜಾತಿಗಣತಿಗೆ ನನ್ನ ಒಪ್ಪಿಗೆ ಇದೆ. ಇದೇ 17ರಂದು ಎಲ್ಲಾ ಸಚಿವರ ಅಭಿಪ್ರಾಯ ಸಂಗ್ರಹ ಮಾಡಲಾಗುವುದು. ಇದರಲ್ಲಿ ನನ್ನ ಒಪ್ಪಿಗೆ ಇದೆ. ಅಲ್ಲದೇ ಇದೇ ತಿಂಗಳ 17ರಂದು ವಿಶೇಷ ಸಚಿವ ಸಂಪುಟ ಸಭೆಯನ್ನ ಕರೆಯಲಾಗಿದೆ. ಇದರಲ್ಲಿ ಎಲ್ಲಾ ಸಚಿವರು ಜಾತಿಗಣತಿಗೆ ಒಪ್ಪಿಗೆ ಸೂಚಿಸುವ ನಿರೀಕ್ಷೆ ಇದೆ. ನನ್ನ ಸಮುದಾಯ 55 ಲಕ್ಷ ಇರಬಹುದೆಂಬ ನಿರೀಕ್ಷೆ ಇತ್ತು. ಆದರೆ ವರದಿಯಲ್ಲಿ 45 ಲಕ್ಷ ಇದೆ. ಆದರೂ ಅದನ್ನು ಒಪ್ಪಿಕೊಂಡಿದ್ದೇನೆ ಎಂದು ಹೇಳಿದರು. ಇದನ್ನೂ ಓದಿ: ಇದು ಜಾತ್ಯಾತೀತ ರಾಷ್ಟ್ರ, ಜಾತಿಗಣತಿಗೆ ಯಾವುದೇ ಮಹತ್ವ ಇಲ್ಲ: ಡಾ.ಮಂಜುನಾಥ್