ವಾಷಿಂಗ್ಟನ್: ನೀವೇ ದೇಶವನ್ನು ತೊರೆಯಿರಿ ಅಥವಾ ಜೈಲು ಶಿಕ್ಷೆಯನ್ನು ಅನುಭವಿಸಿ ಎಂದು ಅಮೆರಿಕ (USA) ವಿದೇಶಿ ಉಗ್ರರಿಗೆ ಎಚ್ಚರಿಕೆ ನೀಡಿದೆ.
ಟ್ರಂಪ್ (Donald Trump) ಆಡಳಿತವು ಏಲಿಯನ್ ಎನಿಮೀಸ್ ಆಕ್ಟ್ (AEA) ಬಳಸಿ ಗಡಿಪಾರು ಮಾಡುವುದನ್ನು ತಾತ್ಕಾಲಿಕವಾಗಿ ತಡೆಯುವ ಜಿಲ್ಲಾ ನ್ಯಾಯಾಲಯದ ತೀರ್ಪನ್ನು ಯುಎಸ್ ಸುಪ್ರೀಂ ಕೋರ್ಟ್ (Supreme Court) ರದ್ದುಗೊಳಿಸಿದ ಬೆನ್ನಲ್ಲೇ ಶ್ವೇತ ಭವನ (White House) ವಿದೇಶಿ ಉಗ್ರರಿಗೆ ವಾರ್ನಿಂಗ್ ನೀಡಿದೆ.
ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕ್ಯಾರೋಲಿನ್ ಲೀವಿಟ್ (Karoline Leavitt) ಮಾತನಾಡಿ, ಸುಪ್ರೀಂ ಕೋರ್ಟ್ ಟ್ರಂಪ್ ಆಡಳಿತಕ್ಕೆ ಭಾರಿ ಕಾನೂನು ಜಯವನ್ನು ನೀಡಿದೆ. ಏಲಿಯನ್ ಎನಿಮೀಸ್ ಆಕ್ಟ್ ಅಡಿಯಲ್ಲಿ ವಿದೇಶಿ ಭಯೋತ್ಪಾದಕರನ್ನು ದೇಶದಿಂದ ಹೊರ ಹಾಕಲು ನಮಗೆ ಅವಕಾಶ ಮಾಡಿಕೊಟ್ಟಿದೆ. ಇದರಿಂದ ರಾಕ್ಷಸ, ಎಡಪಂಥೀಯ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರಿಗೆ ದೊಡ್ಡ ಹೊಡೆತ ಬಿದ್ದಿದೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಮುಂಬೈ ದಾಳಿಕೋರ ಅಮೆರಿಕದಿಂದ ಗಡಿಪಾರು – ನಾಳೆ ಬೆಳಗ್ಗೆ ಭಾರತಕ್ಕೆ ರಾಣಾ
🚨NEW: Karoline Leavitt: “The highest court in the land made it clear that the President of the United States has the power to protect our homeland and forcibly remove foreign terrorists who pose a grave threat to families and communities.” pic.twitter.com/joNnTVOPh9
— Derrick Evans (@DerrickEvans4WV) April 8, 2025
ಅಮೆರಿಕದಲ್ಲಿ ನೆಲೆಸಿರುವ ಉಗ್ರರು ಅವರಾಗಿಯೇ ದೇಶ ತೊರೆಯಬೇಕು. ಇಲ್ಲದಿದ್ದರೆ ಬಂಧಿಸಿ ಅವರ ದೇಶಕ್ಕೆ ಕಳುಹಿಸಿ ಕೊಡಲಾಗುವುದು ಎಂದು ಕ್ಯಾರೋಲಿನ್ ಲೀವಿಟ್ ಕಟು ಪದಗಳಿಂದ ಎಚ್ಚರಿಕೆ ನೀಡಿದರು. ಇದನ್ನೂ ಓದಿ: ಸತತ 2ನೇ ಬಾರಿ ರೆಪೋ ದರ ಕಡಿತ – ಇಳಿಕೆಯಾಗಲಿದೆ ಗೃಹ ಸಾಲ, ಇಎಂಐ
ವೆನೆಜುವೆಲಾದ ಜನರನ್ನು ಗಡೀಪಾರು ಮಾಡಲು ಟ್ರಂಪ್ ಆಡಳಿತವು ಏಲಿಯನ್ ಎನಿಮೀಸ್ ಆಕ್ಟ್ (ಎಇಎ) ಬಳಸಿತ್ತು. ಆದರೆ ಜಿಲ್ಲಾ ನ್ಯಾಯಾಲಯ ಟ್ರಂಪ್ ಸರ್ಕಾರದ ಆದೇಶವನ್ನು ತಾತ್ಕಾಲಿಕವಾಗಿ ತಡೆ ಹಿಡಿದಿತ್ತು.