ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್‌ಗೆ (Shiva Rajkumar) ಸಿನಿಮಾ ಹೊರತುಪಡಿಸಿ ಕ್ರಿಕೆಟ್ ಮೇಲೆಯೂ ಅಪಾರ ಅಭಿಮಾನವಿದೆ. ಇದೀಗ ಆರ್‌ಸಿಬಿ ಮತ್ತು ಕ್ರಿಕೆಟಿಗ್ ಕೆ.ಎಲ್ ರಾಹುಲ್ ಬಗ್ಗೆ ಮಾತನಾಡಿದ್ದಾರೆ. ಕೆ.ಎಲ್ ರಾಹುಲ್ (K L Rahul) ಬ್ಯಾಟಿಂಗ್ ತುಂಬಾನೇ ಇಷ್ಟ ಎಂದಿದ್ದಾರೆ. ಇದನ್ನೂ ಓದಿ:ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಲಿದ್ದಾರೆ ರವಿತೇಜ ಪುತ್ರಿ
RCB ಬೆಂಗಳೂರನ್ನು ಪ್ರತಿನಿಧಿಸುತ್ತದೆ. ಆರ್‌ಸಿಬಿ ಅಂದ್ರೆ ಪ್ರೀತಿ ಇದ್ದೆ ಇರುತ್ತದೆ. ಆಟದಲ್ಲಿ ಸೋಲು ಗೆಲುವು ಬರಲ್ಲ. ಆದರೆ ಅಭಿಮಾನ ಅಂತೂ ಹೋಗಲ್ಲ. ಅದು ಯಾವಾಗಲೂ ಇದ್ದೇ ಇರುತ್ತದೆ. ಅದೇ ಆರ್‌ಸಿಬಿ ಪವರ್ ಎಂದಿದ್ದಾರೆ ಶಿವಣ್ಣ. ಇದನ್ನೂ ಓದಿ:RCB ಅಂದ್ರೆ ಜೀವ, ನಮ್ಮ ಪ್ರಾಣ: ಶಿವಣ್ಣ ಗುಣಗಾನ
ಕೆ.ಎಲ್ ರಾಹುಲ್ ಹೋಂ ಗ್ರೌಂಡ್ ವೈರಲ್ ವಿಡಿಯೋ ಬಗ್ಗೆ ಶಿವಣ್ಣ ಪ್ರತಿಕ್ರಿಯಿಸಿ, ರಾಹುಲ್ ಕರ್ನಾಟಕದವರು. ಅವರು ಎಲ್ಲೇ ಆಡಿದ್ರು, ಕರ್ನಾಟಕದವರು ತಾನೇ ಎಂದಿದ್ದಾರೆ. ನನಗೆ ಅವರ ಬ್ಯಾಟಿಂಗ್ ತುಂಬಾ ಇಷ್ಟ. ಆವರು ಆಡಿದಾಗಲೆಲ್ಲಾ ಔಟೇ ಆಗಬಾರದು ಎಂದುಕೊಳ್ಳುತ್ತಿರುತ್ತೇನೆ. ವಿರಾಟ್ ಕೊಹ್ಲಿ ಚೆನ್ನಾಗಿ ಆಡ್ತಾರೆ. ಹಾಗೆಯೇ ರಾಹುಲ್ ಬ್ಯಾಟಿಂಗ್ ಸ್ಟೈಲ್ ನೋಡಿದಾಗ ಹೆಮ್ಮೆ ಎಂದೆನಿಸುತ್ತದೆ. ಯಾರ್ ಗೆದ್ರೂ ಕೂಡ ಕಪ್ ಇಂಡಿಯಾದಲ್ಲೇ ಇರುತ್ತದೆ ಎಂದು ಶಿವಣ್ಣ ಹೇಳಿದ್ದಾರೆ.
ಅಂದಹಾಗೆ, ಏ.10ರಂದು ನಡೆದ ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಗೆಲುವು ಸಾಧಿಸಿತ್ತು. ಗೆಲುವಿನ ಸಂಭ್ರಮದಲ್ಲಿ ಕನ್ನಡಿಗ ಕೆ.ಎಲ್ ರಾಹುಲ್ ಸ್ಪೆಷಲ್ ಸಿಗ್ನೇಚರ್ ಸ್ಟೈಲ್ ಮಾಡಿದ್ದರು. ಬಳಿಕ ‘ಕಾಂತಾರ’ ನನ್ನ ಫೆವರಿಟ್ ಸಿನಿಮಾ. ಸಿನಿಮಾದಲ್ಲಿರುವಂತೆ ಮಾಡಿದೆ ಎಂದು ಅವರು ಹೇಳಿಕೊಂಡಿದ್ದರು.
ಹೊಸ ಸ್ಟೈಲ್ ಹಿಂದಿನ ಕಾರಣವನ್ನು ಬಿಚ್ಚಿಟ್ಟಿರುವ ಕೆಎಲ್ ರಾಹುಲ್, ಇದು ನನಗೆ ವಿಶೇಷವಾದ ಜಾಗ, ಕಾಂತಾರ ಸಿನಿಮಾ ನೆನಪಿಸಿಕೊಂಡೆ. ನಾನು ಸಿನಿಮಾ ನೋಡಿದ್ದೇನೆ. ಸಿನಿಮಾದ ದೃಶ್ಯವೊಂದು ನನ್ನೊಳಗೆ ಹಾಗೆಯೇ ಇದೆ. ಪಂದ್ಯದಲ್ಲಿ ಗೆದ್ದಾಗ ನನಗೆ ಆ ಸಿನಿಮಾದ ದೃಶ್ಯ ನೆನಪಾಯಿತು. ಹಾಗಾಗಿ ನಾನು ಅದೇ ರೀತಿ ಮಾಡಿದೆ. ಅದು ನನ್ನ ನೆಚ್ಚಿನ ಸಿನಿಮಾ. ಈ ಕ್ರೀಡಾಂಗಣ, ಈ ನೆಲ ಇದೆಲ್ಲ ನಾನು ಹುಟ್ಟಿ ಬೆಳೆದ ಜಾಗ. ಇದೆಲ್ಲ ನನ್ನದು ಎಂದಿದ್ದರು.