1 ಲಕ್ಷ ಪಾವತಿಸಿ ಶೂಟಿಂಗ್‌ | ಗೋಪಾಲಸ್ವಾಮಿ ಬೆಟ್ಟದ ಜಾಗ ಯಾರಿಗೆ ಸೇರಿದ್ದು? ಈಗ ಮತ್ತೊಂದು ವಿವಾದ

Public TV
2 Min Read
Film shooting at Himavad Gopalaswamy Betta Mujurai Department says no permission has been given for shooting Pennu Case 1

– ಸ್ಥಳ ಮುಜುರಾಯಿ ಇಲಾಖೆಗೆ ಸೇರಿದ್ದಾ? ಅರಣ್ಯ ಇಲಾಖೆಗೆ ಸೇರಿದ್ದಾ?

ಚಾಮರಾಜನಗರ: ಬಂಡೀಪುರದ ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ (Himavad Gopalaswamy Betta) ನಡೆದ ಮಲಯಾಳಂ ಚಿತ್ರದ (Malayalam Film) ಶೂಟಿಂಗ್ ವಿಚಾರ ವಿವಾದ ಸ್ವರೂಪ ಪಡೆದಿದೆ. ಚಿತ್ರೀಕರಣ ನಡೆದ ಸ್ಥಳ ಮುಜುರಾಯಿ ಇಲಾಖೆಗೆ (Muzrai) ಸೇರಿದ್ದಾ ಅಥವಾ ಅರಣ್ಯ (Forest) ಇಲಾಖೆಗೆ ಸೇರಿದ್ದಾ ಎಂಬ ಪ್ರಶ್ನೆ ಎದ್ದಿದೆ.

ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತಾರಣ್ಯದ ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಕೇರಳದ ಪೆಣ್ಣು ಕೇಸ್ (Pennu Case) ಸಿನಿಮಾ ಚಿತ್ರೀಕರಣ ನಡೆದಿತ್ತು. ಇದನ್ನೂ ಓದಿ: ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಚಿತ್ರೀಕರಣಕ್ಕೆ ಅವಕಾಶ ನೀಡಿದ್ದು ಹೇಗೆ?- ಬಂಡೀಪುರದ ಎಸಿಎಫ್ ಸ್ಪಷ್ಟನೆ

Film shooting at Himavad Gopalaswamy Betta Mujurai Department says no permission has been given for shooting Pennu Case 3

ಶೂಟಿಂಗ್‌ಗೆ ಅವಕಾಶ ಕೊಡುವ ವೇಳೆ ಸರ್ಕಾರದ ಅಧೀನ ಕಾರ್ಯದರ್ಶಿಯವರು ಅರಣ್ಯ ಪರಿಸ್ಥಿತಿ ಮತ್ತು ಜೀವಿಶಾಸ್ತ್ರ ಇಲಾಖೆಯ ಪತ್ರದ ಸೂಚನೆ ಮೇರೆಗೆ ನಿಷೇಧಿತ ಪ್ರದೇಶ ಹೊರತುಪಡಿಸಿ ಜೊತೆಗೆ ವನ್ಯಜೀವಿ ಸಂರಕ್ಷಣೆ ಕಾಯ್ದೆಯಡಿ ವನ್ಯ ಪ್ರಾಣಿಗಳಿಗೆ ಧಕ್ಕೆಯಾಗದಂತೆ ವಲಯ ಅರಣ್ಯಾಧಿಕಾರಿಗಳ ಸಮ್ಮುಖದಲ್ಲಿ ಷರತ್ತಿಗೆ ಒಳಪಟ್ಟು ಚಿತ್ರೀಕರಿಸುವಂತೆ ಅನುಮತಿ ಕೊಟ್ಟಿದ್ದಾರೆ. ಅಲ್ಲದೇ ಚಿತ್ರೀಕರಣ ತಂಡದ ಬಳಿ ಒಂದು ಲಕ್ಷ ರೂ. ಶುಲ್ಕವನ್ನು ಸಹ ಕಟ್ಟಿಸಿಕೊಂಡಿದ್ದಾರೆ. ಇದನ್ನೂ ಓದಿ:ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಮಲಯಾಳಂ ಸಿನಿಮಾ ಚಿತ್ರೀಕರಣಕ್ಕೆ ಅನುಮತಿ – ಸರ್ಕಾರದ ವಿರುದ್ಧ ಸ್ಥಳೀಯರ ಆಕ್ರೋಶ

Film shooting at Himavad Gopalaswamy Betta Mujurai Department says no permission has been given for shooting Pennu Case 2

ಅರಣ್ಯಾಧಿಕಾರಿಗಳ ಸಾರ್ವಜನಿಕ ಪ್ರಕಟಣೆ ಅನ್ವಯ ಶೂಟಿಂಗ್ ನಡೆದಿದ್ದು ನಿಷೇಧಿತ ಪ್ರದೇಶ ಅಲ್ಲದಿದ್ದರೆ ಅದು ಮುಜರಾಯಿ ಇಲಾಖೆಯ ಸ್ಥಳವೇ ಎಂಬ ಅನುಮಾನ ಹುಟ್ಟಿಸಿದೆ. ಈ ಬಗ್ಗೆ ಗುಂಡ್ಲುಪೇಟೆ ತಹಶೀಲ್ದಾರ್ ರಮೇಶ್ ಬಾಬು ಅವರನ್ನು ಕೇಳಿದ್ರೆ ಮುಜರಾಯಿ ಇಲಾಖೆಯಿಂದ ಯಾವುದೇ ಅನುಮತಿ ಕೊಟ್ಟಿಲ್ಲ. ಯಾರೂ ಕೂಡ ನಮ್ಮ ಅನುಮತಿಯನ್ನು ಕೇಳಿಲ್ಲ. ಸದ್ಯ ನಮ್ಮನ್ನು ಎಳೆದು ತರುವ ಪ್ರಯತ್ನವಾಗುತ್ತಿದೆ ಎಂದಿದ್ದಾರೆ.

ಒಟ್ಟಿನಲ್ಲಿ ಅರಣ್ಯ ಇಲಾಖೆ ಯಾರದೋ ಮಾತಿಗೆ ಕಟ್ಟು ಬಿದ್ದು ಅನುಮತಿ ನೀಡಿ ಈಗ ವಿವಾದವನ್ನು ಮೈಮೇಲೆ ಎಳೆದುಕೊಂಡಿದೆ. ನಾವು ನಿಷೇಧಿತ ಪ್ರದೇಶದಲ್ಲಿ ಶೂಟಿಂಗ್ ನಡೆಸಲು ಅನುಮತಿ ಕೊಟ್ಟಿಲ್ಲ ಎಂಬ ಸಮರ್ಥನೆ ಬೇರೆ ಮಾಡಿಕೊಳ್ಳುತ್ತಿದೆ. ಶೂಟಿಂಗ್ ನಡೆದ ಸ್ಥಳ ನಿಷೇಧಿತ ಸ್ಥಳ ಅಲ್ಲವಾದರೆ ಆ ಜಾಗ ಮುಜರಾಯಿ ಇಲಾಖೆ ವ್ಯಾಪ್ತಿಗೆ ಸೇರಿದ್ದಾ ಅಥವಾ ಅರಣ್ಯ ಇಲಾಖೆಗೆ ಸೇರಿದ್ದ ಜಾಗ ಎಂಬ ಹೊಸ ಚರ್ಚೆ ಹುಟ್ಟುಹಾಕಿದೆ.

 

Share This Article